ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chetan Ahimsa: ಯುವಜನರೇ ಬದಲಾವಣೆಯ ಶಕ್ತಿ: ಚೇತನ್ ಅಹಿಂಸಾ

ಇಂದಿನ ರಾಜಕೀಯದಲ್ಲಿ ಜನರ ಮೂಲಭೂತ ಸಮಸ್ಯೆಗಳಿಗಿಂತ ವೈಯಕ್ತಿಕ ಹಾಗೂ ಪಕ್ಷದ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂಬುದು ತಮ್ಮ ಅಭಿಪ್ರಾಯವಾಗಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವುದಕ್ಕಿಂತ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ

ಶಿಡ್ಲಘಟ್ಟ: ಜಾತಿ–ಧರ್ಮದ ಎಲ್ಲೆಗಳನ್ನು ಮೀರಿ ಯುವಜನರು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಒಂದಾಗಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹೊಸ ರಾಜಕೀಯ ಚಿಂತನೆಗೆ ಯುವಶಕ್ತಿ ಮುನ್ನಡೆ ನೀಡಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ(Chetan Ahimsa) ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರಾಜಕೀಯ ಮುನ್ನೋಟ ಹಾಗೂ ಸಮಾನತೆ ಸಭೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಶಿಡ್ಲಘಟ್ಟ ಭಾಗವು ಸಾಮಾಜಿಕ ಮತ್ತು ಜನಪರ ಹೋರಾಟಗಳ ಹಿನ್ನೆಲೆ ಹೊಂದಿದೆ. ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಕಾನ್ಶಿರಾಮ್ ಅವರ ವಿಚಾರಧಾರೆಗಳು ಈ ಭಾಗದ ಹಲವು ಹೋರಾಟಗಳಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.

ಇದನ್ನೂ ಓದಿ: Actor Chetan Ahimsa: ಹೊಸ ರಾಜಕೀಯ ಪಕ್ಷ ಸ್ಥಾಪಿಸುವುದಾಗಿ ನಟ ಚೇತನ್‌ ಅಹಿಂಸಾ ಘೋಷಣೆ; ಪ್ರಣಾಳಿಕೆಯಲ್ಲಿ ಏನಿದೆ?

ಇಂದಿನ ರಾಜಕೀಯದಲ್ಲಿ ಜನರ ಮೂಲ ಸಮಸ್ಯೆಗಳಿಗಿಂತ ವೈಯಕ್ತಿಕ ಹಾಗೂ ಪಕ್ಷದ ಹಿತಾಸಕ್ತಿ ಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂಬುದು ತಮ್ಮ ಅಭಿಪ್ರಾಯವಾಗಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವುದಕ್ಕಿಂತ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯ ಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಯುವಕರು ಕೇವಲ ಮತದಾರರಾಗಿ ಉಳಿಯದೆ ರಾಜಕೀಯದ ಭಾಗವಾಗಿ ಸಮಾಜದ ಬದಲಾ ವಣೆಗೆ ಮುಂದಾಗಬೇಕು. ನಿರುದ್ಯೋಗ, ಭ್ರಷ್ಟಾಚಾರ, ಜಾತಿ ಹಾಗೂ ಲಿಂಗ ತಾರತಮ್ಯ ಸೇರಿದಂತೆ ಜನರ ಸಮಸ್ಯೆಗಳ ಕುರಿತು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮುಂದಿನ ಹಂತವಾಗಿ 2027ರ ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಯುವಜನರ ಬೃಹತ್ ವೇದಿಕೆ ಆಯೋಜಿಸಿ, ತಮ್ಮ ಪಕ್ಷದ ಚಿಹ್ನೆ ಹಾಗೂ ರಾಜಕೀಯ ವೇದಿಕೆಯನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ರಾಜ್ಯದ ಯುವಜನರನ್ನು ಒಗ್ಗೂಡಿಸಿ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಜನಪರ ವಿಚಾರಗಳ ಆಧಾರದ ಮೇಲೆ ಹೊಸ ರಾಜಕೀಯ ಚಳವಳಿಗೆ ರೂಪ ನೀಡುವ ಪ್ರಯತ್ನ ಮಾಡಲಾಗುವುದು ಎಂದು ಚೇತನ್ ಅಹಿಂಸಾ ತಿಳಿಸಿದರು.

ಸಭೆಯಲ್ಲಿ ಮೂರ್ತಿ ನಾಯಕ್, ಸುರೇಶ್-ಭಗತ್, ಮುರಳಿ ಕುಮಾರ್, ಶ್ರೀನಿವಾಸ್, ನರೇಶ್ ಬಾಬು, ಶಿವಕುಮಾರ್, ಮುನಿರಾಜು, ಆರ್.ರವೀಂದ್ರ ಹಾಗೂ ರಾಮಚಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.