Bihar Assembly Elections: ಮತದಾರರ ಪಟ್ಟಿಯಲ್ಲಿ ಲಾಲೂ ಪುತ್ರ ತೇಜಸ್ವಿ ಯಾದವ್ ಹೆಸರಿಲ್ವಾ? ಚು.ಆಯೋಗ ಹೇಳಿದ್ದೇನು?
ಪಾಟ್ನಾದ ಮತದಾರ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದ ಬಳಿಕ ಈ ಕುರಿತು ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ (Election Commission) ಸುಮಾರು ಒಂದು ತಿಂಗಳ ಕಾಲ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಿ ಶುಕ್ರವಾರ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ತೇಜಸ್ವಿ ಯಾದವ್ ಅವರ ಹೆಸರು ಇದೆ ಎಂದು ಸ್ಪಷ್ಟಪಡಿಸಿದೆ.


ಪಟನಾ: ಸುಮಾರು ಒಂದು ತಿಂಗಳಿನಿಂದ ವಿಶೇಷ ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆಯನ್ನು (Special Intensive Revision) ನಡೆಸಿದ ಚುನಾವಣಾ ಆಯೋಗವು (Election Commission) ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ (Tejaswi Yadav) ಹೆಸರು ಮತದಾರರ ಪಟ್ಟಿಯಲ್ಲಿ (Voter list) ಇದೆ ಎಂದು ಹೇಳಿದ್ದು, ಆದರೆ ತೇಜಸ್ವಿ ಯಾದವ್ ನನ್ನ ಹೆಸರು ಅದರಲ್ಲಿ ಇಲ್ಲ ಎಂದಿದ್ದಾರೆ. ಪಾಟ್ನಾದ ಮತದಾರ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಬಿಹಾರದಲ್ಲಿ ನಕಲಿ ಮತದಾರರ ಗುರುತು ಚೀಟಿ ಪತ್ತೆ ಹಚ್ಚುತ್ತಿರುವ ಚುನಾವಣಾ ಆಯೋಗವು ಇದಕ್ಕಾಗಿ ಸುಮಾರು ಒಂದು ತಿಂಗಳ ಕಾಲ ವಿಶೇಷ ಪರಿಷ್ಕರಣೆ ನಡೆಸಿದೆ. ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆಯ ಅನಂತರ ಶುಕ್ರವಾರ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ತೇಜಸ್ವಿ ಯಾದವ್ ಅವರ ಹೆಸರು ಇದೆ ಎಂದು ಸ್ಪಷ್ಟಪಡಿಸಿದೆ.
ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಫೋನ್ ಅನ್ನು ದೊಡ್ಡ ಸ್ಕ್ರೀನ್ ಗೆ ಸಂಪರ್ಕಿಸಿ ಪ್ರತಿ ಮತದಾರರಿಗೆ ನೀಡುವ 10 ಅಂಕೆಯ ವಿಶಿಷ್ಟ ಗುರುತಿನ ಸಂಖ್ಯೆಯಲ್ಲಿ (EPIC) ತಮ್ಮ ಎಪಿಕ್ ಸಂಖ್ಯೆಯನ್ನು ಹುಡುಕಲು ಪ್ರಯತ್ನಿಸಿದರು. ಆದರೆ ಈ ವೇಳೆ ಅದರಲ್ಲಿ ಯಾವುದೇ ದಾಖಲೆಗಳು ಕಂಡುಬಂದಿಲ್ಲ ಎನ್ನುವ ಫಲಿತಾಂಶ ಸಿಕ್ಕಿದೆ. ಹೀಗಾಗಿ ಅವರು ಚುನಾವಣಾ ಆಯೋಗವು ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದೆ ಎಂದು ಆರೋಪಿಸಿದರು.
ಇಲ್ಲಿ ನೋಡಿ. ನಾನು ಮತದಾರರಾಗಿ ನೋಂದಾಯಿಸಿಕೊಂಡಿಲ್ಲ. ಇದು ನನ್ನನ್ನು ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹಗೊಳಿಸುತ್ತದೆ. ಬಹುಶಃ, ನನ್ನನ್ನು ನಾಗರಿಕನಾಗಿ ಪರಿಗಣಿಸುವುದನ್ನು ನಿಲ್ಲಿಸಬಹುದು ಮತ್ತು ಮನೆಯಲ್ಲಿ ವಾಸಿಸುವ ಹಕ್ಕನ್ನು ನಾನು ಕಳೆದುಕೊಳ್ಳಬಹುದು ಎಂದು ಯಾದವ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಗಣತಿ ನಮೂನೆಯೊಂದಿಗೆ ಮನೆಗೆ ಬಂದಿರುವ ಬೂತ್ ಮಟ್ಟದ ಅಧಿಕಾರಿಗಳು ಕೂಡ ನನಗೆ ಯಾವುದೇ ರಶೀದಿಯನ್ನು ನೀಡಿಲ್ಲ ಎಂದು ಅವರು ತಿಳಿಸಿದರು.
ಚುನಾವಣಾ ಆಯೋಗವು ಒಂದು ತಿಂಗಳ ಕಾಲ ನಡೆಸಿದ ವಿಶೇಷ ತೀವ್ರ ಪರಿಷ್ಕರಣೆ, ಮತದಾರರ ಪಟ್ಟಿ ಪರಿಶೀಲನಾ ಪ್ರಕ್ರಿಯೆಯ ಬಳಿಕ ಶುಕ್ರವಾರ ಕರಡು ಮತದಾರರ ಪಟ್ಟಿಯನ್ನು ಹಂಚಿಕೊಂಡಿದ್ದು, ಇದರಲ್ಲಿ ಯಾದವ್ ಹೆಸರು ಇದೆ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿದ ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ತ್ಯಾಗರಾಜನ್ ಎಸ್.ಎಂ., 2020 ರ ಚುನಾವಣಾ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ ತೇಜಸ್ವಿ ಯಾದವ್ ಅವರ ಎಪಿಕ್ ಸಂಖ್ಯೆಯು ಪ್ರಸ್ತುತ ಮತದಾರರ ಪಟ್ಟಿಯಲ್ಲಿದೆ. ಯಾವುದೇ ಬದಲಾವಣೆ ಅಥವಾ ಅಳಿಸುವಿಕೆ ಆಗಿಲ್ಲ. ಅವರ ಹೆಸರಿಲ್ಲ ಎನ್ನುವ ಅವರ ಹೇಳಿಕೆ ತಪ್ಪು. ಅವರು ಮತ ಚಲಾಯಿಸುವ ಬೂತ್‌ನಲ್ಲಿ ಅವರ ಹೆಸರು ಇನ್ನೂ ಇದೆ. ಎಲ್ಲರೂ ಅದನ್ನು ನೋಡಬಹುದು ಎಂದು ತಿಳಿಸಿದರು.
ಇದನ್ನೂ ಓದಿ: Russian Oil Import controversy: ರಷ್ಯಾದಿಂದ ತೈಲ ಖರೀದಿ ಮುಂದುವರಿಯುತ್ತದೆ- ಅಮೆರಿಕಕ್ಕೆ ಠಕ್ಕರ್ ಕೊಟ್ಟ ಭಾರತ
ತೇಜಸ್ವಿ ಯಾದವ್ ಬೇರೆ ಎಪಿಕ್ ಕಾರ್ಡ್ ಅಥವಾ ಸಂಖ್ಯೆಯನ್ನು ಬಳಸುತ್ತಿದ್ದಾರೆಯೇ ಎನ್ನುವ ಕುರಿತು ಈಗ ಉನ್ನತ ಅಧಿಕಾರಿ ತನಿಖೆ ನಡೆಸುತ್ತಿದ್ದಾರೆ. ಚುನಾವಣಾ ಆಯೋಗವು ಯಾದವ್ ಅವರ ಹೆಸರನ್ನು ಮತದಾರರ ಪಟ್ಟಿಯ ಕ್ರಮ ಸಂಖ್ಯೆ 416ರಲ್ಲಿ ಸೇರಿಸಿದೆ. ಬಿಹಾರದ ಕರಡು ಮತದಾರರ ಪಟ್ಟಿಯಿಂದ 65 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಬಿಟ್ಟುಬಿಡಲಾಗಿದೆ. ಅದರಲ್ಲೂ ಪಾಟ್ನಾದಲ್ಲಿ ಅತಿ ಹೆಚ್ಚು ಮತದಾರರು ಅಂದರೆ ಸುಮಾರು 3.95 ಲಕ್ಷ ಹೆಸರುಗಳನ್ನು ಬಿಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.