ಚಿಕ್ಕಬಳ್ಳಾಪುರ: 2026 ರಿಂದ 2031ರ ಅವಧಿಗೆ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ(Karnataka State Primary School Teachers Association Elections)ಯು ಮೇ.1ರಂದು ನಡೆದಿದ್ದು 12 ನಿರ್ದೇಶಕ ಸ್ಥಾನಗಳ ಪೈಕಿ 4 ಮಂದಿ ಮಹಿಳಾ ಅಭ್ಯರ್ಥಿಗಳು 8 ಮಂದಿ ಪುರುಷ ಅಭ್ಯರ್ಥಿಗಳನ್ನು 469 ಮತದಾರರು ಮತ ಚಲಾಯಿಸುವ ಮೂಲಕ ಚುನಾಯಿಸಿದ್ದಾರೆ.
ನಗರದ ಡಿಡಿಪಿಐ ಕಚೇರಿ ಆವರಣದಲ್ಲಿರುವ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ 583 ಮತದಾರರ ಪೈಕಿ 469 ಅರ್ಹ ಮತದಾರರು ಮತ ಚಲಾಯಿಸಿದ್ದು ಪಾರದರ್ಶಕವಾಗಿ ಚುನಾವಣೆ ನಡೆಸಲು ಸಹಕಾರ ನೀಡಿದ್ದಾರೆ.
ಶುಕ್ರವಾರ ಬೆಳಿಗ್ಗೆ 8.30ಕ್ಕೆ ಪ್ರಾರಂಭವಾದ ಚುನಾವಣೆ ಸಂಜೆ 4.30ಕ್ಕೆ ಮುಕ್ತಾಯವಾಯಿತು. ಮತ ಎಣಿಕೆ ಕಾರ್ಯವು ಸಂಜೆ 6.30ಕ್ಕೆ ಪ್ರಾರಂಭವಾಗಿ ರಾತ್ರಿ 12.15ರತನಕ ನಡೆಯಿತು.
ಇದನ್ನೂ ಓದಿ: Chikkaballapur News: ಸಮಾಧಾನ ರಾಜೀ ಮೂಲಕ ನ್ಯಾಯದಾನ ಸಕಾಲದಲ್ಲಿ ಕಾನೂನಿನ ಉಚಿತ ನೆರವು: ನ್ಯಾ. ಶಿಲ್ಪ.ಬಿ.
ಚುನಾವಣಾಧಿಕಾರಿಯಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದ ಪೆರೇಸಂದ್ರ ಪ್ರೌಢಶಾಲೆಯ ನರಸಿಂಹರೆಡ್ಡಿ ಘೋಷಣೆ ಮಾಡಿದಂತೆ ಮಹಿಳಾ ವಿಭಾಗಕ್ಕೆ 7 ಮಂದಿ ಸ್ಪರ್ಧೆ ಮಾಡಿದ್ದು ಅಪ್ಸರ- 260, ಚಂದ್ರಕಲಾ-193, ಜಯಭಾರತಿ-255, ಲಾವಣ್ಯ-203, ವಹೀದಾಭಾನು-313, ಪ್ರೇಮಾವತಿ-205, ವಿಜಯಲಕ್ಷ್ಮೀ-179 ಮತಗಳನ್ನು ಪಡೆದಿದ್ದರು. ಈ ಪೈಕಿ ಅತಿ ಹೆಚ್ಚು ಮತಗಳನ್ನು ಪಡೆದ ವಹಿದಾ ಭಾನು-313, ಅಪ್ಸರ-260, ಜಯಭಾರತಿ-255, ಪ್ರೇಮಾವತಿ-205, ನಾಲ್ಕು ಮಂದಿ ಆಯ್ಕೆಯಾದರು.
ಪುರುಷ ವಿಭಾಗದ 8 ಮಂದಿ ವಿಜೇತರು.
೧.ಶಿವಕುಮಾರ್-307, ೨.ನಾಗರಾಜ್ (ಮಚ್ಚೆ)-284, ೩. ಗೋವಿಂದರಾಜ್ ಯಾದವ್-272 ೪. ಎನ್.ಮಂಜುನಾಥ್-265, ೫. ಶ್ರೀನಿವಾಸ್ (ಟೌನ್)-267, ೬.ಶ್ರೀನಿವಾಸ್.ಟಿ.ವಿ-259, ೭.ಶ್ರೀರಾಮ್-247, ೮.ಶ್ರೀನಿವಾಸ್.ಕೆ.ಜಿ.-245 ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಉಳಿದಂತೆ, ಕಣದಲ್ಲಿದ್ದ ಉಳಿದ 7 ಅಭ್ಯರ್ಥಿಗಳು ಪಡೆದ ಮತಗಳು ಹೀಗಿವೆ. ೧.ಮಂಜುನಾಥ ಸ್ವಾಮಿ -144, ನಜೀರ್-216, ರಾಘವೇಂದ್ರರಾವ್-129, ಶ್ರೀನಿವಾಸ್(ಪಟೇಲ್)-163, ಸುಬ್ಬಾ ರೆಡ್ಡಿ-177, ವೆಂಕಟೇಶ್ ಎಂ.ಎನ್.-162, ವಿಷ್ಣುವರ್ಧನ್-194 ಮತಗಳನ್ನು ಪಡೆದು ಪರಾಭವ ಗೊಂಡಿದ್ದಾರೆ.
![]()
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಚುನಾವಣೆ ಯಶಸ್ವಿಯಾಗಿ ನಡೆದಿದ್ದು 4 ಮಹಿಳಾ ಶಿಕ್ಷಕರು, 8 ಮಂದಿ ಪುರುಷ ಶಿಕ್ಷಕರು ಒಟ್ಟು 12 ಮಂದಿ ಆಯ್ಕೆಯಾಗಿದ್ದು ವಿಜೇತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತೀವ್ರವಾದ ಸ್ಪರ್ಧೆಯ ನಡುವೆ 12 ಮಂದಿಯನ್ನು ಆಯ್ಕೆ ಮಾಡುವ ಮೂಲಕ ಶಿಕ್ಷಕರ ಪ್ರತಿನಿಧಿಗಳಾಗಿ ಉತ್ತಮ ಕೆಲಸ ಮಾಡಲು ಆಶೀರ್ವಾದ ಮಾಡಿದ್ದಾರೆ. ಚುನಾವಣೆ ಮುಗಿದಿದ್ದು ಒಂದೇ ಕುಟುಂಬದ ಸದಸ್ಯರಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತದಾರರ ನಂಬಿಕೆಯನ್ನು ಉಳಿಸಿಕೊಂಡು ಸಂಘದ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತೀರಿ ಎಂದು ಆಶಿಸಿದರು.
ಪರೇಸಂದ್ರ ಸುನೀಲ್, ರಾಜ್ಯ ಕಾರ್ಯದರ್ಶಿ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಚಿಕ್ಕಬಳ್ಳಾಪುರ.
![]()
2026-2031ರ ಅವಧಿಗೆ ಆಯ್ಜೆಯಾದ 12 ಮಂದಿ ನೂತನ ನಿರ್ದೇಶಕರಿಗೆ ಸರಕಾರಿ ನೌಕರರ ಸಂಘದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.ಗೆದ್ದಿರುವ ಎಲ್ಲಾ ನಿರ್ದೇಶಕರು ನಿಮ್ಮ ಶಿಕ್ಷಕ ವೃತ್ತಿಯ ಜತೆಗೆ ಸಂಘದ ಪದಾಧಿಕಾರಿಗಳಾಗಿ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸಮಯವನ್ನು ಮೀಸಲಾಗಿಡಬೇಕಾಗುತ್ತದೆ. ಸಂಘಕ್ಕೆ ಉತ್ತಮ ರೀತಿಯಲ್ಲಿ ಹೆಸರು ಬರುವಂತೆ ಕೆಲಸ ಮಾಡಿ. ಏನೇ ಭಿನ್ನಾಭಿಪ್ರಾಯ ಇದ್ದರೂ ಅದನ್ನೆಲ್ಲಾ ಬದಿಗೊತ್ತಿ ಶಿಕ್ಷಕರ ಕಲ್ಯಾಣವೇ ಗುರಿಯಾಗಿರಲಿ.ಮುಂದೆ ಬರುವ ತಾಲೂಕು ಅಧ್ಯಕ್ಷರ ಚುನಾವಣೆ, ಜಿಲ್ಲಾಧ್ಯಕ್ಷರ ಚುನಾವಣೆ ರಾಜ್ಯಾಧ್ಯಕ್ಷರ ಚುನಾವಣೆ ಗಳಲ್ಲಿ ತಾಲೂಕಿನ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕಿದೆ. ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಿರುವ ನರಸಿಂಹ ರೆಡ್ಡಿ, ಫಣೀಂದ್ರ, ಮಂಜುನಾಥ್ ಸೇರಿ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
-ನಾರಾಯಣಸ್ವಾಮಿ. ಜಿಲ್ಲಾಧ್ಯಕ್ಷರು ಕರ್ನಾಟಕ ರಾಜ್ಯ ಸರಕಾರಿ ಸರಕಾರಿ ನೌಕರರ ಸಂಘ, ಚಿಕ್ಕಬಳ್ಳಾಪುರ.