ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA Subbareddy: ಗುಡಿಬಂಡೆ: ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಒತ್ತು: ಶಾಸಕ ಸುಬ್ಬಾರೆಡ್ಡಿ

ಇಂದು ಚಿಕ್ಕಬಳ್ಳಾಪುರದ ಪೇರೆಸಂದ್ರ ಕ್ರಾಸ್ ಬಳಿಯಿಂದ ಸಾದಲಿ, ಸೋಮೇಶ್ವರ ಮಾರ್ಗ ಗುಂಡಿ ಗಳಿಂದ ಕೂಡಿದ್ದು, ಜನರು ಸಂಚರಿಸಲು ಕಷ್ಟಕರವಾಗಿತ್ತು. ಈ ಭಾಗದ ಜನರು ಸುಮಾರು ದಿನಗಳಿಂದ ರಸ್ತೆ ದುರಸ್ಥಿಗಾಗಿ ಮನವಿ ಮಾಡಿದ್ದರು. ಅದರಂತೆ ಇದೀಗ ಸುಮಾರು 5 ಕೋಟಿ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯಲಿದೆ

ಗುಡಿಬಂಡೆ: ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಒತ್ತು

ಗುಡಿಬಂಡೆ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಸೋಮೇಶ್ವರ-ಸಾದಲಿ ಮುಖ್ಯ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.

Ashok Nayak Ashok Nayak Aug 11, 2025 12:21 AM

ಗುಡಿಬಂಡೆ: ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಭಾಗಗಳಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ (MLA S N Subbareddy)ತಿಳಿಸಿದರು.

ಗುಡಿಬಂಡೆ ಸೋಮೇನಹಳ್ಳಿ ಹೋಬಳಿ ವ್ಯಾಪ್ತಿಯ ಸೋಮೇಶ್ವರ-ಸಾದಲಿ ಮುಖ್ಯ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಚಿಕ್ಕಬಳ್ಳಾಪುರದ ಪೇರೆಸಂದ್ರ ಕ್ರಾಸ್ ಬಳಿಯಿಂದ ಸಾದಲಿ, ಸೋಮೇಶ್ವರ ಮಾರ್ಗ ಗುಂಡಿ ಗಳಿಂದ ಕೂಡಿದ್ದು, ಜನರು ಸಂಚರಿಸಲು ಕಷ್ಟಕರವಾಗಿತ್ತು. ಈ ಭಾಗದ ಜನರು ಸುಮಾರು ದಿನಗಳಿಂದ ರಸ್ತೆ ದುರಸ್ಥಿಗಾಗಿ ಮನವಿ ಮಾಡಿದ್ದರು. ಅದರಂತೆ ಇದೀಗ ಸುಮಾರು 5 ಕೋಟಿ ವೆಚ್ಚದಲ್ಲಿ ಈ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯಲಿದೆ ಎಂದರು.

ಇದನ್ನೂ ಓದಿ: Air chief marshal: ಆಪರೇಷನ್‌ ಸಿಂದೂರ್‌ನಲ್ಲಿ ಪಾಕ್ ನ 5 ಫೈಟರ್ ಜೆಟ್‌, 1 F16 ಧ್ವಂಸ; ವಾಯುಸೇನೆ ಮುಖ್ಯಸ್ಥರಿಂದ ಮಾಹಿತಿ

ಇನ್ನೂ ಈಗಾಗಲೇ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿಯನ್ನು ನೆರವೇರಿಸುವಂತೆ ಸೂಚನೆ ನೀಡಿದ್ದೇನೆ. ಗ್ರಾಮಸ್ಥರು ಸಹ ಕಾಮಗಾರಿಯ ಗುಣಮಟ್ಟ ಕಾಪಾಡುವಲ್ಲಿ ಗಮನ ಹರಿಸಬೇಕು. ಇನ್ನೂ ಮುದ್ದರೆಡ್ಡಿಹಳ್ಳಿ ಗ್ರಾಮದ ರಸ್ತೆ ಸಹ ತುಂಬಾನೆ ಹದೆಗಟ್ಟಿದ್ದು, ಜನರಿಗೆ ಸಮಸ್ಯೆಯಾಗಿದೆ. ಈ ರಸ್ತೆಯನ್ನು ದುರಸ್ಥಿ ಮಾಡಲು ಈಗಾಗಲೇ ಅನುಮೋದನೆ ಕಳುಹಿಸಲಾಗಿದೆ.

ಮುಂದಿನ ಒಂದು ತಿಂಗಳ ಒಳಗಾಗಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಭೂಮಿ ಫೂಜೆಯನ್ನು ನೆರವೇರಿ ಸುತ್ತೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಉತ್ತಮವಾದ ರಸ್ತೆಗಳನ್ನು ನಿರ್ಮಾಣ ಮಾಡಿದ್ದೇನೆ. ಆದಷ್ಟು ಶೀಘ್ರವಾಗಿ ತಾಲೂ ಕಿನ ಎಲ್ಲಾ ಗ್ರಾಮಗಳಲ್ಲಿ ಉತ್ತಮವಾದ ರಸ್ತೆ ನಿರ್ಮಾಣ ಮಾಡಿಸಿ ಜನರಿಗೆ ಅನುಕೂಲ ಮಾಡು ತ್ತೇನೆ ಎಂದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ಸುಮಂಗಲಮ್ಮ ಅಶ್ವತ್ಥಪ್ಪ, ಲೋಕೋಪಯೋಗಿ ಇಲಾಖೆಯ ಅರುಣಾ ಚಲಂ, ಪೂಜಪ್ಪ, ಕುಡಿಯುವ ನೀರು ಇಲಾಖೆಯ ನವೀನ್. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಮುಖಂಡರಾದ ಆದಿನಾರಾಯಣರೆಡ್ಡಿ, ಕೃಷ್ಣೆಗೌಡ, ದಪ್ಪರ್ತಿ ನಂಜುಂಡ ಸೇರಿದಂತೆ ಹಲವರು ಇದ್ದರು.