ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಿಕಿತ್ಸೆ ಫಲಿಸದೆ ತ್ರಿಚಕ್ರ ಸೈಕಲ್ ಸವಾರ ಸಾವು: ವಾರಸುದಾರರ ಪತ್ತೆಗೆ ಕೆಂಚರ್ಲಾಹಳ್ಳಿ ಪೊಲೀಸರ ಮನವಿ

ಅಪರಿಚಿತ ವಾಹನವೊಂದು ತ್ರಿಚಕ್ರ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕೆಂಚರ್ಲಾಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಮೃತರ ಗುರುತು ಪತ್ತೆಯಾಗಬೇಕಾಗಿದ್ದು, ಪೊಲೀಸರು ವಾರಸುದಾರರ ಹುಡುಕಾಟದಲ್ಲಿದ್ದಾರೆ.

ಚಿಂತಾಮಣಿ: ಅಪರಿಚಿತ ವಾಹನವೊಂದು ತ್ರಿಚಕ್ರ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕೆಂಚರ್ಲಾಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಮೃತರ ಗುರುತು ಪತ್ತೆಯಾಗ ಬೇಕಾಗಿದ್ದು,ಪೊಲೀಸರು ವಾರಸುದಾರರ ಹುಡುಕಾಟದಲ್ಲಿದ್ದಾರೆ.

ರಾತ್ರಿ ಸುಮಾರು 8:30 ರ ವೇಳೆಯಲ್ಲಿ ಕೆಂಚರ್ಲಾಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಲ್ಲಿ ಹತ್ತಿರ ತ್ರಿಚಕ್ರ ಸೈಕಲ್‌ನಲ್ಲಿ ಹೋಗುತ್ತಿದ್ದ ಈ ಅಪರಿಚಿತ ವ್ಯಕ್ತಿಗೆ ಯಾವುದೇ ಒಂದು ಅಪರಿಚಿತ ವಾಹನವು ಡಿಕ್ಕಿ ಹೊಡೆದು, ನಿಲ್ಲಿಸದೆ ಹೊರಟು ಹೋಗಿದೆ.

ಇದನ್ನೂ ಓದಿ: Chinthamani Crime: ಮರೀನಾಯಕನಹಳ್ಳಿ ಗೇಟ್ ಬಳಿ ಅಕ್ರಮ ದಂಧೆಗೆ ಬ್ರೇಕ್: ಮೂವರ ವಿರುದ್ಧ ಪ್ರಕರಣ ದಾಖಲು!

ಘಟನೆಯ ವಿಷಯ ತಿಳಿದ ತಕ್ಷಣ ಕೆಂಚರ್ಲಾಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ, ತೀವ್ರವಾಗಿ ಗಾಯ ಗೊಂಡಿದ್ದ ವ್ಯಕ್ತಿಯನ್ನು ಆಂಬುಲೆನ್ಸ್ ಮುಖಾಂತರ ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಚಿಂತಾಮಣಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರ ಬಗ್ಗೆ ಪೊಲೀಸರು ಎಲ್ಲಾ ಕಡೆ ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸಿದ್ದರೂ, ಇದುವರೆಗೂ ಯಾವುದೇ ಸುಳಿವು ಸಿಕ್ಕಿರುವುದಿಲ್ಲ.

ಚಿತ್ರದಲ್ಲಿರುವ ಈ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಅಥವಾ ಇವರ ವಾರಸು ದಾರರು ಪತ್ತೆಯಾದಲ್ಲಿ ತಕ್ಷಣವೇ ಕೆಂಚರ್ಲಾಹಳ್ಳಿ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಕೆಂಚರ್ಲಾಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ: 9480802555, ಕೆಂಚರ್ಲಾಹಳ್ಳಿ ಸಿಪಿಐ: 9480802533