ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Iftar: ಸಮಾಜದಲ್ಲಿ ಉಳ್ಳವರು ತಮ್ಮ ಆದಾಯದ ಒಂದು ಭಾಗವನ್ನು ಬಡವರಿಗೆ ದಾನ ಮಾಡುವ ಮೂಲಕ ಮಾನವೀಯತೆ ಉಳಿಸಬೇಕು: ಶಾಸಕ ಎಸ್. ಎನ್.ಸುಬ್ಬಾರೆಡ್ಡಿ

ರಂಜಾನ್ ಹಬ್ಬದ ಅಂಗವಾಗಿ ಉಪವಾಸವಿರುವ ಮುಸ್ಲಿಂ ಬಾಂಧವರಿಗಾಗಿ ಕೊಡಿಕೊಂಡೆ ರಸ್ತೆಯಲ್ಲಿರುವ ಶಾದಿ ಮಹಲ್ ನಲ್ಲಿ ಏರ್ಪಡಿಸಿದ್ದ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಹಾಗೂ ಮುಸ್ಲಿಂ ಸಮುದಾಯದವರಿಗೆ ಬಿರಿಯಾನಿ ಬಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಬಾಗೇಪಲ್ಲಿ: ರಂಜಾನ್ ತಿಂಗಳು ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಪವಿತ್ರವಾದದ್ದು.ಈ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಬಾಗೇಪಲ್ಲಿ ತಾಲ್ಲೂಕು ಮುಸ್ಲಿಂ ಸಮುದಾಯದವರಿಗೆ ಇಫ್ತಾರ್ ಕೂಟ(Iftar party) ಆಯೋಜಿಸಿದ್ದೇನೆ ಎಂದು ಶಾಸಕ ಎಸ್. ಎನ್.ಸುಬ್ಬಾರೆಡ್ಡಿ(MLA S.N.Subbareddy) ಹೇಳಿದರು.

ರಂಜಾನ್ ಹಬ್ಬದ ಅಂಗವಾಗಿ ಉಪವಾಸವಿರುವ ಮುಸ್ಲಿಂ ಬಾಂಧವರಿಗಾಗಿ ಕೊಡಿಕೊಂಡೆ ರಸ್ತೆಯಲ್ಲಿರುವ ಶಾದಿ ಮಹಲ್ ನಲ್ಲಿ ಏರ್ಪಡಿಸಿದ್ದ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಹಾಗೂ ಮುಸ್ಲಿಂ ಸಮುದಾಯದವರಿಗೆ ಬಿರಿಯಾನಿ ಬಡಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇದನ್ನೂ ಓದಿ: Bagepally News: ಒಕ್ಕೂಟದ ಅಭಿವೃದ್ದಿಗೆ ಹಾಲು ಉತ್ಪಾಧಕರು ಕೈಜೋಡಿಸಿ: ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ

ಸಮಾಜದಲ್ಲಿ ಉಳ್ಳವರು ತಮ್ಮ ಆದಾಯದ ಒಂದು ಭಾಗವನ್ನು ಬಡವರಿಗೆ ದಾನ ಮಾಡುವ ಮೂಲಕ ಮಾನವೀಯತೆಯನ್ನು ಉಳಿಸಬೇಕು ಎಂದು ತಿಳಿಸಿದರು.

cbpm5snsubbareddy

ಅಲ್ಲಾಹನ ಕೃಪೆ ಎಲ್ಲರ ಮೇಲೂ ಇರಲಿ. ಈ ಪವಿತ್ರ ತಿಂಗಳಲ್ಲಿ ಕಠಿಣ ಉಪವಾಸ ಆಚರಿಸು ತ್ತಿರುವ ಮುಸ್ಲಿಂ ಬಾಂಧವರ ಪ್ರಾರ್ಥನೆಗಳನ್ನು ದೇವರು ಸ್ವೀಕರಿಸಿ ದೇಶದಲ್ಲಿ ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿದರು.

ನೀವು ತೋರಿಸುತ್ತಿರುವ ಪ್ರೀತಿ ಮತ್ತು ಸಹಕಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಹಾಗೂ ಮುಂದೆ ಬರುವ ರಂಜಾನ್ ಹಾಗೂ ಉಗಾದಿ ಹಬ್ಬದ ಶುಭಾಶಯಗಳನ್ನು ಕೋರಿದರು
ಈ ಸಂದರ್ಭದಲ್ಲಿ ಮಂಜುನಾಥ್ ರೆಡ್ಡಿ,ನರೇಂದ್ರ, ನರಸಿಂಹಪ್ಪ, ಆರ್.ಹನುಮಂತ ರೆಡ್ಡಿ, ಪಿ.ಮಂಜುನಾಥ್ ರೆಡ್ಡಿ ಹಾಗೂ ಇತರರು ಹಾಜರಿದ್ದರು