ಚಿಕ್ಕಬಳ್ಳಾಪುರ: ಹೆಚ್.ಎನ್ ವ್ಯಾಲಿ(HN Valley) ತ್ಯಾಜ್ಯ ನೀರನ್ನು ಮೂರನೇ ನೇ ಹಂತದ ಶುದ್ಧೀಕರಣಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಭಾನುವಾರ ಕರೆ ನೀಡಿದ್ದ ಚಿಕ್ಕಬಳ್ಳಾಪುರ ಬಂದ್(Chikkaballapura Bandh) ಶಾಂತಿಯುತವಾಗಿದ್ದು ಸಂಪೂರ್ಣ ಯಶಸ್ಸು ಕಂಡಿತು.
ಜಲಾಗ್ರಹ ವೇದಿಕೆ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್, ಶಾಶ್ವತ ನೀರಾವರಿ ಹೋರಾಟ ಸಮಿತಿ, ರೈತ ಸಂಘಟನೆ, ಕನ್ನಡ ಪರ ಸಂಘಟನೆಗಳು, ದಲಿತ ಪರ ಸಂಘಟನೆಗಳು ಸೇರಿದಂತರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಭಾನುವಾರ ನಡೆದ ಚಿಕ್ಕಬಳ್ಳಾಪುರ ಬಂದ್ ಗೆ ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು.
ಇದನ್ನೂ ಓದಿ: Chikkaballapura bandh today: ಇಂದು ಚಿಕ್ಕಬಳ್ಳಾಪುರ ಬಂದ್: ಸಂಘಟನೆಗಳ ಬೃಹತ್ ಬೆಂಬಲ
ಬೆಂಗಳೂರಿನ ಹೆಬ್ಬಾಳ, ನಾಗವಾರದ ತ್ಯಾಜ್ಯ ನೀರನ್ನು ಕೆ.ಸಿ, ಹೆಚ್.ಎನ್ ವ್ಯಾಲಿಯಾಗಿ ಎರಡು ಹಂತಗಳಲ್ಲಿ ಶುದ್ದೀಕರಿಸಿ ಕೋಲಾರ , ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಹಲವು ಕೆರೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಆದರೆ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಶುದ್ದೀಕರಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಇದರ ಭಾಗವಾಗ ಸರ್ಕಾರ ಕಳೆದ ಬಜೆಟ್ ನಲ್ಲಿ ಮೂರನೇ ಹಂತದ ಶುದ್ದೀ ಕರಣಕ್ಕೆ ಅಸ್ತು ಎನ್ನುತ್ತದೆ ಎಂಬ ನೀರಿಕ್ಷೆ ಇತ್ತು. ಆದರೆ ನಿರೀಕ್ಷೆ ಹುಸಿಯಾದ ಕಾರಣ ಜಿಲ್ಲೆಯ ಜನರ ಆಗ್ರಹಕ್ಕೆ ಕಾರಣವಾಗಿತ್ತು.
ಮೂರು ಹಂತಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಿಸದಿದ್ದರೆ ಇದರಿಂದಾಗುವ ಆರೋಗ್ಯ ಸಮಸ್ಯೆಗಳಿಗೆ ಜನತೆ ತುತ್ತಾಗಲಿದ್ದಾರೆ. ಈ ನೀರಿನಲ್ಲಿರುವ ಕೈಗಾರಿಕೆಗಳ ತ್ಯಾಜ್ಯ, ವೈದ್ಯ ಕೀಯ ತ್ಯಾಜ್ಯ, ಗಾರ್ಮೆಂಟ್ಸ್ ತ್ಯಾಜ್ಯ ಜನರ ಆರೋಗ್ಯದ ಮೇಲೆ ವ್ಯತಿರೇಕ ಪ್ರಭಾವ ಬೀರುತ್ತದೆ ಎಂಬ ನಿಟ್ಟಿನಲ್ಲಿ ಮೂರನೇ ಹಂತದ ಶುದ್ದೀಕರಣಕ್ಕೆ ಒತ್ತಾಯಿಸಿ ಜಿಲ್ಲೆಯ ವಿವಿಧ ಸಂಘಟನೆಗಳು ಚಿಕ್ಕಬಳ್ಳಾಪುರ ಬಂದ್ ಗೆ ಕರೆ ನೀಡಿದ್ದವು.
ಎರಡನೇ ಹಂತದಲ್ಲಿ ಶುದ್ಧೀಕರಿಸಿದ ನೀರು ಬಳಸಿ ಬೆಳೆಯುತ್ತಿರುವ ತರಕಾರಿಗಳಲ್ಲಿ ಭಾರಿ ಲೋಹದ ಅಂಶಗಳಿರುವ ಬಗ್ಗೆ ಅಧ್ಯಯನ ವರದಿ ಎಂದು ಬಿಡುಗಡೆಯಾಗಿದೆ. ಜಿಲ್ಲೆಯ ಜನತೆ ಕಿಡ್ನಿ ವೈಫಲ್ಯ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಗೆ ತುತ್ತಾಗುವ ಬಗ್ಗೆ ಜನತೆ ಆತಂಕ ಗೊಂಡಿದ್ದಾರೆ. ಹೀಗಾಗಿ ಮೂರನೇ ಹಂತದ ಶುದ್ಧೀಕರಣ ಮಾಡಿಯೇ ಕೆರೆಗಳಿಗೆ ತ್ಯಾಜ್ಯ ನೀರನ್ನು ಹರಿಸಬೇಕೆಂದು ಜನರ ಒತ್ತಾಯವಾಗಿದೆ.
ಈ ಸಂಬಂಧ ಭಾನುವಾರ ಮುಂಜಾನೆ 5 ಗಂಟೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ಕೆಲ ಪ್ರತಿಭಟನಾಕಾರರು ಬೈಕ್ ಗಳ ಮೂಲಕ ನಗರದ ಪ್ರಮುಖ ರಸ್ತೆಗಳು ಸಂಚಾರಿಸಿ ಬಂದ್ ನ ತೀವ್ರತೆಯ ಬಗ್ಗೆ ಎಚ್ಚರಿಕೆ ನೀಡಿದರು.
ನಂತರ ಮುಂಜಾನೆ ನಗರದಲ್ಲಿ ಇರುವ ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಕಚೇರಿ ಯಿಂದ ಶಿಡ್ಲಘಟ್ಟ ವೃತ್ತದ ಮೂಲಕ .ಬಿ.ಬಿ ರೋಡ್ ಮತ್ತು ಗಂಗಮ್ಮ ಗುಡಿ ರಸ್ತೆ ಮೂಲಕ ಶಿಡ್ಲಘಟ್ಟ ವೃತ್ತದಲ್ಲಿ ತಮಟೆ ಸದ್ದಿನೊಂದಿಗೆ ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಗಳನ್ನು ಕೂಗುತ್ತಾ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.
ಚಿಕ್ಕಬಳ್ಳಾಪುರ ಬಂದ್ ಗೆ ಬಹುತೇಕ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚು ವುದರ ಮೂಲಕ ಸ್ವಯಂ ಘೋಷಿತವಾಗಿ ಬೆಂಬಲ ಸೂಚಿಸಿದರು. ಬಂದ್ ಲೆಕ್ಕಿಸಿದೆ ತೆರೆದಿದ್ದ ಅಂಗಡಿಗಳನ್ನು ಪ್ರತಿಭಟನಾಕಾರರು ಬಲವಂತವಾಗಿ ಮುಚ್ಚಿಸಿದ ಘಟನೆಗಳು ನಡೆಯಿತು. ರಸ್ತೆ ತಡೆಯಿಂದ ವಾಹನಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡುಬಂದಿತು.
ಆಟೋ, ಟ್ಯಾಕ್ಸಿ ಸಂಘಟನೆಗಳು ಬಂದ್ ಗೆ ಸ್ವಯಂ ಘೋಷತವಾಗಿ ಬೆಂಬಲ ಸೂಚಿಸಿದ್ದ ರಿಂದ ಪ್ರಯಾಣಿಕರು ಮಧ್ಯಾಹ್ನದ ವರೆಗೆ ಪರದಾಡುವಂತಾಯಿತು. ಮಧ್ಯಾಹ್ನ ನಂತರ ವಾಹನ ಸಂಚಾರ ಸಹಜ ಸ್ಥಿತಿಗೆ ಮರಳಿತ್ತು. ವ್ಯಾಪಾರ ವಹಿವಾಟು ಸಹಜವಾಗಿ ನಡೆದವು.
ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಸಂದೀಪ್ ರೆಡ್ಡಿ ಅವರೊಂದಿಗೆ ಪ್ರತಿಭಟನಾ ಮೆರವಣಿಗೆಗಳಲ್ಲಿ ಭಾಗವಹಿಸಿ ಬಂದ್ ಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು .
ಈ ವೇಳೆ ನಗರ ಸಭೆ ಕಾರ್ಯಲಯ ಮುಂದೆ ಮುಂದೆ ಜನರನ್ನು ಉದ್ದೇಶಿಸಿ ಮಾತನಾಡಿದ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮಾತಾನಾಡಿ, ಈ ಭಾಗದ ಶಾಸಕ ಪ್ರದೀಪ್ ಈಶ್ವರ್ ಅವರು ನನ್ನ ಲೆವೆಲ್ ಏನಿದ್ರೂ ಮೋದಿ ಅವರಿಗೆ ಸಮ ಎಂದು ಹೇಳು ತ್ತಾರೆ. ಆದರೆ ನಾನು ಅವರ ಬಗ್ಗೆ ಮಾತಾಡುವುದಿಲ್ಲ. ನನ್ನ ಲೆವೆಲ್ ಏನಿದ್ರೂ ಜನರ ಲೆವೆಲ್ ಎಂದು ಶಾಸಕ ಪ್ರದೀಪ್ ಈಶ್ವರ್ ರನ್ನು ಕುಟುಕಿದರು.
ಮಾಜಿ ಸ್ವೀಕರ್ ರಮೇಶ್ ಕುಮಾರ್ ಅವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಗಳಿಗೆ ನೀರು ಕೊಡಿ ಎಂದು ಹೇಳಿದರು . ಆದರೆ ಅವರು ಇದೀಗ ಪಶ್ಚಾತ್ತಾಪ ಪಡುತ್ತಿದ್ದಾರೆ. ನೀರಿನಲ್ಲಿ ರಾಸಾಯನಿಕ ಅಂಶ ಪತ್ತೆ ಯಾಗಿದೆ. ಕೆಲ ಸಂಸ್ಥೆಗಳು ನೀರು ಪರೀಕ್ಷೆ ಮಾಡಿದರು. ಈ ನೀರಿನಿಂದ ಕ್ಯಾನ್ಸರ್ .ಕಿಡ್ನಿ ಇನ್ನೂ ಬೇರೆ ಬೇರೆ ರೀತಿಯ ಕಾಯಿಲೆ ಗಳು ಬರುತ್ತವೆ ಎಂದು ವರದಿ ಮಾಡಿವೆ . ಇದು ಸಹಜವಾಗಿ ನಾಗರೀಕರನ್ನು ಆತಂಕಕ್ಕೆ ಈಡು ಮಾಡಿದೆ. ಸರ್ಕಾರ ಕೂಡಲೇ ಜನರ ಆಕ್ರೋಶವನ್ನು ಅರಿತು ಮೂರನೇ ಹಂತದ ಶುದ್ಧೀ ಕರಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ರೆಡ್ಡಿ ಮಾತಾಡಿ, ಚಿಕ್ಕಬಳ್ಳಾ ಪುರ ಬಂದ್‌ಗೆ ಕೆಲವರು ವಿರೋಧಿಸಿದರೂ, ಸಹ ಚಿಕ್ಕಬಳ್ಳಾಪುರದ ಜನರು ಪೂರ್ಣ ಬೆಂಬಲ ನೀಡಿದ್ದಾರೆ.ಈ ಹೋರಾಟ ನಮ್ಮ ನೀರಿನ ಹಕ್ಕಿಗಾಗಿ, ಶುದ್ಧ ಕುಡಿಯುವ ನೀರನ್ನು ನೀಡುವಂತೆ ರಾಜ್ಯ ಸರ್ಕಾರ ವನ್ನು ಕೇಳುತ್ತಿದ್ದೇವೆ. ನೀರಿಗಾಗಿ ಚಿಕ್ಕಬಳ್ಳಾಪುರ ಜನರು ಒಗ್ಗಟ್ಟಾಗಿ ನಿಂತಿದ್ದಾರೆ. ಈ ಹೋರಾಟಕ್ಕೆ ಜನರು ಬೆಂಬಲಿಸಿದ್ದಾರೆ ಎಂದು ಹೇಳಿದರು.
ಬಂದ್ ಗೆ ಜನಬೆಂಬಲ: ಭಾನುವಾರ ನಡೆದ ಚಿಕ್ಕಬಳ್ಳಾಪುರ ಬಂದ್ ಗೆ ಸಂಘಟನೆ ಗಳನ್ನು ಹೊರೆತುಪಡಿಸಿ ಜಿಲ್ಲೆಯ ವಿವಿಧ ಮೂಲಗಳಿಂದ ನೂರಾರು ಜನರು ಸ್ವಯಂ ಪ್ರೇರಿತರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಬಿಗಿ ಪೊಲೀಸ್ ಭದ್ರತೆ: ಬಂದ್ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ನಗರದ ಮೆರವಣಿಗೆ ಸಾಗುವ ದಾರಿಯಲ್ಲಿ ಯಾವುದೇ ಅಂಗಡಿ ಗಳನ್ನು ಬಲವಂತ ವಾಗಿ ಮುಚ್ಚ ದಂತೆ ಪೊಲೀಸರು ಸೂಚನೆ ನೀಡಿದರು.