ಗುಡಿಬಂಡೆ: ತಾಲ್ಲೂಕಿನ ಕಡೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಧಿಕಾರಿ ಪ್ರೇಮ್ ಕುಮಾರ್ ತಿಳಿಸಿದ್ದಾರೆ. ಹಾಲು ಉತ್ಪಾದಕರ ಸಂಘದ 13 ಮಂದಿ ನಿರ್ದೇಶಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನೂತನ ಅಧ್ಯಕ್ಷರಾಗಿ ಎಂ. ರಾಮಕೃಷ್ಣಾರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಕೆ.ಆರ್. ಗೋವಿಂದರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ.ಎನ್. ಸುಬ್ಬಿರೆಡ್ಡಿ, ಕೆ.ವಿ.ವೇಮರೆಡ್ಡಿ, ಆದಿನಾರಾಯಣರೆಡ್ಡಿ, ಕೆ.ಜಿ.ಸೀತಾರಾಮರೆಡ್ಡಿ, ಎ.ವೆಂಕಟ ರೆಡ್ಡಿ, ಎಸ್.ಆದಿನಾರಾಯಣಪ್ಪ, ಬಾಲಕೃಷ್ಣಾರೆಡ್ಡಿ, ರಾಜಮ್ಮ ರಾಮಪ್ಪ, ಆದಿಲಕ್ಷ್ಮಮ್ಮ, ಕೆರೆ ತಿಮ್ಮಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: Gudibande News: ಬಾಲ್ಯ ವಿವಾಹದ ಕುರಿತು ಜಾಗೃತಿ ಅಗತ್ಯ, ನಿರ್ಮೂಲನೆಗೆ ಎಲ್ಲರ ಸಹಕಾರ ಅತ್ಯಗತ್ಯ: ನಸೀಮಾ ತಹಬಸೂಮ್
ಈ ಸಮಯದಲ್ಲಿ ನೂತನ ಆಡಳಿತ ಮಂಡಳಿಗೆ ಅಭಿನಂದನೆ ತಿಳಿಸಿ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ,ರಾದ ಜಿ.ಎನ್.ಆದಿರೆಡ್ಡಿ ನಮ್ಮ ಗ್ರಾಮದಲ್ಲಿ ರುವ ಹಾಲು ಉತ್ಪಾದಕರ ಸಂಘ ತಾಲ್ಲೂಕಿನಲ್ಲಿ ಒಂದು ಮಾದರಿಯಾಗಬೇಕು ನಿಟ್ಟಿನಲ್ಲಿ ನಾವೆಲ್ಲರೂ ಸಂಘದ ಬೆಳವಣಿಗೆಗೆ ಶ್ರಮಿಸಿ, ಸಂಘವನ್ನು ಬಲಿಷ್ಠಗೊಳಿಸಲು ಎಲ್ಲಾ ಪ್ರತಿನಿಧಿಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಳನ್ನು ಬದಿಗಿಟ್ಟು ಕೆಲಸ ಮಾಡಬೇಕು. ಸಂಘದ ಕಟ್ಟಡ ನಿರ್ಮಾಣಕ್ಕೆ ಶಾಸಕರು ನಾಲ್ಕು ಲಕ್ಷ ಅನುದಾನ ನೀಡಿದ್ದಾರೆ. ಜೊತೆಗೆ ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಅನುದಾನವನ್ನು ಕೋಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ, ಸಂಘದ ಮಾಜಿ ಅಧ್ಯಕ್ಷರಾದ ಬಿ.ಎ.ಶಿವರಾಮರೆಡ್ಡಿ, ಪಿಎಲ್.ಡಿ. ಬ್ಯಾಂಕ್ ಮಾಜಿ ಅಧ್ಯಕ್ಷ, ಹಂಪಸಂದ್ರ ವಿಎಸ್ ಎಸ್ ಎನ್ ಅಧ್ಯಕ್ಷ ಕೆ.ಜೆ. ಆನಂದರೆಡ್ಡಿ, ನಿರ್ದೇಶಕ ಕೆ.ಎನ್. ಶ್ರೀರಾಮರೆಡ್ಡಿ, ಮುಖಂಡರಾದ ಬಿ.ಎ. ನರಸಿಂಹರೆಡ್ಡಿ, ಲಕ್ಷ್ಮೀನಾರಾಯಣರೆಡ್ಡಿ, ಸಂಘದ ಕಾರ್ಯದರ್ಶಿ ಕೆ.ಜಿ. ರವೀಂದ್ರರೆಡ್ಡಿ ಹಾಗೂ ಪರಿವಿಕ್ಷಕ ಅಶ್ವತ್ಥಪ್ಪ ಮತ್ತಿತರರು ಹಾಜ ರಿದ್ದರು.