ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gauribidanur News: 21ನೇ ದಿನಕ್ಕೆ ಕಾಲಿಟ್ಟ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟು ಹೋರಾಟ : ಪರಿಹಾರಕ್ಕೆ ಆಗ್ರಹ

ವಾಟದಹೊಸಹಳ್ಳಿ ಅಚ್ಚುಕಟ್ಟು-ದಾರರ ಸಂಘದ ತಾಲ್ಲೂಕು ಅಧ್ಯಕ್ಷ ಮಾಳಪ್ಪ ಮಾತನಾಡಿ, 'ವಾಟದ ಹೊಸಳ್ಳಿ ಕೆರೆಯ ನೀರನ್ನು ಗೌರಿಬಿದನೂರು ನಗರಕ್ಕೆ ಹರಿಸುವ ಯೋಜನೆ ವಿರೋಧಿಸಿ ತಾಲ್ಲೂಕು ಆಡಳಿತ ಸೌಧದ ಮುಂದೆ ೨೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಈವರೆಗೆ ಜಿಲ್ಲಾಡಳಿತ, ತಾಲ್ಲೂಕು ಅಥವಾ ಶಾಸಕರು ನಮ್ಮ ಗೋಳು ಕೇಳಲು ಅಥವಾ ಸೌಜನ್ಯ ಕ್ಕಾದರೂ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

21ನೇ ದಿನಕ್ಕೆ ಕಾಲಿಟ್ಟ ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟು ಹೋರಾಟ

Ashok Nayak Ashok Nayak Aug 24, 2025 8:31 PM

ಗೌರಿಬಿದನೂರು: ವಾಟದಹೊಸಹಳ್ಳಿ ಕೆರೆಯ ನೀರನ್ನು ಗೌರಿಬಿದನೂರು ನಗರಕ್ಕೆ ಹರಿಸುವ ಯೋಜನೆ ವಿರೋಧಿಸಿ ತಾಲ್ಲೂಕು ಕಚೇರಿ ಎದುರು ವಾಟದ ಹೊಸಹಳ್ಳಿ ಕೆರೆ ಅಚ್ಚುಕಟ್ಟುದಾರರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯು ಭಾನುವಾರ 21ನೇ ದಿನಕ್ಕೆ ಕಾಲಿಟ್ಟಿದೆ.ಈ ಪ್ರತಿಭಟನೆಯಲ್ಲಿ ಕೃಷ್ಣರಾಜಪುರ ಮತ್ತು ತಾಂಡದ ನಿವಾಸಿಗಳು ಪಾಲ್ಗೊಂಡರು.

ವಾಟದಹೊಸಹಳ್ಳಿ ಅಚ್ಚುಕಟ್ಟು-ದಾರರ ಸಂಘದ ತಾಲ್ಲೂಕು ಅಧ್ಯಕ್ಷ ಮಾಳಪ್ಪ ಮಾತನಾಡಿ, 'ವಾಟದಹೊಸಳ್ಳಿ ಕೆರೆಯ ನೀರನ್ನು ಗೌರಿಬಿದನೂರು ನಗರಕ್ಕೆ ಹರಿಸುವ ಯೋಜನೆ ವಿರೋಧಿಸಿ ತಾಲ್ಲೂಕು ಆಡಳಿತ ಸೌಧದ ಮುಂದೆ ೨೦ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ, ಈವರೆಗೆ ಜಿಲ್ಲಾಡಳಿತ, ತಾಲ್ಲೂಕು ಅಥವಾ ಶಾಸಕರು ನಮ್ಮ ಗೋಳು ಕೇಳಲು ಅಥವಾ ಸೌಜನ್ಯ ಕ್ಕಾದರೂ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Gauribidanur News: ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ : ಜಿ.ಕೆ.ಹೊನ್ನಯ್ಯ,

ರೈತರು ದೇಶದ ಬೆನ್ನೆಲುಬು" ಎಂಬುದು ರೈತರ ಮಹತ್ವವನ್ನು ಸೂಚಿಸುವ ಮಾತು. ರೈತರ ಕಠಿಣ ದುಡಿಮೆಯಿಂದ ದೇಶಕ್ಕೆ ಅಗತ್ಯವಾದ ಆಹಾರ ಲಭ್ಯವಾಗುತ್ತದೆ, ಮತ್ತು ದೇಶದ ಆರ್ಥಿಕತೆಗೆ ಅವರು ಪ್ರಮುಖ ಕೊಡುಗೆ ನೀಡುತ್ತಾರೆ. ರೈತರ ಶ್ರಮವನ್ನು ಅವಲಂಬಿಸಿ ದೇಶದ ಜನತೆ ಬದುಕುತ್ತಾರೆ, ಆದ್ದರಿಂದ ಅವರೇ ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಬಲಪಡುತ್ತದೆ. ದೇಶದ ಅಭಿವೃದ್ಧಿಯಲ್ಲಿ ರೈತರ ಪಾತ್ರ ಹಿರಿದು. ಅವರ ಬೆವರು ಸುರಿಸುವ ದುಡಿಮೆಯಿಂದಲೇ ದೇಶ ಮುಂದುವರೆಯಲು ಸಾಧ್ಯ. ಅಂತಹ ರೈತರು ಇಂದು ಧರಣಿಗೆ ಕುಳಿತು 20 ದಿನಗಳು ಕಳೆದರೂ ಸಹ ಸ್ಪಂದಿಸದ ತಾಲ್ಲೂಕು  ಜನಪ್ರತಿನಿಧಿಗಳು,ಸರ್ಕಾರಿ ಅಧಿಕಾರಿಗಳು.

'ಈ ಹೋರಾಟವನ್ನು ಇಲ್ಲಿಗೇ ನಿಲ್ಲಿಸುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಶಾಸಕರು ತಾಲ್ಲೂಕಿನ ಎಲ್ಲ ಪಕ್ಷಗಳ ಮುಖಂಡರೊAದಿಗೆ ಸರ್ವಪಕ್ಷ ಸಭೆ ಕರೆಯಬೇಕು. ಅಲ್ಲಿ, ವಾಟದ ಹೊಸಹಳ್ಳಿ ಕೆರೆಯ ನೀರು ಗೌರಿಬಿದನೂರು ನಗರಕ್ಕೆ ಹರಿಸುವ ಯೋಜನೆಯಿಂದಾಗುವ ಸಾಧಕ-ಬಾಧಕಗಳನ್ನು ಚರ್ಚಿಸಬೇಕು. ಆ ಮೂಲಕ ರೈತರಿಗೆ ಪೂರಕವಾಗುವ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು' ಎಂದು ಎಚ್ಚರಿಕೆ ನೀಡಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, 'ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತವು ರೈತರ ಬಗ್ಗೆ ಉದಾಸೀನ ಮನೋಭಾವ ಹೊಂದಿವೆ. ರೈತರ ಈ ಹೋರಾಟಕ್ಕೆ ಈವರೆಗೂ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಸ್ಪಂದನೆ ನೀಡಿಲ್ಲ. ಕ್ಷೇತ್ರದ ಶಾಸಕರು ರೈತರ ಬಗ್ಗೆ ಕಾಳಜಿ ಹೊಂದಿದ್ದರೆ, ತಮ್ಮ ಹಠಮಾರಿತನದ ಧೋರಣೆ ಮತ್ತು ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು, ರೈತರ ಜೊತೆಗೆ ಚರ್ಚಿಸಬೇಕು' ಎಂದು ಒತ್ತಾಯಿಸಿದರು.

ಪ್ರಚಾ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಆರ್. ಆನ್.ರಾಜು ಮಾತನಾಡಿ, ನಾಟದಹೊಸಹಳ್ಳಿ ಕೆರೆಯ ನೀರು ನಗರಕ್ಕೆ ತರುವುದು ಅವೈಜ್ಞಾನಿಕ ಯೋಜನೆಯಾಗಿದ್ದು ರೈತರನ್ನು ಒಕ್ಕಲೆಬ್ಬಿಸುವ ಕೆಲಸವಾಗುತ್ತಿದೆ. ಎತ್ತಿನಹೊಳೆ ಯೋಜನೆದು ನೀರು ಮೊದಲು ಕೆರೆಗೆ ಹರಿಸಿ, ಅನಂತರ ವಾಟದ ಹೊಸಹಳ್ಳಿ ಕೆರೆ ನೀರು ನಗರಕ್ಕೆ ತೆಗೆದುಕೊಂಡು ಹೋಗಲಿ ಎಂಬುದು ರೈತರೆ ಬೇಡಿಕೆಯಾಗಿದ್ದು ಈ ಬಗ್ಗೆ ಜನಪ್ರತಿನಿಧಿಗಳು, ಸಂಬAಧಪಟ್ಟ ಅಧಿಕಾರಿಗಳು ರೈತರೊಂದಿಗೆ ಈ ಯೋಜನೆಯ ಸಾಧಕ-ಬಾಧಕಗಳನ್ನು ಚರ್ಚಿಸದೆ. ಯೋಜನೆ ಜಾರಿಗೆ ಮುಂದಾಗಿರುವ ಉದ್ದೇಶನಾದರೂ ಏನು ಎಂದು ಪ್ರಶ್ನಿಸಿದರು.

ಈ ವೇಳೆ ಎಕೆಆರ್‌ಎಸ್ ಸಂಘದ ಅಧ್ಯಕ್ಷ ರವಿಚಂದ್ರರೆಡ್ಡಿ, ಪ್ರಜಾ ಸಂಘರ್ಷ ಸಮಿತಿಯ ಆರ್.ಎನ್. ರಾಜು, ಬಾಬುರೆಡ್ಡಿ, ಮಂಜುನಾಥ, ಶಂಕರ್ ರೆಡ್ಡಿ, ರಾಮಕೃಷ್ಣಪ್ಪ, ವೆಂಕಟೇಶ್ ನಾಯಕ್, ಸಂದೀಪ್, ಕೆ.ಸಿ. ರಾಜಣ್ಣ ಪಾಲ್ಗೊಂಡಿದ್ದರು.