ಚಿಕ್ಕಬಳ್ಳಾಪುರ: 42ನೇ ವರ್ಷದ ಶ್ರೀ ಧರ್ಮರಾಯಸ್ವಾಮಿ ಕರಗ ಮಹೋತ್ಸವ ಇದೇ ಏ.25 ರಂದು ಅತ್ಯಂತ ಭಕ್ತಿಭಾವದಿಂದ ನಡೆಯಲಿದೆ ಎಂದು ಶ್ರೀ ಧರ್ಮರಾಯಸ್ವಾ ಮಿ ಕರಗದ ಅಭಿವೃದ್ಧಿ ಸಮಿತಿ ಸದಸ್ಯರು ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವಾಲಯ ಸಮಿತಿ ಸದಸ್ಯ ಅರುಣ್ ಮಾತನಾಡಿ ನಗರದ ಕೆಎಸ್‌ಆರ್‌ಟಿಸಿ ಗ್ಯಾರೇಜ್ ಎದುರಿಗಿನ ಭಗತ್‌ಸಿಂಗ್ ನಗರದ ಧರ್ಮರಾಯಸ್ವಾಮಿ ದೇವಾಲಯದ ಸನ್ನಿಧಾನದಲ್ಲಿ 42ನೇ ಕರಗ ಮಹೋ ತ್ಸವ ನಡೆಯಲಿದೆ. ಇದರಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಈ ವರ್ಷವೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ ಅವರು ಕಗರ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮಗಳ ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: Chikkaballapur News: ಗುರುತಿನ ಚೀಟಿಯಿರುವ ಶಾಲಾ ಮಕ್ಕಳಿಗೆ 10 ದಿನಗಳ ವಿಶೇಷ ರಿಯಾಯಿತಿ ಘೋಷಣೆ
ಏ.22ರಿಂದ 27ರವರೆಗೆ ಆರು ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ ಹೂವಿನ ಕರಗಕ್ಕೆ ಹೆಚ್ಚಿನ ಮಹತ್ವವಿದೆ. ಚಿತ್ತೂರು ಜಿಲ್ಲೆಯ ಕುಪ್ಪಂನ ಎಂ ಬಾಲಾಜಿ ಅವರು ಕಳೆದ 5 ವರ್ಷಗಳಿಂದ ಕರಗ ಹೊರುತ್ತಿದ್ದಾರೆ. ಏ.22ರಂದು ಸಂಜೆ 7 ಗಂಟೆಗೆ ಕಳಸ ಸ್ಥಾಪನೆ, ಗಣಪತಿ ಹೋಮ, ಧ್ವಜಾರೋಹಣ ಹಾಗೂ ವಿಶೇಷ ಹೂವಿನ ಅಲಂಕಾರ ನಡೆಯಲಿದೆ ಎಂದರು.
ಏ.23ರಂದು ಕಂದವಾರದಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಿಂದ ಪ್ರಮುಖ ಬೀದಿ ಗಳಲ್ಲಿ ಧರ್ಮರಾಯಸ್ವಾಮಿ ಹಸಿ ಕರಗ ಮೆರವಣಿಗೆ ನಡೆಯಲಿದೆ. ಏ.24ರಂದು ಭಕ್ತರಿಂದ ತಂಬಿ ಟ್ಟು ದೀಪಗಳು, ಸಪ್ತ ಕಳಸ ಕರಗ ಕಾರ್ಯಕ್ರಮಗಳು ಜರುಗಲಿವೆ. 25ರಂದು ಮಧ್ಯಾಹ್ನ 12 ಗಂಟೆಗೆ ಅರ್ಜುನ ಹಾಗೂ ದ್ರೌಪತಮ್ಮನವರ ಕಲ್ಯಾಣೋತ್ಸವ ನಡೆಯಲಿದ್ದು, ಅದೇ ದಿನ ರಾತ್ರಿ 9 ಗಂಟೆಗೆ ಶ್ರೀ ಧರ್ಮರಾಯಸ್ವಾಮಿ ಅವರ 42ನೇ ವರ್ಷದ ಕರಗ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. 26ರಂದು ದೇವಾಲಯದ ಸಮೀಪ ಅಗ್ನಿಕುಂಡ ಪ್ರವೇಶ ಕಾರ್ಯಕ್ರಮ ನಡೆಯ ಲಿದ್ದು, 27ರಂದು ವಸಂತೋತ್ಸವ ಹಾಗೂ ಒನಕೆ ಕರಗ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಕರಗ ಮಹೋತ್ಸವದ ಅಂಗವಾಗಿ ನಗರದ ರೇಷ್ಮೆಗೂಡಿನ ಮಾರುಕಟ್ಟೆ ಬಳಿ ಪ್ರತಿವರ್ಷದಂತೆ ಈ ವರ್ಷವೂ ಪೌರಾಣಿಕ ನಾಟಕ ಭಕ್ತಪ್ರಹ್ಲಾದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಮಹಾಗಣಪತಿ ಕಾರು ಚಾಲಕರು ಹಾಗೂ ಮಾಲೀಕರ ವತಿಯಿಂದ ಭಾನುವಾರ ಏ.26ರಂದು ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸ ಲಾಗಿದೆ ಎಂದರು.
ಕರಗ ಮಹೋತ್ಸವದ ಅಂಗವಾಗಿ ಮುತ್ತಿನ ಪಲ್ಲಕ್ಕಿ ಮೆರವಣಿಗೆ, ನಾಟಕ ಪ್ರದರ್ಶನಗಳು, ಪ್ರಮುಖ ಬೀದಿಗಳಲ್ಲಿ ಅನ್ನಸಂತರ್ಪಣೆ, ಕೀಲು ಕುದುರೆ ನೃತ್ಯ ಹಾಗೂ ಡೊಳ್ಳು ಕುಣಿತ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಗರಸಭೆ ಮಾಜಿ ಸದಸ್ಯ ನರಸಿಂಹಮೂರ್ತಿ ಮಾತನಾಡಿ, ಕರಗ ಮಹೋತ್ಸವದ ಅಂಗವಾಗಿ ಎಂ.ಜಿ.ರಸ್ತೆಯಲ್ಲಿ ವಾದ್ಯಗೋಷ್ಠಿ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ವಿಶೇಷ ಕಲಾ ವಿದರು ತಮ್ಮ ಜಾನಪದ ಹಾಡುಗಳ ಮೂಲಕ ಜನರನ್ನು ಆಕರ್ಷಿಸಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿನ್ನಪ್ಪ, ಸ್ವಾಮಿ, ಮುನಿರಾಜು, ಸುರೇಂದ್ರ ನಾಯ್ಡು, ಗಂಗಾಧರ್, ರವಿ, ಮುನಿಯಪ್ಪ, ಶರತ್ ಇತರರು ಉಪಸ್ಥಿತರಿದ್ದರು.