ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಸದಾಕಾಲ ಗುರುಚಿಂತನೆ ಮಾಡುವವರು ಸಹಜಯೋಗಿಗಳು: ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್

ಆಡಂಬರದಿಂದ ಮುಕ್ತಿಯನ್ನು ಸಾಧಿಸಲು ಸಾಧ್ಯವಿಲ್ಲ. ಮುಕ್ತಿಗೆ ಬೇಕಾದುದು ತತ್ವ ಚಿಂತನೆ, ಭಕ್ತಿಯ ಸಮರ್ಪಣೆ, ನಿರಂತರ ಸಾಧನೆ ಮಾತ್ರ. ಗುರು ಉಪದೇಶದಲ್ಲಿ ಧೃಡವಾದ ನಂಬಿಕೆ ಯುಳ್ಳ ಗುರುಭಕ್ತನು ಮಾತ್ರವೇ ಸಾಧನ ಮಾರ್ಗದಲ್ಲಿ ಮುಂದುವರಿದು ಮುಕ್ತಿಯನ್ನು ಪಡೆಯ ಬಲ್ಲ. ಪ್ರತಿನಿತ್ಯವೂ ಉಸಿರಾಟದಲ್ಲಿಯೇ ಗುರುಸ್ಮರಣೆ ಮಾಡುವಂತಹ ಸಾಧನೆ ಮಾಡಬೇಕು. ಗುರುಪಾದದ ಚಿಂತನೆ ಇರಬೇಕು.

ಗುರುವಿಗೆ ಭಕ್ತಿಯಿಂದ ಶರಣಾಗಿ, ಗುರುವಾಕ್ಯದಲ್ಲಿ ನಂಬಿಕೆ ಇಟ್ಟು, ಸದಾಕಾಲ ಗುರುಚಿಂತನೆ ಮಾಡುವವರು ಸಹಜಯೋಗಿಗಳು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ: ಗುರುವಿಗೆ ಭಕ್ತಿಯಿಂದ ಶರಣಾಗಿ, ಗುರುವಾಕ್ಯದಲ್ಲಿ ನಂಬಿಕೆ ಇಟ್ಟು, ಸದಾಕಾಲ ಗುರುಚಿಂತನೆ ಮಾಡುವವರು ಸಹಜಯೋಗಿಗಳು ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಕೈವಾರದ ಗವಿಯ ಬಳಿಯ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಯೋಗಾ ನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಶ್ರೀರಾಮಭವತಾರಕ ಮಂತ್ರದ ಶ್ರೀರಾಮ ಕೋಟಿ ಜಪಯಜ್ಞ ಉದ್ಘಾಟಿಸಿ ಮಾತನಾಡಿದರು.

ಆಡಂಬರದಿಂದ ಮುಕ್ತಿಯನ್ನು ಸಾಧಿಸಲು ಸಾಧ್ಯವಿಲ್ಲ. ಮುಕ್ತಿಗೆ ಬೇಕಾದುದು ತತ್ವ ಚಿಂತನೆ, ಭಕ್ತಿಯ ಸಮರ್ಪಣೆ, ನಿರಂತರ ಸಾಧನೆ ಮಾತ್ರ. ಗುರು ಉಪದೇಶದಲ್ಲಿ ಧೃಡವಾದ ನಂಬಿಕೆಯುಳ್ಳ ಗುರುಭಕ್ತನು ಮಾತ್ರವೇ ಸಾಧನ ಮಾರ್ಗದಲ್ಲಿ ಮುಂದುವರಿದು ಮುಕ್ತಿ ಯನ್ನು ಪಡೆಯಬಲ್ಲ. ಪ್ರತಿನಿತ್ಯವೂ ಉಸಿರಾಟದಲ್ಲಿಯೇ ಗುರುಸ್ಮರಣೆ ಮಾಡುವಂತಹ ಸಾಧನೆ ಮಾಡಬೇಕು. ಗುರುಪಾದದ ಚಿಂತನೆ ಇರಬೇಕು. ಸಾಧನೆಗೆ ತೊಡಗುವ ಪ್ರತಿ ಸಂದರ್ಭದಲ್ಲೂ ಮೊದಲು ಗುರುವಂದನೆ ಸಲ್ಲಿಸುವುದು ಒಂದು ಬಗೆಯ ಗುರುಸೇವೆಯೇ ಆಗಿದೆ. ಗುರುವನ್ನು ಮರೆತವನ ಸಾಧನೆ ಸಿದ್ಧಿಸುವುದಿಲ್ಲ. ಗುರುಭಕ್ತನಾದ ಸಾಧಕನಿಗೆ ಗುರುಭಕ್ತಿಯೇ ಸಾಧನ ಬಲವಾಗಿ ಪರಿಣಮಿಸಿ ಶೀಘ್ರವಾಗಿ ಲಭಿಸುವ ಸಿದ್ಧಿಯಿಂದ ಮುಕ್ತಿಗೆ ಪಾತ್ರನಾಗುತ್ತಾನೆ ಎಂದರು.

ಇದನ್ನೂ ಓದಿ: Chikkaballapur News: 10 ಸಾವಿರ ಮಂದಿಗೆ ಉಚಿತ ಸೂರು ಕಲ್ಪಿಸುವ ಸಂಕಲ್ಪಕ್ಕೆ ಚಾಲನೆ ನೀಡಿದ ಸಮಾಜ ಸೇವಕ ಸಿ.ಎಂ. ಬೈರೇಗೌಡ

ಕಾರ್ಯಕ್ರಮಕ್ಕೂ ಮೊದಲಿಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಶ್ರೀಯೋಗಿ ನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ನಂತರ ಗವಿಯ ಬಳಿಗೆ ಭಕ್ತರು ಬಂದರು. ಗವಿ ಯಾಗಶಾಲೆಯಲ್ಲಿರುವ ಶ್ರೀಗಣಪತಿ, ಮಹಾಲಕ್ಷ್ಮೀ, ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆ ಯನ್ನು ಸಲ್ಲಿಸಲಾಯಿತು.

ಶ್ರೀರಾಮಕೋಟಿ ನಡೆಯುವ ಸ್ಥಳದಲ್ಲಿ ವಿಶೇಷ ವೇದಿಕೆಯನ್ನು ಹಾಕಲಾಗಿತ್ತು. ಆ ವೇದಿಕೆಯಲ್ಲಿ ಶ್ರೀಸೀತಾರಾಮರ ವಿಗ್ರಹಗಳನ್ನು, ಕೈವಾರ ತಾತಯ್ಯನವರ ಭಾವಚಿತ್ರ ಗಳನ್ನು ಹಾಗೂ ಮಧ್ಯದಲ್ಲಿ ದೀಪಸ್ತಂಭವನ್ನು ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿ ಗಳು ದೀಪವನ್ನು ಬೆಳಗುವುದರ ಮೂಲಕ ರಾಮಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿದರು.

cbpm1a

ರಾಮಕೋಟಿಯನ್ನು ಅಖಂಡ 24 ಗಂಟೆಗಳ ಕಾಲ ನಿರಂತರವಾಗಿ ಮಾಡಲಾಯಿತು. ಶ್ರೀಯೋಗಾನರಸಿಂಹಸ್ವಾಮಿ ತಂಡ, ಶ್ರೀಅಮರನಾರೇಯಣಸ್ವಾಮಿ ತಂಡ, ಶ್ರೀಮಹಾ ಲಕ್ಷ್ಮೀ ತಂಡಗಳೆಂದು ಮೂರು ತಂಡಗಳನ್ನು ಮಾಡಲಾಗಿತ್ತು. ಒಂದು ಗಂಟೆಗೆ ಒಂದು ತಂಡವು “ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವಾ, ರಾಮ ದಶರಥ ತನಯ ದೇವಾ ರಾಮಶ್ರೀ ನಾರೇಯಣ” ಎಂಬ ಶ್ರೀರಾಮಭವತಾರಕ ಮಂತ್ರವನ್ನು ಪಠಿಸುತ್ತಾ, ತಾಳ ಹಾಕುತ್ತಾ, ಶ್ರೀರಾಮರ ವೇದಿಕೆಯ ಸುತ್ತಲೂ ಹೆಜ್ಜೆ ಹಾಕುತ್ತಾ ಭಕ್ತಿ ಯಿಂದ ಪಠಿಸುತ್ತಿದ್ದರು. ಉಪನ್ಯಾಸಕ ವೆಂಕಟರವಣಪ್ಪ ಪ್ರಸ್ತಾವಿಕವಾಗಿ ಮಾತನಾಡಿ ದರು. ವಿದುಷಿ ಉಷಮ್ಮ ಹಾಗೂ ದಾಕ್ಷಾಯಿಣಿ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಹಾಗೂ ವಿವಿಧ ಭಾಗಗಳಿಂದ ಬಂದ ಭಕ್ತರು ಭಾಗವಹಿಸಿದ್ದರು.