ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಲಬಾರ್ ಪಿಟ್ ವೈಪರ್ ಕಚ್ಚಿದ್ದು, 24 ಗಂಟೆ ನಿಗಾದಲ್ಲಿ ಚಿಕಿತ್ಸೆ; ಚಾರಣಿಗರು ಎಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಸೂಚನೆ

ಆನ್‌ಲೈನ್‌ನಲ್ಲಿ ಮುಂಗಡ ನೋಂದಣಿ ಮಾಡಿಕೊಂಡು ಅಧಿಕೃತವಾಗಿ ಚಾರಣಕ್ಕೆ ಬಂದಿದ್ದ ದೇವೇಂದ್ರ ಅವರು ಬೆಟ್ಟದಲ್ಲಿ ಗಿಡಗಳ ಬಳಿ ತೆರಳಿದ್ದಾಗ ಭುಜಕ್ಕೆ ಹಾವು ಕಚ್ಚಿದೆ. ಹಸಿರು ಬಣ್ಣದ ಮಲಬಾರ್ ಪಿಟ್ ವೈಪರ್ ಗಿಡಗಳ ಮೇಲೆ ಇರುವುದರಿಂದ ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ. ಹಾವು ಕಚ್ಚಿದ ತಕ್ಷಣ ಚಾರಣಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಬೆಟ್ಟದಿಂದ ಕೆಳಕ್ಕೆ ಕರೆ ತಂದರು.

ಚಿಕ್ಕಬಳ್ಳಾಪುರ: ಸ್ಕಂದಗಿರಿ ಬೆಟ್ಟದಲ್ಲಿ ಭಾನುವಾರ ಬೆಳಿಗ್ಗೆ ಚಾರಣಕ್ಕೆ ತೆರಳಿದ್ದ 33 ವರ್ಷದ ದೇವೇಂದ್ರ ಎಂಬುವವರಿಗೆ ಮಲಬಾರ್ ಪಿಟ್ ವೈಪರ್ ಹಾವು ಕಚ್ಚಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರ ನಿಗಾದಲ್ಲಿ ಚಿಕಿತ್ಸೆ ಮುಂದು ವರಿದಿದೆ.

ಆನ್‌ಲೈನ್‌ನಲ್ಲಿ ಮುಂಗಡ ನೋಂದಣಿ ಮಾಡಿಕೊಂಡು ಅಧಿಕೃತವಾಗಿ ಚಾರಣಕ್ಕೆ ಬಂದಿದ್ದ ದೇವೇಂದ್ರ ಅವರು ಬೆಟ್ಟದಲ್ಲಿ ಗಿಡಗಳ ಬಳಿ ತೆರಳಿದ್ದಾಗ ಭುಜಕ್ಕೆ ಹಾವು ಕಚ್ಚಿದೆ. ಹಸಿರು ಬಣ್ಣದ ಮಲಬಾರ್ ಪಿಟ್ ವೈಪರ್ ಗಿಡಗಳ ಮೇಲೆ ಇರುವುದರಿಂದ ಸುಲಭವಾಗಿ ಕಣ್ಣಿಗೆ ಬೀಳುವುದಿಲ್ಲ. ಹಾವು ಕಚ್ಚಿದ ತಕ್ಷಣ ಚಾರಣಿಗರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಬೆಟ್ಟದಿಂದ ಕೆಳಕ್ಕೆ ಕರೆ ತಂದರು. 

ಇದನ್ನೂ ಓದಿ: Chikkaballapur News: ಜೈನ್ ಮಿಷನ್ ಆಸ್ಪತ್ರೆಯಲ್ಲಿ ಜಿಲ್ಲೆಯ ಮೊದಲ ಸರ್ಜಿಕಲ್ ತೀವ್ರ ನಿಗಾ ಘಟಕ ಆರಂಭ

ಮುನ್ನೆಚ್ಚರಿಕೆಯಾಗಿ ಆಂಬುಲೆನ್ಸ್ ವ್ಯವಸ್ಥೆ ಮಾಡಿ, ತಜ್ಞ ವೈದ್ಯರ ನೆರವಿನೊಂದಿಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯ ಡಾ. ವೆಂಕಟೇಶ್ ಅವರ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಅವರ ಆರೋಗ್ಯದ ಪ್ರಮುಖ ಲಕ್ಷಣಗಳು ಸ್ಥಿರವಾಗಿವೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ 24 ಗಂಟೆಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಚಾರಣಿಗರು ಎಚ್ಚರಿಕೆ ವಹಿಸಲಿ: ಆರ್‌ಎಫ್‌ಒ ಗಿರೀಶ್

“ಸ್ಕಂದಗಿರಿ ಮತ್ತು ನಂದಿ ಬೆಟ್ಟಗಳಲ್ಲಿ ಮಲಬಾರ್ ಪಿಟ್ ವೈಪರ್, ರಸೆಲ್‌ಸ್ ವೈಪರ್, ಕ್ರೇಟ್ ಹಾಗೂ ಕಿಂಗ್ ಕೋಬ್ರಾ ಸೇರಿದಂತೆ ವಿವಿಧ ಜಾತಿಯ ಹಾವುಗಳು ಕಂಡುಬರುತ್ತವೆ. ಬೆಟ್ಟ ಪ್ರದೇಶ ದಲ್ಲಿ ಕರಡಿ ಮತ್ತು ಚಿರತೆಗಳೂ ಇವೆ. ವಿಶೇಷವಾಗಿ ಮಲಬಾರ್ ಪಿಟ್ ವೈಪರ್ ಹಸಿರು ಬಣ್ಣದಲ್ಲಿ ರುವುದರಿಂದ ಗಿಡಗಳ ನಡುವೆ ಗುರುತಿಸುವುದು ಕಷ್ಟ. ಆದ್ದರಿಂದ ಚಾರಣಿಗರು ಗಿಡಗಂಟಿಗಳ ಬಳಿ ಹೋಗುವಾಗ ಎಚ್ಚರಿಕೆ ವಹಿಸಬೇಕು. 

ಹಾವು ಕಂಡರೆ ಮುಟ್ಟಲು ಅಥವಾ ಹಿಡಿಯಲು ಪ್ರಯತ್ನಿಸಬಾರದು. ಹಾವು ಕಚ್ಚಿದರೆ ಸಮಯ ವ್ಯರ್ಥ ಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬಾರದು. ಚಾರಣದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕೃತ ಮಾರ್ಗದರ್ಶಕರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತಾ ನಿಯಮಗಳನ್ನು ಅನುಸರಿಸುವುದರಿಂದ ಅಪಾಯ ಗಳನ್ನು ಕಡಿಮೆ ಮಾಡಬಹುದು” ಎಂದು ಆರ್‌ಎಫ್‌ಒ ಗಿರೀಶ್ ತಿಳಿಸಿದರು.

ಚಾರಣಿಗರಿಗೆ ಪ್ರಮುಖ ಸೂಚನೆಗಳು

  • ಗುರುತಿಸಲಾಗದ ಹಾವು ಅಥವಾ ವನ್ಯಜೀವಿಗಳಿಂದ ದೂರವಿರಿ; ಅವುಗಳನ್ನು ಕೆಣಕಬೇಡಿ.
  • ನಿಗದಿತ ಚಾರಣ ಮಾರ್ಗದಲ್ಲೇ ಸಂಚರಿಸಿ, ಗಿಡಗಂಟಿಗಳ ನಡುವೆ ಕೈ ಹಾಕಬೇಡಿ.
  • ಹಾವು ಕಚ್ಚಿದರೆ ಗಾಯಗೊಂಡ ವ್ಯಕ್ತಿಯನ್ನು ಆದಷ್ಟು ಶಾಂತವಾಗಿರಿಸಿ, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಿರಿ.
  • ಗಾಯವನ್ನು ಕತ್ತರಿಸುವುದು, ವಿಷ ಹೀರುವ ಪ್ರಯತ್ನ ಅಥವಾ ಬಿಗಿಯಾಗಿ ಕಟ್ಟುವುದು ಮಾಡಬೇಡಿ.