ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Manchenahalli News: ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಿಕೊಂಡ ಕೆರೆ, ರೈತರ ಭೂಮಿಗೆ ಫಲವತ್ತಾದ ಮಣ್ಣು, ಗ್ರಾಮಸ್ಥರ ಮೊಗದಲ್ಲಿ ಮಂದಹಾಸ

ಕೆರೆಗಳು ಗ್ರಾಮೀಣ ಜನತೆಯ ಜೀವನಾಡಿಗಳು, ಕೆರೆಗಳಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ. ಪ್ರಕೃತಿ ಚೆನ್ನಾಗಿದ್ದರೆ ನಮಗೆ ಉತ್ತಮ ಆರೋಗ್ಯ ನೀಡುತ್ತದೆ. ಆದರೆ ಪರಿಸರ ಮಾಲಿನ್ಯದಿಂದಾಗಿ ಇಂದು ಶುದ್ಧ ಗಾಳಿ, ನೀರು ಮತ್ತು ಆಹಾರ ಸಿಗುವುದು ಕಷ್ಟವಾಗಿದೆ.

ನಮ್ಮ ಸುತ್ತಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ ಸಂರಕ್ಷಣೆ ಮಾಡುವುದು ಮುಂದಿನ ಪೀಳಿಗೆಗೆ ಅತ್ಯವಶ್ಯಕವಾಗಿದ್ದು, ನಾವೆಲ್ಲರೂ ಬದ್ಧತೆಯಿಂದ ಅವುಗಳ ಉಳಿವಿಗಾಗಿ ಶ್ರಮಿಸಬೇಕಾಗಿದೆ ಎಂದು ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸೈ ಪುನೀತ್ ನಂಜರಾಯ್ ತಿಳಿಸಿದರು.

ಮಂಚೇನಹಳ್ಳಿ: ನಮ್ಮ ಸುತ್ತಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿ ಸಂರಕ್ಷಣೆ ಮಾಡು ವುದು ಮುಂದಿನ ಪೀಳಿಗೆಗೆ ಅತ್ಯವಶ್ಯಕವಾಗಿದ್ದು, ನಾವೆಲ್ಲರೂ ಬದ್ಧತೆಯಿಂದ ಅವುಗಳ ಉಳಿವಿ ಗಾಗಿ ಶ್ರಮಿಸಬೇಕಾಗಿದೆ ಎಂದು ಮಂಚೇನಹಳ್ಳಿ ಪೊಲೀಸ್ ಠಾಣೆಯ ಪಿಎಸೈ ಪುನೀತ್ ನಂಜರಾಯ್ ತಿಳಿಸಿದರು.

ತಾಲ್ಲೂಕಿನ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರ್ಕುಂದ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ '933ನೇ ನಮ್ಮೂರ ನಮ್ಮ ಕೆರೆಯ ಹಸ್ತಾಂತರ' ಕಾರ್ಯಕ್ರಮದಲ್ಲಿ ನಾಮ ಫಲಕ ಅನಾವರಣ ಮಾಡಿ ಹಾಗೂ ಹೊಸ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.

ಕೆರೆಗಳು ಗ್ರಾಮೀಣ ಜನತೆಯ ಜೀವನಾಡಿಗಳು, ಕೆರೆಗಳಲ್ಲಿ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರಿಗೆ ಅನುಕೂಲವಾಗಲಿದೆ. ಪ್ರಕೃತಿ ಚೆನ್ನಾಗಿದ್ದರೆ ನಮಗೆ ಉತ್ತಮ ಆರೋಗ್ಯ ನೀಡುತ್ತದೆ. ಆದರೆ ಪರಿಸರ ಮಾಲಿನ್ಯದಿಂದಾಗಿ ಇಂದು ಶುದ್ಧ ಗಾಳಿ, ನೀರು ಮತ್ತು ಆಹಾರ ಸಿಗುವುದು ಕಷ್ಟವಾಗಿದೆ. ನಾವುಗಳು ಸೇವಿಸುತ್ತಿರುವ ಆಹಾರದ ಗುಣಮಟ್ಟ ಕುಸಿಯುತ್ತಿದೆ. ಪ್ರಕೃತಿ ನಮಗೆ ನೀಡಿರುವ ಅಮೂಲ್ಯ ನೈಸರ್ಕಿಕ ಸಂಪನ್ಮೂಲಗಳನ್ನು ನಾವು ಸರಿಯಾಗಿ ರಕ್ಷಿಸದಿದ್ದರೆ, ಮುಂದಿನ ಪೀಳಿಗೆಗೆ ನಾವು ಏನನ್ನೂ ಉಳಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಗಿಡ ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ಸಮತೋಲನದಲ್ಲಿಡಬೇಕ ಎಂದು ಹೇಳಿದರು.

ಇದನ್ನೂ ಓದಿ: Chikkaballapur News: ಏಪ್ರಿಲ್ 1 ಕ್ಕೆ ಜನಗಣತಿ ಕಾರ್ಯಕ್ಕೆ ಚಾಲನೆ: ಜಿಲ್ಲಾಧಿಕಾರಿ ಜಿ.ಪ್ರಭು

ಸ್ಥಳೀಯ ಮುಖಂಡ ಜಗನ್ನಾಥ್ ಮಾತನಾಡಿ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ದಿ ಯೋಜನೆಯು ರಾಜ್ಯದ ಉದ್ದಗಲಕ್ಕೂ ಒಂದು ಸೆಮಿ ಸರ್ಕಾರದ ರೀತಿಯಲ್ಲಿ ಕೆಲಸ ಮಾಡುತ್ತಿದ್ದು ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿಗೆ ಆಸರೆಯಾಗಿದೆ. ಕೇವಲ ಆರ್ಥಿಕ ಚಟುವಟಿಕೆಗಳು ಮಾತ್ರವಲ್ಲದೆ ನೂರಾರು ಜನಪರವಾದ ಕಾರ್ಯಗಳನ್ನು ಮಾಡುತ್ತಿದೆ. ಪ್ರಕೃತಿಯ ಸಮತೋಲನ ಮತ್ತು ಅವುಗಳ ಸಂರಕ್ಷಣೆಗಾಗಿ ಕೆರೆಗಳ ಅಭಿವೃದ್ಧಿ ಮತ್ತು ಅರಣ್ಯೀಕರಣದಂತಹ ಸತ್ಕಾರ್ಯಗಳನ್ನು ಮಾಡುತ್ತಿರು ವುದು ನಿಜಕ್ಕೂ ಶ್ಲಾಘನೀಯ ಎಂದರು.

ಬರಗಾಲದಂತಹ ಭೀಕರ ಪರಿಸ್ಥಿತಿಗಳನ್ನು ಎದುರಿಸಲು ಮಳೆ ನೀರು ಕೊಯ್ಲು ಮತ್ತು ಜಲಮೂಲ ಗಳ ಸ್ವಚ್ಛತೆ ಅತಿ ಅಗತ್ಯ. ಸಾರ್ವಜನಿಕರು ಕೆರೆಗಳನ್ನು ಕೇವಲ ಸರ್ಕಾರಿ ಆಸ್ತಿ ಎಂದು ಭಾವಿಸದೆ, ತಮ್ಮ ಸ್ವಂತ ಆಸ್ತಿಯಂತೆ ಕಾಪಾಡಿಕೊಳ್ಳಬೇಕಾಗಿದೆ. ನಾವೆಲ್ಲಾ ಪ್ರಾಣಿ, ಹಕ್ಕಿ-ಪಕ್ಷಿ, ಗಿಡ-ಮರಗಳು ಇಲ್ಲದ ಈ ಜಗತ್ತಿನಲ್ಲಿ ನಮಗೆ ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.

cbpm3dharama

ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಹಮ್ಮಿ ಕೊಂಡಿರುವ ನಮ್ಮ ಊರು ನಮ್ಮ ಕೆರೆ ಯೋಜನೆಯು ರಾಜ್ಯಾದ್ಯಂತ ಯಶಸ್ವಿಯಾಗಿ ಮುನ್ನಡೆ ಯುತ್ತಿದ್ದು, ಇದೀಗ ಜಿಲ್ಲೆಯ 30ನೇ ಕೆರೆಯ ಪುನಶ್ಚೇತನ ಕಾರ್ಯ ಯಶಸ್ವಿಯಾಗಿ ಪೂರ್ಣ ಗೊಂಡಿದೆ. ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ. ಇದನ್ನು ಮಲಿನ ಮಾಡದೆ ಜನ, ಜಾನುವಾರುಗಳಿಗೆ ಆಸರೆ ತಾಣವಾಗಿ ಮಾರ್ಪಡಿಸಬೇಕಾಗಿದೆ ಎಂದು ಹೇಳಿದರು.

ಇದೇ ವೇಳೆ ಜನಜಾಗೃತಿ ವೇದಿಕೆಯ ಸದಸ್ಯರಾದ ಪಿ.ಎನ್.ಜಗನ್ನಾಥ್, ಲಕ್ಷ್ಮೀಪತಿ, ಲಕ್ಷ್ಮೀ ಮತ್ತು ಕೆರೆ ಸಮಿತಿಯ ಅಧ್ಯಕ್ಷ  ಎಸ್.ರವಿಕುಮಾರ್, ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ತಾಲ್ಲೂಕಿನ ಯೋಜನಾ ಧಿಕಾರಿ ನಾಗರಾಜ್.ಎಂ.ನಾಯ್, ವಲಯದ ಮೇಲ್ವಿಚಾರಕ ಅಜಿತ್ ಕುಮಾರ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶ್ವಿನಿ, ಕೃಷಿ ಮೇಲ್ವಿಚಾರಕ ಕುಬೇರ ನಾಯಕ, ಸೇವಾ ಪ್ರತಿನಿಧಿಗಳಾದ ಸಿರಿನ್ ತಾಜ್, ಆನಂದ, ದೀಪಿಕಾ ಹಾಗೂ ಗ್ರಾಮಸ್ಥರು ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.