ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಕ್ಕಲಿಗ ಸಮುದಾಯ ನಾಯಕತ್ವದ ಸಮುದಾಯ: ಡಾ.ಎಂ.ಸಿ.ಸುಧಾಕರ್

ವಕ್ಕಲಿಗ ಮಹಿಳೆಯರಂತೂ ಉದ್ಯಮ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವುದು ಅಭಿನಂದನೀಯ. ವಕ್ಕಲಿಗರ ವೃತ್ತಿ ಯಾವುದಾದರೂ ಗೌರವಹಿತವಾದ ಬದುಕನ್ನು ಬದುಕಿ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ನೀಡುತ್ತಾ ಮತ್ತು ಅವರಿಂದ ಸಮಾಜಕ್ಕೆ ಉತ್ತಮ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆಂದರು.

ಚಿಕ್ಕಬಳ್ಳಾಪುರ: ವಕ್ಕಲಿಗ ಸಮುದಾಯ ಕೇವಲ ವಕ್ಕಲುತನ ಮಾಡಿಕೊಂಡು ಇಲ್ಲ. ಇಂದು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿರುವ ಒಕ್ಕಲಿಗರು ಎಲ್ಲಾ ರಂಗಗಳಲ್ಲಿಯೂ ಮುಂದುವರೆದಿದ್ದು ಉದ್ಯಮ ಕ್ಷೇತ್ರದಲ್ಲೂ ಸಹ ತಮ್ಮ ಚಾಪು ಮೂಡಿಸಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್(Higher Education Minister Dr. M.C. Sudhakar) ತಿಳಿಸಿದರು.

ನಗರದ ಬಿಬಿ ರಸ್ತೆಯ ವಕ್ಕಲಿಗರ ಕಲ್ಯಾಣ ಮಂಟಪದ ಆವರಣದಲ್ಲಿ ಒಕ್ಕಲಿಗರ ಸಂಘದ ವತಿಯಿಂದ ಬುಧವಾರ ನಡೆದ “ಶ್ರೀ ಕೆಂಪೇಗೌಡ ವಾಣಿಜ್ಯ ಸಂಕೀರ್ಣ” ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ವಕ್ಕಲಿಗ ಮಹಿಳೆಯರಂತೂ ಉದ್ಯಮ ಕ್ಷೇತ್ರದಲ್ಲಿ ಅತಿ ಹೆಚ್ಚಿನ ಸಾಧನೆ ಮಾಡಿರುವುದು ಅಭಿನಂದನೀಯ. ವಕ್ಕಲಿಗರ ವೃತ್ತಿ ಯಾವುದಾದರೂ ಗೌರವಹಿತವಾದ ಬದುಕನ್ನು ಬದುಕಿ ಮಕ್ಕಳನ್ನು ಉತ್ತಮ ವಿದ್ಯಾಭ್ಯಾಸ ನೀಡುತ್ತಾ ಮತ್ತು ಅವರಿಂದ ಸಮಾಜಕ್ಕೆ ಉತ್ತಮ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆಂದರು.

ಬಹಳಷ್ಟು ಹಿರಿಯರ ಪರಿಶ್ರಮದಿಂದ ಚಿಕ್ಕಬಳ್ಳಾಪುರ ವಕ್ಕಲಿಗರ ಸಂಘ ಉದ್ಭವವಾಗಿದ್ದು, ಅದರ ಫಲವನ್ನು ಇಂದು ನಾವು ಅನ್ನುತ್ತಿದ್ದೇವೆ. ಸರಿಸುಮಾರು ಶತಮಾನಕ್ಕೂ ಹಿಂದಿನ ಸಂಘ ಇದಾಗಿದ್ದು ಇದರಲ್ಲಿ ಅಂದಿನಿಂದ ಇಂದಿನವರೆಗೂ ನಿಸ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿದ ಎಲ್ಲರ ಪರಿಶ್ರಮದಿಂದ ಇಂದು ನಗರದ ಹೃದಯ ಭಾಗದಲ್ಲಿ ಇಂತಹ ಕಟ್ಟಡ ಆಗಲು ಕಾರಣವಾಗಿದೆ.

ಇದನ್ನೂ ಓದಿ: Chikkaballapur News: ಆದಿಚುಂಚನಗಿರಿ ಶ್ರೀ ಅಮೃತ ಹಸ್ತದಿಂದ ಮೇ.13ರಂದು ಒಕ್ಕಲಿಗರ ಸಂಘದ ನೂತನ ವಾಣಿಜ್ಯ ಮಳಿಗೆಗಳ ಲೋಕಾರ್ಪಣೆ

ಬೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿ ಮತ್ತು ಡಾ.ನಿರ್ಮಲಾನಂದ ಶ್ರೀಗಳ ದೂರದೃಷ್ಟಿಯ ಫಲ ಇಂದು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದಾರೆ. ಸರ್ಕಾರ ಮಾಡಬೇಕಾದ ಸಾಧ್ಯತೆಗಳಾದ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಅಂಧ ಮಕ್ಕಳಿಗಾಗಿ ಶಾಲೆಗಳು, ಪೋಷಕರಿಲ್ಲದ, ಅಶಕ್ತ, ಪ್ರತಿಭಾವಂತ ಬಡ ಮಕ್ಕಳಿಗಾಗಿ ಉಚಿತ ಶಾಲೆಗಳನ್ನು ತರೆದು ಶಿಕ್ಷಣ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ ಗಿಂತ ಕೊಂಚ ಹೆಚ್ಚು ದರದಲ್ಲಿ ತಮ್ಮ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯನ್ನು ಸ್ವಾಮೀಜಿ ಯವರು ನೀಡುತ್ತಿರುವುದು ಶ್ಲಾಘನೀಯ.ಆಸ್ಪತ್ರೆ ಮತ್ತು ಶಾಲೆಗಳಲ್ಲಿ ಕೇವಲ ನಮ್ಮ ಸಮುದಾಯ ಮಕ್ಕಳಿಗೆ ಮಾತ್ರವಲ್ಲದೆ ಬೇರೆ ಮಕ್ಕಳಿಗೂ ವಿದ್ಯಾಬ್ಯಾಸ ನೀಡುತ್ತಿದ್ದು, ಸಮಾಜದ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವಂತಹ ಕೆಲಸವನ್ನು ಶ್ರೀಗಳು ಮಾಡುತ್ತಿರುವುದು ನಮ್ಮೆಲ್ಲರಿಗೂ ಗೌರವ ಪ್ರಧವಾಗಿದೆ ಎಂದರು.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಕೂಡಲೇ ರಾಜೀನಾಮೆ ಕೊಡಬೇಕು-ಸಚಿವ ಡಾ.ಎಂ.ಸಿ.ಸುಧಾಕರ್

ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಯಲು ಕುರಿತು ಮಾತನಾಡಿದ ಸಚಿವ ಡಾ.ಎಂ.ಸಿ.ಸುಧಾಕರ್ , ನೀಟ್ ಪರೀಕ್ಷೆ ರದ್ದಾಗಿರುವು ದರಿಂದ ಆಘಾತವಾಗಿದೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಕೇಂದ್ರದ ಬಿಜೆಪಿ ನಾಯಕರು ಉತ್ತರ ಕೊಡಬೇಕು. ಈಗ ಸಿಬಿಐ ತನಿಖೆ ಮಾಡುವುದಾಗಿ ಕೇಂದ್ರ ತಿಳಿಸಿದೆ. ಸಿಬಿಐ ತನಿಖೆ ಮಾಡಿದರೆಮಕ್ಕಳು ಪರೀಕ್ಷೆ ಬರೆಯುವ ಹಾಗೆ ಇಲ್ವಾ. ?

ಎರಡು ವರ್ಷದ ಹಿಂದೆ ಹೀಗೆ ಪ್ರಶ್ನೆ ಪತ್ರಿಕೆ ಲೀಕಾದಾಗ ತನಿಖೆ ಮಾಡಿ ಏನು ಮಾಡಿದ್ದೀರಿ ?. ಕಾಂಗ್ರೆಸ್‌ ಸರ್ಕಾರದ ರಾಜ್ಯಗಳಲ್ಲಿ ಏನಾದ್ರೂ ಆದ್ರೆ ಏನ್‌ ಅಂತೀರಾ.?ಮೋದಿ ಸರ್ಕಾರ ಮಾಡಿದ್ರೆ ಮಾತ್ರ ಏನೂ ತಪ್ಪಿಲ್ಲ ಅಂತೀರಾ.? ಸಿಬಿಐ ತನಿಖೆ ಮಾಡಿ ಏನ್‌ ಮಾಡ್ತೀರಾ, ಮಕ್ಕಳಿಗೆ ಪರೀಕ್ಷೆ ತಪ್ಪಿಸ್ತರಾ ? , ಈ ಎಲ್ಲದರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ, ಶಾಖಾ ಮಠದ ಕಾರ್ಯದರ್ಶಿ ಮಂಗಳಾನಾಥಸ್ವಾಮೀಜಿ, ಸಂಸದ ಡಾ.ಕೆ.ಸುಧಾಕರ್, ರಾಜ್ಯ ವಕ್ಕಲಿಗರ ಸಂಘದ ನಿರ್ಧೇಶಕರಾದ ಡಾ.ರಮೇಶ್. ಯಲುವಹಳ್ಳಿ ಎನ್.ರಮೇಶ್,ಕೋನಪ್ಪರೆಡ್ಡಿ, ಬೀಜನಿಗಮದ ಅಧ್ಯಕ್ಷ ಎಂ.ಆಂಜಿನಪ್ಪ, ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ವಕ್ಕಲಿಗರ ಸಂಘದ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಕಾರ್ಯದರ್ಶಿ ಚನ್ನಪ್ಪರೆಡ್ಡಿ,ನಿರ್ಧೇಶಕರಾದ ಎಂ.ಪ್ರಕಾಶ್, ಚದಲಪುರ ನಾರಾಯಣಸ್ವಾಮಿ, ಬಿ.ಎಂ.ರಾಮಸ್ವಾಮಿ, ಬಿ.ಕೆ.ಮಂಜುನಾಥ್, ಎ.ವಿ.ಬೈರೇಗೌಡ,ಕೆ.ಪಿ.ಶ್ರೀನಿವಾಸಮೂರ್ತಿ, ವಿ.ನಂಜುಂಡಪ್ಪ, ನಾರಾಯಣಸ್ವಾಮಿ,ನಾಗರಾಜ್,ಮುಖಂಡರಾದ ಕೆ.ವಿ.ನಾಗರಾಜ್, ಮರಳಕುಂಟೆ ಕೃಷ್ಣಮೂರ್ತಿ, ಎ.ಗಜೇಂದ್ರ ಮತ್ತಿತರರು ಇದ್ದರು.