ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

MLA K.H.Puttaswamy Gowda: ನನ್ನನ್ನು ನಂಬಿ ಬರುವವರನ್ನು ಎಂದಿಗೂ ಕೈಬಿಡುವ ಪ್ರಶ್ನೆಯೇ ಇಲ್ಲ: ಶಾಸಕ ಪುಟ್ಟಸ್ವಾಮಿಗೌಡ ಹೇಳಿಕೆ

ತಾಲೂಕಿನಲ್ಲಿ ಯುವಕರಿಗೆ ರಾಜಕೀಯ ಶಕ್ತಿ ಮತ್ತು ವಿದ್ಯಾವಂತ ಯುವಕರಿಗೆ  ಹಲವಾರು ಉದ್ಯೋಗದ  ಅವಕಾಶಗಳನ್ನು ಸರ್ಕಾರ ಮತ್ತು ನನ್ನ ಸಂಸ್ಥೆಯ ಮೂಲಕ ಕಲ್ಪಿಸಿ ಕೊಡ ಲಾಗುತ್ತಿದೆ. ಆದ್ದರಿಂದ ಪಕ್ಷಾತೀತವಾಗಿ ಯುವಕರು ಸೇರ್ಪಡೆಯಾಗುತ್ತಿದ್ದಾರೆ. ಕ್ರಿಯಾಶೀಲ ಯುವಕರ ಸೇರ್ಪಡೆಯಿಂದಾಗಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ

ನನ್ನನ್ನು ನಂಬಿ ಬರುವವರನ್ನು ಎಂದಿಗೂ ಕೈಬಿಡುವ ಪ್ರಶ್ನೆಯೇ ಇಲ್ಲ  ಎಂದು ಶಾಸಕ ಪುಟ್ಟಸ್ವಾಮಿಗೌಡ ಹೇಳಿದರು.

ಗೌರಿಬಿದನೂರು: ನನ್ನನ್ನು ನಂಬಿ ಬರುವವರನ್ನು ಎಂದಿಗೂ ಕೈಬಿಡುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಎಲ್ಲ ಸಮುದಾಯ, ಎಲ್ಲ ಜನರೂ ನನ್ನ ದೃಷ್ಠಿಯಲ್ಲಿ ಸಮಾನರು. ಎಲ್ಲರ ಹಿತ ಕಾಯುವ ಕೆಲಸ ಮಾಡುತ್ತಿದ್ದೇನೆ, ಕ್ಷೇತ್ರದ ಸಮಗ್ರ ಅಭಿವೃದ್ಧಿ ಮೂಲಕ ಮತ ಕೊಟ್ಟು ಗಿಲ್ಲಿಸಿರುವ ನಿಮ್ಮ ಋಣ ತೀರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ(MLA K.H.Puttaswamy Gowda) ವಿಶ್ವಾಸದಿಂದ ನುಡಿದರು.

ನಗರದ ಕೆಎಚ್‌ಪಿ ಕಚೇರಿಯಲ್ಲಿ ನಗರದ 30ನೇ ವಾರ್ಡಿನ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರನ್ನ ತಮ್ಮ ಬಣಕ್ಕೆ ಸ್ವಾಗತಿಸಿ ಮಾತನಾಡಿದರು.

ಜನಪರ ಸಿದ್ಧಾಂತ, ಸಮಾಜಮುಖಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿಕೊಂಡು ಬರುವವರನ್ನು ಸದಾ ಸ್ವಾಗತಿಸುತ್ತೇನೆ. ಎಲ್ಲರನ್ನು ಪ್ರೀತಿ ವಿಶ್ವಾಸದಿಂದ ಜೊತೆಯಲ್ಲಿ ಕರೆದೊಯ್ಯುತ್ತೇನೆ. ನಗರ ಮತ್ತು ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ನಮ್ಮ ಜೊತೆ ಕೈ ಜೋಡಿಸಿ ನಮ್ಮ ಬಣಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಇದನ್ನೂ ಓದಿ: CHIMUL: ಕ್ಷೀರ ಸಂಜೀವಿನ ಮೂಲಕ ಹಸು ಖರೀದಿಗೆ 45 ಸಾವಿರ ಬಡ್ಡಿರಹಿತ ಸಾಲ : ಭರಣಿ ವೆಂಕಟೇಶ್

ತಾಲೂಕಿನಲ್ಲಿ ಯುವಕರಿಗೆ ರಾಜಕೀಯ ಶಕ್ತಿ ಮತ್ತು ವಿದ್ಯಾವಂತ ಯುವಕರಿಗೆ  ಹಲವಾರು ಉದ್ಯೋಗದ  ಅವಕಾಶಗಳನ್ನು ಸರ್ಕಾರ ಮತ್ತು ನನ್ನ ಸಂಸ್ಥೆಯ ಮೂಲಕ ಕಲ್ಪಿಸಿ ಕೊಡ ಲಾಗುತ್ತಿದೆ. ಆದ್ದರಿಂದ ಪಕ್ಷಾತೀತವಾಗಿ ಯುವಕರು ಸೇರ್ಪಡೆಯಾಗುತ್ತಿದ್ದಾರೆ. ಕ್ರಿಯಾಶೀಲ ಯುವಕರ ಸೇರ್ಪಡೆಯಿಂದಾಗಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಗಳಲ್ಲಿ ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು, ಹಳ್ಳಿಗಳ ಅಭಿವೃದ್ಧಿಯಾಗಬೇಕಾದರೆ ನಾವು ಅಧಿಕಾರ ಹಿಡಿಯಬೇಕು. ಆದ್ದರಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲ್ಲಲು ತಯಾರಿ ಮಾಡಿಕೊಳ್ಳಬೇಕು. ಅದು ಸಮರ್ಥ ಸಂಘಟನೆಯಿಂದ ಮಾತ್ರ ಸಾಧ್ಯ. ಎಲ್ಲರೂ ಸಂಘಟನೆ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಭಿವೃದ್ಧಿ ನಿಲುವು ಮೆಚ್ಚಿ ಬರುವವರನ್ನು ಸದಾ ಸ್ವಾಗತಿಸುತ್ತೇವೆ ಎಂದರು.

ಮುಖಂಡ ಜಗದೀಶ್ ( ಜಗ್ಗಿ )  ಮಾತನಾಡಿ, ಈಗ ಯಾವುದೇ ಚುನಾವಣೆಗಳು ಇಲ್ಲ. ಶಾಸಕರ ಜನಪರ ಕಾಳಜಿ ಹಾಗೂ ಅಭಿವೃದ್ಧಿ ಚಿಂತನೆಯನ್ನು ಮೆಚ್ಚಿ ಬೇಷರತ್ತಾಗಿ ಶಾಸಕರ ಬಣಕ್ಕೆ ತಾಲೂಕಿನಾದ್ಯಂತ ವಿವಿಧ ಪಕ್ಷಗಳ ಮುಖಂಡರು ಮತ್ತು ಕಾರ್ಯ ಕರ್ತರು ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಯುವ ಮುಖಂಡ ಮಹೇಶ್ ಮಾತನಾಡಿ ಶಾಸಕರ ಜನಪರ ಕಾಳಜಿ, ಸಾಮಾಜಿಕ ಅಭಿವೃದ್ಧಿ, ನ್ಯಾಯಯುತ ಆಡಳಿತವನ್ನು ಮೆಚ್ಚಿ ಸೇರ್ಪಡೆಯಾಗುತ್ತಿದ್ದೇನೆ. ಮುಂದೆ ಕೆ.ಎಚ್.ಪಿ ಬಣದ ಆದರ್ಶಗಳನ್ನು ಪಾಲಿಸಿಕೊಂಡು ಹೋಗುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ 30ನೇ ವಾರ್ಡಿನ ವಿವಿಧ ಪಕ್ಷಗಳನ್ನು ತೊರೆದ ಮುಖಂಡರಾದ ಗಂಗರಾಜು, ನಾಗರಾಜು, ವಿನೋದ್, ರವಿಕುಮಾರ್, ರಘು, ವೆಂಕಟೇಶ್ ಮೂರ್ತಿ, ನರಸಿಂಹಮೂರ್ತಿ, ಗಂಗಾದ್ರಪ್ಪ ಸೇರಿದಂತೆ ಇನ್ನಿತರ ಮುಖಂಡರು ಕೆ. ಎಚ್. ಪಿ. ಬಣಕ್ಕೆ ಸೇರ್ಪಡೆಗೊಂಡರು.