ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2 ದಶಕಗಳ ಬಳಿಕ ಏಷ್ಯನ್ ಕಪ್ ಮಹಿಳಾ ಫುಟ್ಬಾಲ್‌ಗೆ ಅರ್ಹತೆ ಪಡೆದ ಭಾರತ

U-20 AFC Women’s Asian Cup: ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಪೂಜಾ ಅವರು 27ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ಗೆಲುವು ಸಾಧಿಸಿತು. ಇದರಿಂದಾಗಿ ಏಳು ಅಂಕ ಪಡೆದ ಭಾರತ ಗುಂಪಿನಲ್ಲಿ ಅಗ್ರಸ್ಥಾನ ಪಡೆದು 2026ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯುವ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿತು. ಭಾರತ ಕೊನೆಯ ಬಾರಿ ಅರ್ಹತೆ ಪಡೆದದ್ದು 2006ರಲ್ಲಿ.

2 ದಶಕಗಳ ಬಳಿಕ ಏಷ್ಯನ್ ಕಪ್ ಮಹಿಳಾ ಫುಟ್ಬಾಲ್‌ಗೆ ಅರ್ಹತೆ ಪಡೆದ ಭಾರತ

Abhilash BC Abhilash BC Aug 10, 2025 11:23 PM

ಯಾಂಗೂನ್ (ಮ್ಯಾನ್ಮಾರ್): ಕ್ವಾಲಿಫೈಯರ್‌ ‘ಡಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ಮಹಿಳಾ ಫುಟ್‌ಬಾಲ್‌ ತಂಡವು ಮ್ಯಾನ್ಮಾರ್(India vs Myanmar) ತಂಡವನ್ನು 1–0 ಗೋಲಿನಿಂದ ಮಣಿಸುವ ಮೂಲಕ ಎರಡು ದಶಕಗಳ ನಂತರ ಮೊದಲ ಬಾರಿ ಎಎಫ್‌ಸಿ 20 ವರ್ಷದೊಳಗಿನವರ ಏಷ್ಯನ್ ಕಪ್ ಫುಟ್‌ಬಾಲ್‌(U-20 AFC Women’s Asian Cup) ಟೂರ್ನಿಗೆ ಅರ್ಹತೆ ಪಡೆದ ಸಾಧನೆಗೈದಿದೆ.

ಭಾನುವಾರ ನಡೆದ ನಿರ್ಣಾಯಕ ಪಂದ್ಯದಲ್ಲಿ ಪೂಜಾ ಅವರು 27ನೇ ನಿಮಿಷದಲ್ಲಿ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ಗೆಲುವು ಸಾಧಿಸಿತು. ಇದರಿಂದಾಗಿ ಏಳು ಅಂಕ ಪಡೆದ ಭಾರತ ಗುಂಪಿನಲ್ಲಿ ಅಗ್ರಸ್ಥಾನ ಪಡೆದು 2026ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆಯುವ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿತು. ಭಾರತ ಕೊನೆಯ ಬಾರಿ ಅರ್ಹತೆ ಪಡೆದದ್ದು 2006ರಲ್ಲಿ.

ಭಾರತದ ಮಹಿಳಾ ತಂಡ ಆರಂಭಿಕ ಪಂದ್ಯದಲ್ಲಿ ಇಂಡೊನೇಷ್ಯಾದೊಂದಿಗೆ ಗೋಲುರಹಿತವಾಗಿ ಡ್ರಾ ಸಾಧಿಸಿದ್ದರೆ, ಎರಡನೇ ಪಂದ್ಯದಲ್ಲಿ 7–0 ಗೋಲುಗಳಿಂದ ತುರ್ಕಮೆನಿಸ್ತಾನ ತಂಡವನ್ನು ಮಣಿಸಿತ್ತು. ಎ ಗುಂಪಿನಲ್ಲಿ ಉತ್ತರ ಕೊರಿಯಾ, ಬಿ ಗುಂಪಿನಲ್ಲಿ ವಿಯೆಟ್ನಾಂ, ಇ ಗುಂಪಿನಲ್ಲಿ ಚೀನಾ, ಎಫ್‌ ಗುಂಪಿನಲ್ಲಿ ಜಪಾನ್‌, ಎಚ್‌ ಗುಂಪಿನಲ್ಲಿ ಬಾಂಗ್ಲಾದೇಶ ಮತ್ತು ದಕ್ಷಿಣ ಕೊರಿಯಾ ತಂಡಗಳೂ ಟೂರ್ನಿಗೆ ಅರ್ಹತೆ ಪಡೆದವು.

ಇದನ್ನೂ ಓದಿ Indian football team: ಭಾರತ ಫುಟ್ಬಾಲ್‌ ತಂಡಕ್ಕೆ ಖಾಲಿದ್ ಜಮಿಲ್ ನೂತನ ಕೋಚ್‌

ಏಷ್ಯನ್ ಕಪ್ ಫುಟ್‌ಬಾಲ್‌ ಟೂರ್ನಿಗೆ ಅರ್ಹತೆ ಪಡೆದ ಭಾರತದ ಮಹಿಳಾ ತಂಡಕ್ಕೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ₹21.89 ಲಕ್ಷ ಬಹುಮಾನ ಘೋಷಿಸಿದೆ.