ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr. M.C. Sudhakar: ಮುಖ್ಯಮಂತ್ರಿಗಳು ಎಲ್ಲಾ ಸಮಾಜಕ್ಕೂ ಸಮಾನ ಅವಕಾಶ ನೀಡಿದ್ದಾರೆ, ಬ್ರಾಹ್ಮಣ ಸಮುದಾಯ ಉಪಕಾರ ಮರೆಯಬಾರದು : ಡಾ.ಎಂ.ಸಿ.ಸುಧಾಕರ್

ಬ್ರಾಹ್ಮಣ ಸಮುದಾಯದವರೆಂದರೆ ಬುದ್ದಿವಂತರು ಆರ್ಥಿಕವಾಗಿ ಮುಂದೆ ಇದ್ದಾರೆಂಬ ತಪ್ಪು ಕಲ್ಪನೆ ಸಮಾಜದಲ್ಲಿ ಇದೆ. ಒಂದು ಹೊತ್ತಿನ ಊಟಕ್ಕೂ ಕಷ್ಟ್ಟ ಇರುವ ಬಹಳಷ್ಟು ಮಂದಿ ಬ್ರಾಹ್ಮಣರು ಸಮಾಜದಲ್ಲಿದ್ದಾರೆ. ಅದೇ ರೀತಿಯಾಗಿ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ದೊಡ್ಡಮಟ್ಟದಲ್ಲಿ ಕೀರ್ತಿ ತಂದುಕೊಟ್ಟಿರುವವರು ಇದ್ದಾರೆ

ಮುಖ್ಯಮಂತ್ರಿಗಳು ಎಲ್ಲಾ ಸಮಾಜಕ್ಕೂ ಸಮಾನ ಅವಕಾಶ ನೀಡಿದ್ದಾರೆ

-

Ashok Nayak
Ashok Nayak Jan 4, 2026 9:05 PM

ಚಿಂತಾಮಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ(Chief Minister Siddaramaiah) ಎಲ್ಲಾ ಸಮಾಜಕ್ಕೂ ಸಮಾನ ಅವಕಾಶ ನೀಡಿ ಆಯಾ ಸಮುದಾಯದ ಬಡವರಿಗೆ ತನ್ನ ಕೈಲಾದ ಮಟ್ಟಿಗೆ ಸಹಾಯ ಮಾಡುತ್ತೇನೆಂಬ ಸದುದ್ದೇಶ ಹೊಂದಿರುವ ಮುಖ್ಯಮಂತ್ರಿಯಾಗಿದ್ದಾರೆ ಎಂದು  ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್(Dr. M.C. Sudhakar) ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಆಯೋಜಿಸಿದ್ದ ವಿಪ್ರ ಸ್ವಉದ್ಯೋಗ ನೇರ ಸಾಲ ಯೋಜನೆಯ ಫಲಾಭವಿಗಳಿಗೆ ಸಾಲ ಮಂಜೂ ರಾತಿ ಪತ್ರ ವಿತರಿಸಿ ಮಾತನಾಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ಮುಖ್ಯಮಂತ್ರಿಗಳ ಜೊತೆಯಾಗಿ ನಿಂತು ರಾಜ್ಯದಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರ 1 ಲಕ್ಷಕ್ಕೆ 20 ಸಾವಿರ ಸಹಾಯದನ ಕೊಡುತ್ತಿದ್ದು, ಉಳಿದ ಹಣಕ್ಕೆ ಶೇ.4 ರ ಬಡ್ಡಿ ರೂಪದಲ್ಲಿ ಸಾಲ ಕೊಡುತ್ತಿದೆ. ಬಹಳಷ್ಟು ಬುದ್ದಿವಂತಿಕೆಯುಳ್ಳ ಸಮಾಜದವರೆಂದರೆ ಬ್ರಾಹಣ ಸಮುದಾಯದವರಾಗಿದ್ದು, ಅದು ವಂಶಪಾರಂಪರ್ಯವಾಗಿ ಬಂದಿರುವ ಬಳುವಳಿಯಾಗಿದೆ. ನಮ್ಮ ಸರಕಾರ ಮಾಡಿರುವ ಸಹಾಯವನ್ನು ಈ ಸಮುದಾಯ ಮರೆಯಬಾರದು ಎಂದು ಮನವಿ ಮಾಡಿದರು.

ಇದನ್ನೂ ಓದಿ: Chikkaballapur New: ಜಲಮೂಲಗಳಿಗೆ ಸಂಸ್ಕರಿಸದ ತ್ಯಾಜ್ಯ ಹರಿಸಿದರೆ ಕ್ರಿಮಿನಲ್ ಮೊಕದ್ದಮೆ: ಎಚ್ಚರಿಕೆ

ಬ್ರಾಹ್ಮಣ ಸಮುದಾಯದವರೆಂದರೆ ಬುದ್ದಿವಂತರು ಆರ್ಥಿಕವಾಗಿ ಮುಂದೆ ಇದ್ದಾರೆಂಬ ತಪ್ಪು ಕಲ್ಪನೆ ಸಮಾಜದಲ್ಲಿ ಇದೆ. ಒಂದು ಹೊತ್ತಿನ ಊಟಕ್ಕೂ ಕಷ್ಟ್ಟ ಇರುವ ಬಹಳಷ್ಟು ಮಂದಿ ಬ್ರಾಹ್ಮಣರು ಸಮಾಜದಲ್ಲಿದ್ದಾರೆ. ಅದೇ ರೀತಿಯಾಗಿ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಕ್ಕೆ ದೊಡ್ಡಮಟ್ಟದಲ್ಲಿ ಕೀರ್ತಿ ತಂದುಕೊಟ್ಟಿರುವವರು ಇದ್ದಾರೆ ಎಂದು ಸ್ಮರಿಸಿ ದರು.

ಕೆಲವು ಅರ್ಚಕರಿಗೆ  ವಿದೇಶದಲ್ಲಿ ಅರ್ಚಕರಾಗಿ ಕೆಲಸ ಮಾಡಲು ಅವಕಾಶ ಒದಗಿ ಬಂದಿದೆ. ಅಂತಹವರು ಆರ್ಥಿಕವಾಗಿ ಚೆನ್ನಾಗಿದ್ದಾರೆ. ಆದರೆ ಎಲ್ಲಾ ಅರ್ಚಕರಿಗೂ ಅಂತಹ ಅವಕಾಶ ಒದಗಿಬಂದಿಲ್ಲ. ಸರ್ಕಾರ ಬ್ರಾಹ್ಮಣ ಅಭಿವೃದ್ಧಿ ಮಂಡಲಿ ಮುಖಾಂತರ ಇಂತಹವರಿಗೆ ಆರ್ಥಿಕ ಚೈತನ್ಯ ತುಂಬಲು 15 ಸಾವಿರ ರೂಗಳನ್ನು ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ 1 ಲಕ್ಷದವರೆಗೂ ಶಿಷ್ಯವೇತನ ಯೋಜನೆ ಜಾರಿ ಮಾಡಿದೆ ಎಂದ ಅವರು 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ಯೋಜನೆ. ಐಎಎಸ್ ಮತ್ತು ಕೆಎಎಸ್ ತರಬೇತಿ ಪಡೆಯಲು 1 ಲಕ್ಷದವರಿವಿಗೂ ಸಹಾಯ ಧನ ಕೊಡುತ್ತಿದ್ದು ಸಮುದಾಯದವರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದರು.

4cbpm5la ok

ನಮ್ಮ ತಾಲ್ಲೂಕಿನಲ್ಲಿ ಆಯಾ ಜಾತಿಯ ಜನಸಂಖ್ಯೆಗೆ ಅನುಗುಣವಾಗಿ ಶೈಕ್ಷಣಿಕ ಅಧ್ಯಯನ ಕೇಂದ್ರ ಕ್ಕೆ ಆಯಾ ಸಮುದಾಯದ ಇಲಾಖೆಗಳವತಿಯಿಂದ ಜಾಗವನ್ನು ಕೊಡಿಸುವ ಪ್ರಯತ್ನವಾಗಿದೆ. ಅದೇ ರೀತಿಯಾಗಿ ಬ್ರಾಹ್ಮಣ ಸಮಾಜದವರಿಗೆ 20 ಗುಂಟೆ ಜಾಗವನ್ನು ಮೀಸಲು ಮಾಡಲಾಗಿದೆ. ಇದು ರಾಜ್ಯದಲ್ಲಿಯೇ ಒಂದೇ ಜಾಗದಲ್ಲಿ ಎಲ್ಲಾ ಸಮುದಾಯದವರಿಗೂ ಶೈಕ್ಷಣಿಕ ಅಧ್ಯಯನ ಕೇಂದ್ರಕ್ಕೆ ಜಾಗ ಕೊಟ್ಟಿರುವುದು ಮೊದಲನೆಯ ತಾಲೂಕಾಗಿದೆ ಎಂದರು.

ದೇವಸ್ಥಾನವನ್ನು ಯಾವ ರೀತಿ ಕಟ್ಟಬೇಕೆಂಬುದು ಬ್ರಾಹ್ಮಣ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ. ರಾಜಕಾರಣ ಮಾಡುವ ನೆಪದಲ್ಲಿ ಕೈಲಾಸಗಿರಿ ದೇವಸ್ಥಾನಕ್ಕೂ ಅಡ್ಡಿಪಡಿಸುವ ಕೆಲಸ ಕೆಲವರು ಮಾಡುತ್ತಾರೆ. ಅವರಿಗೆ ಡೀಮ್ಡ್ ಫಾರೆಸ್ಟ್ ಎಂದರೆ ಏನೂ ಗೊತ್ತಿಲ್ಲ. ಅವರಿಗೆ ಕಾನೂನಿನ ಅರಿವಿಲ್ಲ. ಉಚ್ಚನ್ಯಾಯಾಲಯದಲ್ಲಿ ದಾವೆ ಹೂಡುತ್ತಾರೆ. ಅವರಿಗೆ ಗೊತ್ತಿರಬೇಕು ಇಲ್ಲವಾದರೆ ಬುದ್ದಿವಂತ ರನ್ನು ಪಕ್ಕದಲ್ಲಿಟ್ಟುಕೊಳ್ಳಬೇಕು. ಇದನ್ನೆಲ್ಲಾ ನೋಡಿದರೆ ಒಂದೊಂದು ಸಲ ಅವರ ಬಗ್ಗೆ ಅಯ್ಯೋ ಅನಿಸುತ್ತದೆ ಎಂದು ಮಾಜಿ ಶಾಸಕರನ್ನು ಪರೋಕ್ಷವಾಗಿ ಟೀಕೆ ಮಾಡಿದರು.

ಕ್ಷೇತ್ರವನ್ನು ಅಭಿವೃದ್ದಿ ಮಾಡಬೇಕಾದರೆ ತುಂಬಾ ಕಷ್ಟವಾಗಿರುತ್ತದೆ. ದೇವಸ್ಥಾನಗಳಿಂದ ಹಣ ಗಳಿಸಿ ಜೀವನ ಮಾಡುವವರನ್ನು ನಾನು ನೋಡಿಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿ ದರೆ ಅವರ ಆಲೋಚನೆ ಕೆಟ್ಟದಾಗಿರುತ್ತದೆ. ಯಾವುದೇ ದೇವಸ್ಥಾನಗಳನ್ನು ಜೀರ್ಣೋದ್ದಾರ ಮಾಡ ಬೇಕಾದರೆ ಅದಕ್ಕೆ ಅದರದೇ ಆದ ಮಾನದಂಡಗಳಿದ್ದು, ಅವುಗಳನ್ನು ಪಾಲನೆ ಮಾಡಬೇಕಾಗು ತ್ತದೆ.

4cbpm5i ok

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ತಾಲ್ಲೂಕಿನ ಹಲವಾರು ದೇವಾಲಯಗಳಿಗೆ 3 ಕೋಟಿ ಅನುದಾನವನ್ನು ಕೊಡಿಸಿದ್ದೇನೆ. ಇಂದು ದೇವರ ಹೆಸರಿನಲ್ಲಿ ಕೆಲ ಮಂದಿ ರಾಜಕಾರಣ ಮಾಡು ತ್ತಿದ್ದಾರೆ. ಧರ್ಮವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಮಹಾತ್ಮ ಗಾಂಧಿಯವರ ತ್ಯಾಗ ದಿಂದ ನಾವು ಸ್ವತಂತ್ರರಾಗಿದ್ದೇವೆ. ಚುನಾವಣೆ ಸಮಯದಲ್ಲಿ ಸಮಾಜವನ್ನು ಹೊಡೆಯುವ ಕೆಲಸ ಮಾಡುವುದು ಸರಿಯಲ್ಲ ಎಂದು ಚಾಟಿ ಬೀಸಿದರು.

ಚಿಂತಾಮಣಿ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಮಾದರಿಯಾಗಬೇಕು. ಯಾವುದೇ ತಾಲ್ಲೂಕಿನಲ್ಲಿ ಇಲ್ಲದೇ ಇರುವ ಸೌಲಭ್ಯಗಳನ್ನು ನಮ್ಮ ತಾಲ್ಲೂಕಿಗೆ ತರಬೇಕೆಂಬ ಉದ್ದೇಶದಿಂದ ಅಭಿವೃದ್ದಿ ಕೆಲಸಗಳು ಪ್ರಾರಂಭವಾಗಿ ವೇಗವಾಗಿ ನಡೆಯುತ್ತಿವೆ. ಎಲ್ಲಾ ಧರ್ಮದವರಿಗೂ ನ್ಯಾಯ ಕೊಡಿಸಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕೆನ್ನುವುದೇ ನನ್ನ ಅಭಿಪ್ರಾಯ ಎಂದರು.

ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭು ಜಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಭಟ್, ತಹಸೀಲ್ದಾರ್ ಸುದರ್ಶನ್ ಯಾದವ್, ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೌರಾಯುಕ್ತ ಚಲಪತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ದೀಪಶ್ರೀ, ಬ್ರಾಹ್ಮಣ ಸಂಘದ ತಾಲ್ಲೂಕು ಅಧ್ಯಕ್ಷ ಎನ್.ಕೃಷ್ಣ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಜಗದೀಶ್‌ರಾವ್, ಎಸ್.ಆರ್.ಇ.ಟಿ. ನಾಗೇಶ್, ಮಾಜಿ ನಗರಸಭಾ ಸದಸ್ಯ ಎಸ್.ಸುಬ್ರಮಣ್ಯಂ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್.ವಿ.ರವಿಪ್ರಕಾಶ್ ಮುಂತಾದವರು ಇದ್ದರು.