ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Break for Protest: ಶವವಿಟ್ಟು ನಡೆಸಿದ ಎರಡು ದಿನದ ಪ್ರತಿಭಟನೆ ಅಂತ್ಯ, ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ

ಅಂತ್ಯಸಂಸ್ಕಾರ ಮಾಡಲು ಸ್ಮಶಾನ ಬೇಕು ಸ್ಮಶಾನ ಜಾಗವನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡಿ ರುವ ಆರೋಪ ಮಾಡಿ.ಮೃತಪಟ್ಟ ಶವವನ್ನು ಅಂತ್ಯ ಸಂಸ್ಕಾರ ಮಾಡಲು ಕೊಡದೆ ಇರುವ ಹಿನ್ನೆಲೆ ಯಲ್ಲಿ ಎರಡು ದಿನಗಳ ಕಾಲ ಶವ ಇಟ್ಟು ಪ್ರತಿಭಟನೆ ನಡೆಸಿದ ನಂತರ ಮೂರನೇ ದಿನ ಮೃತಪಟ್ಟವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಎರಡು ದಿನಗಳಿಂದ ನಿರಂತರವಾಗಿ ನಡೆದ ಪ್ರತಿಭಟನೆಗೆ ಬ್ರೇಕ್

Ashok Nayak Ashok Nayak Aug 3, 2025 12:59 PM

ಚಿಂತಾಮಣಿ: ಅಂತ್ಯಸಂಸ್ಕಾರ ಮಾಡಲು ಸ್ಮಶಾನ ಬೇಕು ಸ್ಮಶಾನ ಜಾಗವನ್ನು ಬಲಾಡ್ಯರು ಒತ್ತುವರಿ ಮಾಡಿಕೊಂಡಿರುವ ಆರೋಪ ಮಾಡಿ.ಮೃತಪಟ್ಟ ಶವವನ್ನು ಅಂತ್ಯ ಸಂಸ್ಕಾರ ಮಾಡಲು ಕೊಡದೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಶವ ಇಟ್ಟು ಪ್ರತಿಭಟನೆ ನಡೆಸಿದ ನಂತರ ಮೂರನೇ ದಿನ ಮೃತಪಟ್ಟವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿ ಮಿಟ್ಟಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರಂಗೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Chikkaballapur News: ಚಿತ್ರಾವತಿ ಜಲಾಶಯಕ್ಕೆ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ

ತಾಲೂಕಿನ ನಂದನಹೊಸಹಳ್ಳಿ ಸಮೀಪದ ರಂಗೇನಹಳ್ಳಿ ಗ್ರಾಮದವರಾದ ಕೊಂಡಪ್ಪ ಎಂಬು ವರು ಎರಡು ದಿನಗಳ ಹಿಂದೆ ಮೃತಪಟ್ಟಿದ್ದು ಸದರಿ ಗ್ರಾಮದ ಸಮೀಪವಿರುವ ಸರ್ವೆ ನಂ:10ರಲ್ಲಿ. ಗ್ರಾಮಸ್ಥರು ಮೃತಪಟ್ಟವರನ್ನು ಮಣ್ಣು ಮಾಡಲು ಗುಣಿ ಆಗಿಯಲು ಹೋದಾಗ ಹಿಡುವಳಿ ಜಮೀನುದಾರರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ವಾದ ವಿವಾದ ನಡೆದು ಕೆಂಚಾರ್ಲ ಹಳ್ಳಿ ಪೊಲೀಸ್ ಠಾಣೆಯ ಸೂಕ್ತ ಬಂದೋಬಸ್ತ್ ನಲ್ಲಿ ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ ರವರ ಮಾರ್ಗದರ್ಶನದಂತೆ ಕಂದಾಯ ಇಲಾಖೆ ಅಧಿಕಾರಿಗಳಾದ ರವೀಶ್, ಗೋಕುಲ್, ನರಸಿಂಹಮೂರ್ತಿ, ಭೂಮಾಪನ ಇಲಾಖೆಯ ಸಭೆಯ ನಾಗಭೂಷಣ್, ಸರ್ವೆ ಕಾರ್ಯ ಎರಡು ದಿನಗಳ ಕಾಲ ನಡೆಸಿ ಸರ್ವೆ ನಂ:10 ರ.ಜಮೀನು ಹಿಡುವಳಿ ಜಮೀನು ಎಂದು ಗುರುತಿಸಿ ಅಲ್ಲಿಯೇ ಪಕ್ಕದಲ್ಲಿದ್ದ ಸರ್ಕಾರಿ ಜಮೀನಿನಲ್ಲಿ ಸ್ಮಶಾನದ ಜಾಗವನ್ನು ಗುರುತಿಸಿ ಕೊಟ್ಟಿದ ನಂತರ ಅದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಿಕೊಳ್ಳಿ ಎಂದು ತಾಲೂಕು ದಂಡಾಧಿಕಾರಿಗಳು ಮೃತರ ಕುಟುಂಬಸ್ಥರಿಗೆ ಹೇಳಿದಾಗ ಇದಕ್ಕೆ ಒಪ್ಪದ ಕುಟುಂಬಸ್ಥರು ಸರ್ಕಾರಿ ಜಾಗದಲ್ಲಿ ಸ್ಮಶಾನ ಗುರುತಿಸಿರುವ ಪಕ್ಕದಲ್ಲಿಯೇ ಪುರಾತನ ಕಾಲದ ದೇವಸ್ಥಾನ ಇದೆ. ನಾವು ಆ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡುವುದಿಲ್ಲ ಎಂದು ಹೇಳಿ ಇಂದು ಮಧ್ಯಾಹ್ನ ಕೊಂಡಪ್ಪನವರ ಸ್ವಂತ ಜಾಗದಲ್ಲೇ ಅಂತ್ಯ ಸಂಸ್ಕಾರ ಮಾಡಿ ಪ್ರತಿಭಟನೆಗೆ ಅಂತ್ಯ ಹಾಕಿದ್ದಾರೆ.

Protest for Antya Sanskara 2

ಮೃತರ ಕುಟುಂಬಸ್ಥರಾದ ಚಲಪತಿ, ಹರೀಶ್ ಎಂಬುವರು ಮಾಧ್ಯಮದವರೊಂದಿಗೆ ಮಾತನಾಡಿ ಅಧಿಕಾರಿಗಳು ಸ್ಮಶಾನಕ್ಕಾಗಿ ನಮಗೆ ಸೂಕ್ತ ರೀತಿಯಲ್ಲಿ ನ್ಯಾಯ ಕೊಡಿಸದೆ ಇರುವ ಹಿನ್ನೆಲೆಯಲ್ಲಿ ಸ್ಮಶಾನಕ್ಕಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ! ಹೋರಾಟವನ್ನು ಕಾನೂನು ಬದ್ಧವಾಗಿ ಮುಂದುವರಿಸುತ್ತೇವೆ ಎಂದುu ಹೇಳಿದರು.

ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ರವರು ಮಾತನಾಡಿ ರಂಗೇನಹಳ್ಳಿ ಗ್ರಾಮಸ್ಥರು ಗ್ರಾಮದ ಸರ್ವೆ ನಂ:10 ರಲ್ಲಿ.ಪುರಾತನ ಕಾಲದಿಂದಲೂ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದೇವೆ ಈ ಜಾಗದಲ್ಲಿ ಸ್ಮಶಾನವಿದೆಯೆಂದು ಮನವಿ ಸಲ್ಲಿಸಿದ್ದರು ಅದರಂತೆ ಸರ್ವೆ ಅಧಿಕಾರಿಗಳು ಸರ್ವೆ ನಡೆಸಿ ಸರ್ವೆ ನಂಬರ್ ಹತ್ತರ ಜಮೀನು ಹಿಡುವಳಿದಾರರ ಜಮೀನು ಆಗಿದೆ ಎಂದ ಕಾರಣಕ್ಕೆ ಪಕ್ಕದಲ್ಲಿಯೇ 10 ಗುಂಟೆ ಜಮೀನು ಮೀಸಲಿಟ್ಟು ಸ್ಥಳೀಯ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ಇನ್ನೂ ಎರಡು ದಿನಗಳ ಕಾಲ ಗ್ರಾಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯ ದಂತೆ ಡಿವೈಎಸ್ಪಿ ಮುರಳಿಧರ್ ರವರ ನೇತೃತ್ವದಲ್ಲಿ ಪೊಲೀಸರು ಗ್ರಾಮದಲ್ಲಿಯೇ ಠಿಕಾಣಿ ಹೂಡಿದ್ದರು.