ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬರೀ ಕೆಐಎಡಿಬಿ ಸಮಸ್ಯೆ ಮಾತ್ರವಲ್ಲ. ರೈತರ ಬೇರೆ, ಬೇರೆ ಜಲ್ವಂತ ಸಮಸ್ಯೆಗಳಿವೆ ಅತ್ತ ಕಡೆಯೂ ಸರ್ಕಾರ ಮತ್ತು ರೈತ ಸಂಘಟನೆಗಳು. ದಲಿತ ಪರ, ಪ್ರಗತಿ ಪರ ಸಂಘಟನೆಗಳು ಗಮನ ಗರಿಸಬೇಕು ಮತ್ತು ರೈತರ ಸಮಸ್ಯೆಗಳ ಪರಿಹಾರ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರವಿ ಪ್ರಕಾಶ್ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ಹಿಂದೆ ನಗರದ ಎಪಿಎಂಸಿಯ ರೈತ ಭವನದಲ್ಲಿ ನಡೆದ ರೈತ ಪರ, ದಲಿತ ಪರ, ಪ್ರಗತಿ ಪರ ಸಂಘಟನೆಗಳು ಎಲ್ಲಾ ಸೇರಿ ಸಂಯುಕ್ತ ಹೋರಾಟ ಮಾಡಬೇಕು. ಆಗ ಮಾತ್ರ ನಾವು ನಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಸಾಧ್ಯ ಎಂದು ಸಂಯುಕ್ತ ಹೋರಾಟ ರಂಗ ಮಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯ ಪಟ್ಟಣ ಹೋಬಳಿಯ 13 ಹಳ್ಳಿಗಳ ರೈತರ ಜಮೀನನ್ನು ಕೆಐಡಿಬಿಯ ವಶ ದಿಂದ ಮತ್ತೆ ರೈತರಿಗೆ ನೀಡುವಂತೆ ಮಾಡಿದೆವು ಎಂದರು.
ಈ ಹೋರಾಟದ ಸ್ಫೂರ್ತಿಯಿಂದಲೇ ಸಂಯುಕ್ತ ಹೋರಾಟ ರಂಗದ ಮೂಲಕವೇ ನಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳ ಬಹುದು ಎಂಬುದನ್ನು ಪುಟ್ಟಣ್ಣಯ್ಯ ಬಣದ ರೈತ ಸಂಘ, ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘ, ಕರ್ನಾಟಕ ಪ್ರಾಂತರೈತ ಸಂಘ, ಸಿಪಿಐಎಂ. ಪ್ರಾಂತ ಕೂಲಿ ಸಂಘ, ರೈತ ಪರ, ದಲಿತ ಪರ, ಪ್ರಗತಿ ಪರ ಸಂಘಟನೆಗಳ ಅರಿವಿಗೆ ಬಂದಿದ್ದರಿAದಲೇ ನಗರದ ಎಪಿಎಂಸಿಯ ರೈತ ಭವನದಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಒಪ್ಪಿಕೊಂಡು ಜಂಗಮ ಕೋಟೆಯ 13 ಹಳ್ಳಿಗಳ ರೈತರ ಜಮೀನುಗಳನ್ನು ಕೆಐಡಿಬಿಎ ಕದಂಬ ಬಾಹುಗಳಿಂದ ಬಿಡಿಸಿಕೊಳ್ಳಬಹುದು ಎಂದು ತೀರ್ಮಾನಿಸಿದ್ದೆವು ಎಂದರು.
ಇದನ್ನೂ ಓದಿ: Chikkaballapur News: ಧ್ಯಾನದ ಮೂಲಕ ಸಮಾಜದ ಪರಿವರ್ತನೆ ಸಾಧ್ಯ: ಕೋಲಾರ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ಜಯಶ್ರೀ
ಆದರೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಸಂಘ ನಮ್ಮ ಯಾರ ಅರಿವಿಗೂ ಬರದೆ ಜಿಲ್ಲಾಡಳಿತ ಭವನದ ಮುಂದೆ ಭೂಮಿ ನೀಡುವುದಿಲ್ಲವೆಂದು ಪ್ರತಿಭಟನೆ ನಡೆಸಿತು, ಇದೇ ಸಮಯದಲ್ಲಿ ಇನ್ನೊಂದು ರೈತ ಸಂಘ ಭೂಮಿ ನೀಡುವುದಾಗಿ ಪ್ರತಿಭಟನೆ ಆರಂಭಿಸಿತು. ಮುಖ್ಯಮಂತ್ರಿಗಳು ಅವರುಗಳ ಪ್ರತಿಭಟನಾ ಸ್ಥಳಕ್ಕೆ ಬರಲಿಲ್ಲಾ ಎಂದು ಎರಡೂ ಸಂಘಟನೆಗಳವರೂ ಧರಣಿ ನಿಲ್ಲಿಸಿದರು ಎಂದು ತಿಳಿಸಿದರು.
ನಂತರ ಕೋಡಿಹಳ್ಳಿ ಚಂದ್ರಶೇಖರ್ ಬಣ ಪ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಿತು. ಇದೂ ಸಹ ಸಂಯುಕ್ತ ರಂಗ ಸಮಿತಿ ಗಮನಕ್ಕೆ ಬರಲೇ ಇಲ್ಲಾ. ಆದರೆ ಈಗ ಮತ್ತೆ ಜಂಗಮ ಕೋಟೆಯ 13 ಹಳ್ಳಿಗಳ ರೈತರ ಜಮೀನುಗಳನ್ನು ಕೆಐಡಿಬಿಎಯಿಂದ ಕೈ ಬಿಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಬಣದ ಭಕ್ತರಹಳ್ಳಿ ಬೈರೇಗೌಡರು ಮತ್ತು ಭಕ್ತರಹಳ್ಳಿ ಪ್ರತೀಶ್ ಬಣದವರು ಭೂಮಿ ನೀಡುವುದಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಜಿಲ್ಲೆಯಲ್ಲಿ ರೈತರ ಸಾಕಷ್ಟು ಸಮಸ್ಯೆಗಳಿವೆ ಅತ್ತ ಗಮನ ಹರಿಸದೇ ಇರುವುದು ಶೋಚನೀಯ ಎಂದರು.
ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲು ಒಂದೂವರೆ ತಿಂಗಳು ವಿಳಂಭ ಮಾಡಿದರು, ಈಗ ಖರೀದಿ ಮಾಡಿದ ರಾಗಿ ಹಣ ಒಂದೂವರೆ ತಿಂಗಳಾದರೂ ನೀಡಿಲ್ಲ, ಜಿಲ್ಲೆಯ ಕೆರೆಗಳಿಗೆ ಹರಿಯುತ್ತಿರುವ ಬೆಂಗಳೂರಿನ ಕೊಳಚೆ ನೀರಾದ ಹೆಚ್‌ಎನ್ ವ್ಯಾಲಿ ನೀರಿನ ೩ನೇ ಹಂತದ ಶುದ್ಧೀಕರಣ ಮಾಡಲು ಒತ್ತಾಯ, ಜಿಲ್ಲೆಗೆ ಕೃಷ್ಣೆ ಮತ್ತು ಕಾವೇರಿ ನೀರು ಹರಿಸುವುದು ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಇದರೊಂದಿಗೆ ಜಂಗಮ ಕೋಟೆಯ ೧೩ ಹಳ್ಳಿಗಳ ರೈತರ ಜಮೀನುಗಳನ್ನು ಕೆಐಡಿಬಿಎ ಯಿಂದ ಕೈ ಬಿಡಿಸಲು ಐಕ್ಯತೆಯಿಂದ ಸಂಯುಕ್ತ ಹೋರಾಟವಾಗಬೇಕಿದೆ ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಈಶ್ವರರೆಡ್ಡಿ, ತ್ಯಾಗರಾಜು, ಈಶ್ವರ್, ಕೇಶವನಾಗರಾಜ್, ಯಲ್ಲಪ್ಪ, ಪ್ರಕಾಶ್, ನಾರಾಯಣಪ್ಪ, ಮತ್ತಿತರರು ಇದ್ದರು.