ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ಎಸಿಸಿ ಉತ್ಪಾದನಾ ಸಾಮರ್ಥ್ಯ ಹೆಚ್ಚಳಕ್ಕೆ ಜಿಲ್ಲಾಧಿಕಾರಿ ಅವಕಾಶ ನೀಡಬಾರದು : ರಕ್ಷಣಾ ವೇದಿಕೆ ಆಗ್ರಹ

ಪ್ರಸ್ತುತ ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ 2.0 ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದು, ಅದನ್ನು 8.0 ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದನೆ ಮಾಡಲು ಎಸಿಸಿ ಸಿಮೆಂಟ್ ಕಾರ್ಖಾನೆಯವರು ಮುಂದಾಗಿರುವುದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಇದಕ್ಕೆ ಅವಕಾಶ ಮಾಡಬಾರದು

ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಸಿಮೆಂಟ್ ಉತ್ಪಾದನೆಯನ್ನು ಹೆಚ್ಚಿಸುವ ಪ್ರಸ್ಥಾಪನೆಗೆ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಅನುಮತಿಯನ್ನು ನೀಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ನರೇಂದ್ರ ಕುಮಾರ್‌ರೆಡ್ಡಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

ಗೌರಿಬಿದನೂರು: ಎಸಿಸಿ ಸಿಮೆಂಟ್ ಕಾರ್ಖಾನೆ(ACC Cement Factory)ಯಲ್ಲಿ ಸಿಮೆಂಟ್ ಉತ್ಪಾದನೆ ಹೆಚ್ಚಿಸುವ ಪ್ರಸ್ತಾಪನೆಗೆ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ನರೇಂದ್ರ ಕುಮಾರ್‌ ರೆಡ್ಡಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

ತಾಲೂಕಿನ ತೊಂಡೇಬಾವಿ ಸಮೀಪವಿರುವ ಎಸಿಸಿ ಸಿಮೆಂಟ್ ಕಾರ್ಖಾನೆಯ ಮುಂಭಾಗ ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಸ್ತುತ ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ 2.0 ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದು, ಅದನ್ನು 8.0 ಮೆಟ್ರಿಕ್ ಟನ್ ಸಿಮೆಂಟ್ ಉತ್ಪಾದನೆ ಮಾಡಲು ಎಸಿಸಿ ಸಿಮೆಂಟ್ ಕಾರ್ಖಾನೆಯವರು ಮುಂದಾಗಿರುವುದು ತಿಳಿದು ಬಂದಿದೆ. ಜಿಲ್ಲಾಧಿಕಾರಿಗಳು ಇದಕ್ಕೆ ಅವಕಾಶ ಮಾಡಬಾರದು ಎಂದರು.

ಇದನ್ನೂ ಓದಿ: Gauribidanur News: ಕಾರ್ಮಿಕರಿಗೆ ಅಗತ್ಯ ನೆರವು ನ್ಯಾಯಾಲಯದಿಂದ ದೊರೆಯಲಿದೆ: ಪ್ರಧಾನ ಸಿವಿಲ್ ನ್ಯಾಯಾಧೀಶ ಗಣೇಶ್.ಎನ್

ಕಳೆದ ಹತ್ತಾರು ವರ್ಷಗಳಿಂದ ಈ ಭಾಗದ ಜನರ ಆರೋಗ್ಯದ ಮೇಲೆ ಎಸಿಸಿ ಸಿಮೆಂಟ್ ಕಾರ್ಖಾನೆಯಿಂದ ಹೊರ ಬರುವ ಧೂಳು ಸಾಕಷ್ಟು ಅನಾಹುತವನ್ನು ಉಂಟು ಮಾಡು ತ್ತಿದೆ. ಅದರಲ್ಲೂ ಶ್ವಾಸಕೋಶದ ಸಂಬಂಧಿಸಿದ ಕಾಯಿಲೆಗಳು, ಚರ್ಮ ರೋಗಗಳು, ಅಲರ್ಜಿ ಕಾಯಿಲೆಗಳು ಈ ಭಾಗದ ಜನರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಈ ಭಾಗದ ಸ್ಥಳೀಯ ರು ಹಲವಾರು ಬಾರಿ ಎಸಿಸಿ ಸಿಮೆಂಟ್ ಕಾರ್ಖಾನೆಯಿಂದಾಗುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳಿಗೆ, ತಹಶಿಲ್ದಾರ್ ಅವರಿಗೆ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರೂ ಕೂಡ ಅಧಿಕಾರಿಗಳಾಗಲಿ,ಕಾರ್ಖಾನೆಯವರಾಗಲಿ ಇದುವರೆಗೂ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸಿಸಿ ಸಿಮೆಂಟ್ ಕಾರ್ಖಾನೆಯವರು, ಕಾರ್ಖಾನೆಯಿಂದ ಹೊರ ಬರುವ ಸಿಮೆಂಟ್ ಧೂಳನ್ನು ನಿಯಂತ್ರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ಜಿಲ್ಲಾಧಿಕಾರಿ ಗಳು ಸ್ಥಳೀಯ ಜನರ ಆರೋಗ್ಯ ದೃಷ್ಟಿಯಿಂದ ಎಸಿಸಿ ಸಿಮೆಂಟ್ ಕಾರ್ಖಾನೆಯ ಸಿಮೆಂಟ್ ಉತ್ಪಾದನೆಯನ್ನು ಹೆಚ್ಚಿಸುವ ಪ್ರಸ್ತಾವನೆಗೆ ಅವಕಾಶ ನೀಡಬಾರದೆಂದು ಮನವಿ ಮಾಡಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್‌ಗೌಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಸಿಮೆಂಟ್ ಕಾರ್ಖಾನೆಯಿಂದ ಹೊರ ಬರುವ ದೂಳಿನಿಂದಾಗಿ ಈ ಭಾಗ ದಲ್ಲಿ ಪರಿಸರ ನಾಶವಾಗುತ್ತಿದೆ. ಜಲ ಮಾಲಿನ್ಯ ಕೂಡ ಉಂಟಾಗುತ್ತಿದೆ. ಈ ಭಾಗದ ರೈತರು ಬೆಳೆಯುವ ರೇಷ್ಮೆ ಸೊಪ್ಪಿನ ಮೇಲೆ ಸಿಮೆಂಟ್ ದೂಳು ಕುಳಿತುಕೊಳ್ಳುವುದರಿಂದ ರೇಷ್ಮೆ ಹುಳುಗಳು ಸೊಪ್ಪು ತಿಂದು ಸಾಯುತ್ತಿರುವುದರಿಂದ ರೇಷ್ಮೆ ಇಳುವರಿಯಲ್ಲಿ ಗಣನೀಯ ವಾಗಿ ಕುಸಿತಗೊಂಡ ಪರಿಣಾಮ ರೈತರು ರೇಷ್ಮೆ ವ್ಯವಸಾಯವನ್ನೇ ಕೈ ಬಿಟ್ಟಿದ್ದಾರೆ ಎಂದರು.

 ಅವರು ಎಸಿಸಿ ಸಿಮೆಂಟ್ ಕಾರ್ಖಾನೆಯ ಪ್ರಸ್ತಾವನೆಯನ್ನು ಸರ್ಕಾರ ರೈತರ ಹಿತದೃಷ್ಠಿ ಯಿಂದ ತಿರಸ್ಕರಿಸಬೇಕೆಂದು ತಿಳಿಸಿದ ಅವರು ಮುಂದಿನ ದಿನಗಳಲ್ಲಿ ಎಸಿಸಿ ಸಿಮೆಂಟ್ ಕಾರ್ಖಾನೆಯ ವಿರುದ್ದ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಪ್ರತಿಭಟನೆಯ ವಿಚಾರ ತಿಳಿದು ತಹಶಿಲ್ದಾರ್ ಅರವಿಂದ್ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲನ್ನು ಆಲಿಸಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವು ದಾಗಿ ತಿಳಿಸಿ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ದಿನೇಶ್, ಜಯಕರ್ನಾಟಕ ತಾಲೂಕು ಕಾರ್ಯಾಧ್ಯಕ್ಷ ಮುರುಳಿ, ಶ್ರೀಧರ್ ರೆಡ್ಡಿ, ನಿರಂಜನ್, ರವೀಂದ್ರ ರೆಡ್ಡಿ, ರಾಜಣ್ಣ, ಪ್ರಭಾಕರ್, ಪುರುಷೋತ್ತಮ, ದೀಪಕ್, ಸಂದೀಪ್ ಹಾಗೂ ಇನ್ನಿತರರು ಭಾಗವಹಿಸಿದ್ದರು.