ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ನಾಗರೀಕತೆಯ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆ  :ಎಸ್.ಎನ್.ಸುಬ್ಬಾರೆಡ್ಡಿ

ಕಲ್ಲಿಪಲ್ಲಿ ಗ್ರಾಮದಿಂದ ಬಿಳ್ಳೂರು ರಸ್ತೆಯನ್ನು ಸುಮಾರು 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸ ಲಾಗುತ್ತಿದೆ. ನೆನೆಗುದಿಗೆ ಬಿದ್ದಿದ್ದ ಬಿಳ್ಳೂರು ರಸ್ತೆಯಿಂದ ಆಗಟಮಡಕ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 60 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಹಾಗು ಚೇಳೂರು ಮುಖ್ಯ ರಸ್ತೆಯಿಂದ ಬೈರೇಗೊಲ್ಲಪಲ್ಲಿ ಗ್ರಾಮಕ್ಕೆ ಸುಮಾರು 60 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ರಸ್ತೆ ಮತ್ತು ಶಾಲಾ ಕಟ್ಟಡಗಳಿಗೆ ಶಾಸಕರಿಂದ ಚಾಲನೆ

-

Ashok Nayak Ashok Nayak Sep 7, 2025 12:37 PM

ಬಾಗೇಪಲ್ಲಿ: ರಸ್ತೆಗಳು ನಮ್ಮ ಜೀವನದ ಅವಿಭಾಜ್ಯ ಭಾಗವಾಗಿದ್ದು, ಸಂಚಾರ, ವ್ಯಾಪಾರ ಹಾಗೂ ಸಂಪರ್ಕಕ್ಕಾಗಿ ಅವುಗಳ ಮಹತ್ವವನ್ನು ಗುರುತಿಸಿ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಅವರು ಇಂದು ತಾಲ್ಲೂಕಿನ ಆಗಟಮಡಕ ಗ್ರಾಮದಲ್ಲಿ 60 ಲಕ್ಷ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ನಾಗರಿಕತೆಯ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ. ರಸ್ತೆಯು ಗ್ರಾಮ, ಪಟ್ಟಣ, ಹಾಗೂ ನಗರಗಳನ್ನು ಒಟ್ಟುಗೂಡಿಸುವ, ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ಪಥವಾಗಿದ್ದು ಅವುಗಳ ಅಭಿವೃದ್ಧಿ ಪ್ರಮುಖ ವೆನಿಸುತ್ತದೆ. ಈ ನಿಟ್ಟಿನಲ್ಲಿ ಬಾಗೇಪಲ್ಲಿ ವಿಧಾನಸಭ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗೆ ಪ್ರಮುಖ ಆಧ್ಯತೆಯನ್ನು ನೀಡಲಾಗುತ್ತಿದ್ದು ಈಗಾಗಲೇ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು ಉಳಿದಿರುವ ರಸ್ತೆಗಳನ್ನು ಹಂತ-ಹಂತವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು. 

ಇದನ್ನೂ ಓದಿ: Bagepally News: ಶಾಸಕರ ಕರೆ ಸ್ವೀಕರಿಸದ ಅಧಿಕಾರಿ ಅಮಾನತು

ಕಲ್ಲಿಪಲ್ಲಿ ಗ್ರಾಮದಿಂದ ಬಿಳ್ಳೂರು ರಸ್ತೆಯನ್ನು ಸುಮಾರು 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ನೆನೆಗುದಿಗೆ ಬಿದ್ದಿದ್ದ ಬಿಳ್ಳೂರು ರಸ್ತೆಯಿಂದ ಆಗಟಮಡಕ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 60 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಹಾಗು ಚೇಳೂರು ಮುಖ್ಯ ರಸ್ತೆಯಿಂದ ಬೈರೇಗೊಲ್ಲಪಲ್ಲಿ ಗ್ರಾಮಕ್ಕೆ ಸುಮಾರು 60 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ರಸ್ತೆಗಳನ್ನು ಉತ್ತಮ ಗುಣಮಟ್ಟದಿಂದ ಮಾಡಲು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು ಕಾಮಗಾರಿ ನಡೆಯುವ ಸಂದರ್ಭದಲ್ಲಿ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಗಮನವನ್ನು ಹರಿಸಬೇಕಾಗುತ್ತದೆ ಎಂದರು.

ಇದರ ಜೊತೆಗೆ ಸುಜ್ಞಾನಂಪಲ್ಲಿ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡ ಮತ್ತು ಅಂಗನವಾಡಿ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು. ನಂತರ ಆಗಟಮಡಕ ಗ್ರಾಮದಲ್ಲಿ ನಿರ್ಮಿಸಲಾಗಿದ್ದ ನೂತನ ಶಾಲಾ ಕಟ್ಟಡವನ್ನು ಶಾಸಕರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಲ್ಲಿಪಲ್ಲಿ ವೆಂಕಟೇಶ್, ವಿ.ಮಂಜುನಾಥರೆಡ್ಡಿ, ಬೂರಗ ಮಡುಗು ನರಸಿಂಹಪ್ಪ, ಕೆ.ಸಿ.ಚಂದ್ರಶೇಖರರೆಡ್ಡಿ, ಪಿ.ಮಂಜನಾಥರೆಡ್ಡಿ, ಎಸ್.ಎಸ್.ರಮೇಶ್ ಬಾಬು, ಶಂಕರರೆಡ್ಡಿ, ಲಕ್ಷೀಪತಿರೆಡ್ಡಿ, ಟಿ.ಶ್ರೀನಿವಾಸ್, ಲಕ್ಷ್ಮೀನಾರಾಯಣರೆಡ್ಡಿ, ವೆಂಕಟರವಣ, ಸತ್ಯಪ್ಪ, ಸುಧಾಕರರೆಡ್ಡಿ, ಗೋಪಾಲರೆಡ್ಡಿ, ವೆಂಕಟರಾಮರೆಡ್ಡಿ, ಜಿ.ರಾಮಕೃಷ್ಣ, ಪಾಪಿರೆಡ್ಡಿ, ಎ.ಆರ್.ಗಂಗುಲಪ್ಪ, ಶ್ರೀನಿವಾಸ್, ವೇಣುಗೋಪಾಲ್ ಚಿನ್ನವೆಂಕಟರಾಯಪ್ಪ, ಎಸ್.ವೆಂಕಟರವಣ, ರಾಮಚಂದ್ರ, ನಂಜುಂಡಪ್ಪ, ಕೃಷ್ಣಾರೆಡ್ಡಿ, ನಂಜಿರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.