Dr M C Sudhakar: ಸಾರ್ವಜನಿಕರ ಸಹಕಾರವಿದ್ದಲ್ಲಿ ಮಾತ್ರ ಸ್ವಚ್ಛ ಚಿಂತಾಮಣಿಯ ಕನಸು ನನಸಾಗುತ್ತದೆ
ಹಿರಿಯ ನಾಗರೀಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಮಾನ ಬಳಗದಿಂದ ಹಿರಿಯ ನಾಗರೀಕರಿಗೆ ವಿವಿಧ ಸ್ಪರ್ಧೆಗೆ ಹಸಿರು ಬಾವುಟವನ್ನು ಹಾರಿಸುವುದರ ಮೂಲಕ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು.


ಚಿಂತಾಮಣಿ: ಹಿರಿಯ ನಾಗರೀಕರಿಗೆ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್ ಅಭಿಮಾನ ಬಳಗದಿಂದ ಹಿರಿಯ ನಾಗರೀಕರಿಗೆ ವಿವಿಧ ಸ್ಪರ್ಧೆಗೆ ಹಸಿರು ಬಾವುಟವನ್ನು ಹಾರಿಸುವುದರ ಮೂಲಕ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು,ನಗರವನ್ನು ಸ್ವಚ್ಛ ಸುಂದರ ಹಾಗೂ ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಆದರೆ ಸಾರ್ವಜನಿಕರು ಪ್ಲಾಸ್ಟಿಕ್ ಚೀಲಗಳಲ್ಲಿ ಕಸವನ್ನು ತುಂಬಿ ವಾಹನಗಳಲ್ಲಿ ಬಂದು ಎಸೆದು ಹೋಗುತ್ತಿರುವುದು ನೋಡಿದರೆ ಸ್ವಚ್ಛ ಚಿಂತಾಮಣಿ ಯನ್ನಾಗಿಸಲು ಅಸಾಧ್ಯ ವಾಗಿದ್ದು, ಸಾರ್ವಜನಿಕರ ಸಹಕಾರವಿದ್ದಲ್ಲಿ ಮಾತ್ರ ಸ್ವಚ್ಛ ಚಿಂತಾಮಣಿಯ ಕನಸು ನನಸಾಗುತ್ತ ದೆಂದರು.
ಇದನ್ನೂ ಓದಿ: Chikkaballapur News: ಬಾಗೇಪಲ್ಲಿಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ; ನಾಡಿನ ಒಳಿತಿಗೆ ನಾರಿಯರ ಪ್ರಾರ್ಥನೆ
ಕ್ಷೇತ್ರದ ಅಭಿವೃದ್ಧಿಗಾಗಿರಸ್ತೆ.ಕ್ರೀಡಾಂಗಣ, ಒಳಚರಂಡಿ,ಕೆರೆ, ಚೆಕ್ ಡ್ಯಾಂ,ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದು 1500 ಕೋಟಿ ವೆಚ್ಚ ವ್ಯಯ ಮಾಡ ಲಾಗುತ್ತಿದ್ದು,ಭಕ್ತರಹಳ್ಳಿ ಅರಸನಕೆರೆ.ನೆಕ್ಕುಂದಿ ಕೆರೆ, ಕನ್ನಂಪಲ್ಲಿಕೆರೆ ಸೇರಿದಂತೆ ತಾಲ್ಲೂಕಿನ ವಿವಿಧ ಕೆರೆಗಳನ್ನು ಹಾಗೂ ಮುಂಗಾನಹಳ್ಳಿ ಹೋಬಳಿಯ ಕುಶಾವತಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ಗಳನ್ನು ನಿರ್ಮಿಸುತ್ತಿದ್ದು ಇದರಿಂದ ಒಮ್ಮೆ ಭರಪೂರ ಮಳೆಯಾದರೆ 4-5 ವರ್ಷಗಳಿಗೆ ಆಗುವಷ್ಟು ನೀರು ಸಂಗ್ರಹಣೆಯಾಗಲಿದೆಯೆಂದರು.
ಆದರೆ ವಿರೋಧ ಪಕ್ಷದವರಿಗೆ ಇವೆಲ್ಲವೂ ಗೌಣ್ಯವಾಗಿರುತ್ತದೆ ಹಾಗೂ ಅವರ ಹತ್ತು ವರ್ಷಗಳ ಅವಧಿ ಗಳಲ್ಲಿ ಯಾವುದೇ ಅಭಿವೃದ್ಧಿ ಯಾಗದಿರುವುದನ್ನು ಜನತೆಗೆ ತಿಳಿದಿದೆಯೆಂದು ಕಿಡಿಕಾರಿ ದರು.
ವಿವಿಧ ರೀತಿಯ ಸ್ಪರ್ಧೆಗ ಳಾದ ವಾಕಿಂಗ್,ಮಡಿಕೆ ಹೊಡೆಯುವುದು, ಗುಂಡುಎಸೆತ,ಮ್ಯೂಸಿಕಲ್ ಛೇರ್ ಹಾಗೂ ಚಮಚ ಮತ್ತು ನಿಂಬೆ ಹಣ್ಣಿನ ಓಟಗಳನ್ನು 60,70,80,90 ವರ್ಷ ಮೇಲ್ಪಟ್ಟರ ಶ್ರೇಣಿಗಳನ್ನು ವರ್ಗೀಕರಿಸಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಆಟೋಟಗಳನ್ನು ಏರ್ಪಡಿಸಿದ್ದರು.
ಪ್ರತಿಯೊಂದು ಸ್ಪರ್ಧೆಯಲ್ಲೂ ಮೂವರು ವಿಜೇತರನ್ನು ಆರಿಸಲಾಯಿತು.ಅವರಿಗೆ ಆಗಸ್ಟ್ 15 ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಂದು ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾ ಗುವುದೆಂದು ಸಂಘಟಕರಾದ ಡಾ. ವಿ.ಅಮರ್, ವೈ.ಬಿ.ಅಶ್ವತ್ಥ ನಾರಾಯಣ, ಹೆಚ್.ಎನ್.ಮಹೇಶ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ಜಗನ್ನಾಥ್, ನಾಮನಿರ್ದೇಶಿತ ಸದಸ್ಯ ಶ್ರೀನಿವಾಸ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ವೆಂಕಟರವಣಪ್ಪ, ಉಮೇಶ್, ಕಲ್ಯಾಣ್ ರೆಡ್ಡಿ, ಫಾರೂಕ್, ಆರ್.ಡಿ.ಮಂಜುನಾಥ್, ಎಸ್.ಮಂಜುನಾಥ್, ಮುನಿರಾಜು ಮತ್ತಿತರಿದ್ದರು.