ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: ಆದಿಚುಂಚನಗಿರಿ ಶ್ರೀ ಅಮೃತ ಹಸ್ತದಿಂದ ಮೇ.13ರಂದು ಒಕ್ಕಲಿಗರ ಸಂಘದ ನೂತನ ವಾಣಿಜ್ಯ ಮಳಿಗೆಗಳ ಲೋಕಾರ್ಪಣೆ

ರಾಜ್ಯದಲ್ಲಿ 2ನೇ ಶ್ರೀಮಂತ ಸಂಘವೆAಬ ಕೀರ್ತಿಗೆ ಭಾಜನವಾಗಿರುವ ತಾಲೂಕು ಒಕ್ಕಲಿಗರ ಸಂಘವು ಹತ್ತು ಹಲವು ವಿಕ್ರಮಗಳೊಂದಿಗೆ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಿ ಕೊಂಡು ಹೋಗುತ್ತಿರುವ ಸುಭದ್ರವಾದ ಸಂಘಟನೆಯಾಗಿದೆ. ಜಿಲ್ಲಾಧಿಕಾರಿಗಳ ಹಿಂಭಾಗ ವಿದ್ಯಾಥಿನಿಲಯ, ಕೆಂಪೇಗೌಡ ಕಾನೂನು ಕಾಲೇಜು, ಕಲ್ಯಾಣ ಮಂಟಪ, ಕೆಂಪೇಗೌಡರ ಕಂಚಿನ ಪ್ರತಿಮೆ, ಈಗ ನೂತನವಾಗಿ ನಿರ್ಮಾಣ ಆಗಿರುವ ವಾಣಿಜ್ಯ ಮಳಿಗೆ ಹೀಗೆ ಹತ್ತು ಹಲವು ಅಭಿವೃದ್ದಿ ಕಾರ್ಯಕ್ರಮಗಳಿಗೆ ಶ್ರೀಕಾರ ಹಾಡಿದೆ.

ಆದಿಚುಂಚನಗಿರಿ ಪೀಠಾಧಿಪತಿ ಶ್ರೀನಿರ್ಮಲಾನಂದನಾಥಮಹಾಸ್ವಾಮೀಜಿ ಅಮೃತ ಹಸ್ತದಿಂದ ಇಂದು ಒಕ್ಕಲಿಗರ ಸಂಘದ ೭ ಕೋಟ ಮೌಲ್ಯದ ನೂತನ ವಾಣಿಜ್ಯ ಮಳಿಗೆಗಳ ಲೋಕಾರ್ಪಣೆ ಆಗಲಿದೆ ಎಂದು ಸಂಘದ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ತಿಳಿಸಿದರು.

ಚಿಕ್ಕಬಳ್ಳಾಪುರ: ಒಕ್ಕಲಿಗರ ಸಂಘದಿಂದ 7 ಕೋಟಿ ವೆಚ್ಚದಲ್ಲಿ ಉತ್ತರ ದಕ್ಷಿಣ 72 ಅಡಿ, ಪೂರ್ವ ಪಶ್ಚಿಮ 220 ಅಡಿಗಳುಳ್ಳ ಎರಡು ಅಂತಸ್ತುಗಳುಳ್ಳ ಬೃಹತ್ ವಾಣಿಜ್ಯ ಸಂಕೀರ್ಣ ವನ್ನು ಬುಧವಾರ ಬೆಳಿಗ್ಗೆ 9.30ಕ್ಕೆ ಆದಿಚುಂಚನಗಿರಿ ಪೀಠಾಧಿಪತಿ ಜಗದ್ಗುರು ಶ್ರೀಶ್ರೀನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಅಮೃತ ಹಸ್ತದಿಂದ ನೆರವೇರಿಸ ಲಾಗುವುದು ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ತಿಳಿಸಿದರು.

ನಗರದ ಒಕ್ಕಲಿಗರ ಕಲ್ಯಾಣಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದರು.

ವಾಣಿಜ್ಯ ಮಳಿಗೆಗಳ ಉದ್ಘಾಟನೆಯನ್ನು ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ನೆರವೇರಿಸಲಿದ್ದು ಇವರೊಟ್ಟಿಗೆ ಶಾಖಾಮಠದ ಮಂಗಳನಾಥಸ್ವಾಮೀಜಿ ಉಪಸ್ಥಿತರಿರುವರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಪಿ.ಎನ್.ಕೇಶವರೆಡ್ಡಿ ವಹಿಸಲಿದ್ದು ಮುಖ್ಯಅತಿಥಿಗಳಾಗಿ ಸಂಸದ ಡಾ.ಕೆ.ಸುಧಾಕರ್, ಮಾಜಿ ಶಾಸಕ ಕೆ,ಪಿ,ಬಚ್ಚೇಗೌಡ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ಯಲುವಹಳ್ಳಿ ರಮೇಶ್, ನಿರ್ದೇಶಕರಾದ ಕೋನಪ್ಪರೆಡ್ಡಿ, ಡಾ.ರಮೇಶ್, ಆಗಮಿಸುವರು ಎಂದರು.

ಇದನ್ನೂ ಓದಿ: Chikkaballapur News: ಲಿಂಗತ್ವ ಅಲ್ಪ-ಸಂಖ್ಯಾತರಿಗೆ ಸಹಾನುಭೂತಿಗಿಂತ ಸಮಾನ ಅವಕಾಶ ನೀಡಿ: ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಅಕ್ಕೈ ಪದ್ಮಶಾಲಿ

ರಾಜ್ಯದಲ್ಲಿ 2ನೇ ಶ್ರೀಮಂತ ಸಂಘವೆAಬ ಕೀರ್ತಿಗೆ ಭಾಜನವಾಗಿರುವ ತಾಲೂಕು ಒಕ್ಕಲಿಗರ ಸಂಘವು ಹತ್ತು ಹಲವು ವಿಕ್ರಮಗಳೊಂದಿಗೆ ಸಮುದಾಯದ ಹಿತಾಸಕ್ತಿಯನ್ನು ಕಾಪಾಡಿ ಕೊಂಡು ಹೋಗುತ್ತಿರುವ ಸುಭದ್ರವಾದ ಸಂಘಟನೆಯಾಗಿದೆ. ಜಿಲ್ಲಾಧಿಕಾರಿಗಳ ಹಿಂಭಾಗ ವಿದ್ಯಾಥಿನಿಲಯ, ಕೆಂಪೇಗೌಡ ಕಾನೂನು ಕಾಲೇಜು, ಕಲ್ಯಾಣ ಮಂಟಪ, ಕೆಂಪೇಗೌಡರ ಕಂಚಿನ ಪ್ರತಿಮೆ, ಈಗ ನೂತನವಾಗಿ ನಿರ್ಮಾಣ ಆಗಿರುವ ವಾಣಿಜ್ಯ ಮಳಿಗೆ ಹೀಗೆ ಹತ್ತು ಹಲವು ಅಭಿವೃದ್ದಿ ಕಾರ್ಯಕ್ರಮಗಳಿಗೆ ಶ್ರೀಕಾರ ಹಾಡಿದೆ. ನೂತನ ವಾಣಿಜ್ಯ ಸಂಕಿರಣವು ಉತ್ತರ ದಕ್ಷಿಣವಾಗಿ 72 ಅಡಿ, ಪೂರ್ವಪಶ್ಚಿಮವಾಗಿ 270 ಅಡಿಗಳುಳ್ಳ ಬೃಹತ್ ಕಟ್ಟಡ ವನ್ನು ಸಮುದಾಯದ ದೇಣಿಗೆಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು ಒಟ್ಟು 28 ಕೊಠಡಿಗಳಿವೆ.ಈ ಮಳಿಗೆಗಳನ್ನು ಸಮುದಾಯದ ಸದಸ್ಯರಿಗೆ ಮಾತ್ರವೇ ಬಾಡಿಗೆಗೆ ನೀಡ ಲಾಗುವುದು ಎಂದರು.

ನಮ್ಮ ಸಂಘವು 4 ಸಾವಿರ ಸಕ್ರಿಯ ಸದಸ್ಯರನ್ನು ಒಳಗೊಂಡಿದ್ದು ಎಂದೂ ಕೂಡ ಸಮುದಾಯದ ಹಿತಾಸಕ್ತಿಗೆ ವಿರುದ್ದವಾಗಿ ಕೆಲಸ ಮಾಡದ ಆಡಳಿತ ಮಂಡಳಿಯನ್ನು ಹೊಂದಿದೆ.ಸಮರ್ಪಣಾ ಭಾವದ ಪೂರ್ವಸೂರಿಗಳ ಕಾರಣವಾಗಿ ಸಂಘವು ಸದೃಢವಾಗಿ ಬೆಳೆಂದಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ಇದಕ್ಕೆ ಕಾರಣಕರ್ತರಾದ ಎಲ್ಲರನ್ನೂ ಶಿರಭಾಗಿ ಸಮಿಸುತ್ತೇನೆ ಎಂದರು.

ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಪಿ.ಎನ್. ಕೇಶವರೆಡ್ಡಿ,ಬೊಮ್ಮನಹಳ್ಳಿ ಬಿ.ಎಂ. ರಾಮಸ್ವಾಮಿ, ಬಸವನಪರ್ತಿ ಬಿ.ಎನ್.ಚನ್ನಪ್ಪರೆಡ್ಡಿ, ಎಂ.ಪ್ರಕಾಶ್, ಬೀಡಗಾನಹಳ್ಳಿ ಮಂಜುನಾಥ್, ಕಲ್ಯಾಣ ಮಂಟಪದ ಅಧ್ಯಕ್ಷ ಚದಲಪುರ ಎನ್. ನಾರಾಯಣಸ್ವಾಮಿ, ಕಾರ್ಯದರ್ಶಿ ಎ.ವಿ.ಬೈರೇಗೌಡ, ವಿದ್ಯಾರ್ಥಿನಿಲಯದ ಅಧ್ಯಕ್ಷ ಹೊಸಹುಡ್ಯ ನಾರಾಯಣ ಸ್ವಾಮಿ, ಕಾರ್ಯದರ್ಶಿ ಕಣಜೇನಹಳ್ಳಿ ಕೆ.ನಾರಾಯಣಸ್ವಾಮಿ,ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ನಾಗರಾಜ್, ಡಾ.ಕೆಪಿ.ಶ್ರೀನಿವಾಸಮೂರ್ತಿ,ಪಿನಾಗರಾಜ್ ಚಿಕ್ಕಬಳ್ಳಾಪುರ, ಮರಳುಕುಂಟೆ ನಂಜುಂಡಪ್ಪ, ಆವಲಗುರ್ಕಿ ನಾಗರಾಜ್, ಕಂದವಾರ ಆರ್.ಎ, ನಾರಾಯಸ್ವಾಮಿ, ದೊಡ್ಡಮರಳಿ ಬಿಎಂಕೆ ಮಂಜುನಾಥ್, ಯುವ ಮುಖಂಡ ಹರೀಶ್ ಹರಿಸ್ಥಳ ಇದ್ದರು.