ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapur News: 2,806 ಮಂಜೂರಿದಾರರ ಹೆಸರಿಗೆ ಖಾತೆ–ಪಹಣಿ ಇಂಡೀಕರಣ: ಬಾಕಿ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ತಾಲ್ಲೂಕುವಾರು ಪ್ರಗತಿ ವಿವರದಂತೆ, ಒಟ್ಟು 9,924 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 5,290 ಅರ್ಜಿಗಳ ಸರ್ವೇ ಪೂರ್ಣಗೊಂಡಿದೆ. ಸರ್ವೇ ನಂತರದ ಪ್ರಕ್ರಿಯೆ ಯಲ್ಲಿ 3,159 ಅರ್ಜಿಗಳನ್ನು ದುರಸ್ತಿಪಡಿಸಲಾಗಿದ್ದು, 357 ಮಂಜೂರಾತಿ ಸಂಬಂಧಿತ ಪ್ರಕರಣ ಗಳು, 75 ಇತರೆ ಪ್ರಕ್ರಿಯೆಗಳು ಹಾಗೂ 1,401 ಅರ್ಜಿಗಳ ವಿಲೇವಾರಿ ವಿವಿಧ ಹಂತಗಳಲ್ಲಿ ಇರುವುದಾಗಿ ವಿವರ ದಲ್ಲಿ ನಮೂದಿಸಲಾಗಿದೆ.

ಚಿಕ್ಕಬಳ್ಳಾಪುರ: ಸರ್ಕಾರದ ಮಹತ್ವಾಕಾಂಕ್ಷಿ ದರಕಾಸ್ತು ಪೋಡಿ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸ್ವೀಕೃತವಾಗಿರುವ 9,924 ಅರ್ಜಿಗಳ ಪೈಕಿ 5,290 ಅರ್ಜಿಗಳ ಸರ್ವೇ ಕಾರ್ಯ ಪೂರ್ಣ ಗೊಂಡಿದ್ದು, 3,159 ಅರ್ಜಿಗಳನ್ನು ದುರಸ್ತಿಪಡಿಸಿ 2,806 ಮಂಜೂರಿದಾರರ ಹೆಸರಿಗೆ ಖಾತೆ ಮಾಡಿಸಿ ಪಹಣಿ ಇಂಡೀಕರಿಸಲಾಗಿದೆ. ಬಾಕಿ ಇರುವ ಅರ್ಜಿಗಳ ವಿಲೇವಾರಿಗೆ ಜಿಲ್ಲಾಡಳಿತ ವಿಶೇಷ ಆದ್ಯತೆ ನೀಡಿದೆ.

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ತಾಲ್ಲೂಕುವಾರು ಪ್ರಗತಿ ವಿವರದಂತೆ, ಒಟ್ಟು 9,924 ಅರ್ಜಿಗಳು ಸ್ವೀಕೃತವಾಗಿದ್ದು, ಈ ಪೈಕಿ 5,290 ಅರ್ಜಿಗಳ ಸರ್ವೇ ಪೂರ್ಣಗೊಂಡಿದೆ. ಸರ್ವೇ ನಂತರದ ಪ್ರಕ್ರಿಯೆ ಯಲ್ಲಿ 3,159 ಅರ್ಜಿಗಳನ್ನು ದುರಸ್ತಿಪಡಿಸಲಾಗಿದ್ದು, 357 ಮಂಜೂರಾತಿ ಸಂಬಂಧಿತ ಪ್ರಕರಣ ಗಳು, 75 ಇತರೆ ಪ್ರಕ್ರಿಯೆಗಳು ಹಾಗೂ 1,401 ಅರ್ಜಿಗಳ ವಿಲೇವಾರಿ ವಿವಿಧ ಹಂತಗಳಲ್ಲಿ ಇರುವು ದಾಗಿ ವಿವರದಲ್ಲಿ ನಮೂದಿಸಲಾಗಿದೆ.

ಇದನ್ನೂ ಓದಿ: Chikkaballapur News: ಅಧಿಕಾರಿಗಳನ್ನು ಹೀಯಾಳಿಸುವ ಶಾಸಕರ ಪ್ರವೃತ್ತಿ ಖಂಡನೀಯ: ರಾಜ್ಯ ಉಪಾಧ್ಯಕ್ಷ ವೆಂಕಟರಮಣಪ್ಪ

ಇದೇ ವೇಳೆ, 3,702 ಅರ್ಜಿಗಳ ಸಂಬಂಧಿತ ಪ್ರಕ್ರಿಯೆ ಪೂರ್ಣಗೊಂಡಿದ್ದು, 932 ಅರ್ಜಿಗಳ ಸರ್ವೇ ಕಾರ್ಯ ಪ್ರಗತಿಯಲ್ಲಿದೆ. 2,806 ಮಂಜೂರಿದಾರರ ಹೆಸರಿಗೆ ಖಾತೆ ಮತ್ತು ಪಹಣಿ ದಾಖಲೆಗಳನ್ನು ಸೃಜಿಸಲಾಗಿದ್ದು, ಇನ್ನೂ 353 ಮಂಜೂರಿದಾರರ ಹೆಸರಿಗೆ ಪಹಣಿ ಸೃಜಿಸುವ ಕಾರ್ಯ ಬಾಕಿಯಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಅರ್ಜಿಗಳ ವಿಲೇವಾರಿಯಲ್ಲಿ ತಾಲ್ಲೂಕುವಾರು ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಲಾಗು ತ್ತಿದ್ದು, ಬಾಕಿ ಇರುವ ಸರ್ವೇ ಹಾಗೂ ದಾಖಲೆಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅರ್ಹ ಮಂಜೂರಿದಾರರಿಗೆ ಭೂದಾಖಲೆ ಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ದರಕಾಸ್ತು ಪೋಡಿ ಕಾರ್ಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ.

ಈ ಸಂಬಂಧ ಭೂದಾಖಲೆಗಳ ಉಪನಿರ್ದೇಶಕರು, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರರಿಗೆ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದ್ದು, ಸಾರ್ವಜನಿಕರ ಅರ್ಜಿಗಳನ್ನು ವಿಳಂಬವಿಲ್ಲದೆ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.