ಗೌರಿಬಿದನೂರು: ಹಾಸ್ಟೆಲ್ ಸಹಾಯಕಿ ಅಡುಗೆ ಸಿಬ್ಬಂದಿಯ ಪತಿ ವಿದ್ಯಾರ್ಥಿಗೆ ಬೆತ್ತದಿಂದ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಕರೇಕಲ್ಲಹಳ್ಳಿ ಯಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸದರಿ ಘಟನೆ ನಡೆದಿದೆ ಎನ್ನಲಾಗಿದೆ.
ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ಮಹಿಳಾ ಅಡುಗೆ ಸಿಬ್ಬಂದಿಗೆ ಮತ್ತು ಅವರ ಪತಿಗೂ ಸಹ ಉಳಿದುಕೊಳ್ಳಲು ಜಾಗ ನೀಡಲಾಗಿದೆ ಎಂದು ಹಾಸ್ಟೆಲ್ ವಾರ್ಡನ್ ಹೇಳಿದ್ದಾರೆ.
ಇದನ್ನೇ ಬಂಡವಾಳ ಮಾಡಿಕೊಂಡ ಅಡುಗೆ ಸಿಬ್ಬಂದಿ ಪತಿ ಖಲಂದರ್ ವಿದ್ಯಾರ್ಥಿಗಳ ಮೇಲೆ ದರ್ಪ ತೋರಲು ಪ್ರಾರಂಭಿಸಿದ್ದಾನೆ.
ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸ ವಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಕೆಲವು ವ್ಯಕ್ತಿಗಳು ತಾವು ಪತ್ರಕರ್ತರು ಎಂದು ಹೇಳಿಕೊಂಡು ಮಂಗಳವಾರ ರಾತ್ರಿ ಗೋಡೆ ಹಾರಿ ಒಳಗೆ ಪ್ರವೇಶಿಸಿ, ಕೆಲಸ ಮಾಡುವ ಸಿಬ್ಬಂದಿಗೆ ದಮ್ಮಿ ಹಾಕಿದ್ದಾರೆ. ಅಲ್ಲದೆ 20 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇರುವ ಈ ಹಾಸ್ಟೆಲ್ ನಲ್ಲಿ ತಡರಾತ್ರಿ ಕೆಲವರು ಅಲ್ಲಿನ ಶಿಕ್ಷಕರೊಂದಿಗೆ ಕುಳಿತು ಮಾತನಾಡುತ್ತಿರುವ ವಿಡಿಯೋಗಳ ನೋಡಿದವರು. ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಹೊರತುಪಡಿಸಿ ಬೇರೆ ಯಾರಿಗೂ ಪ್ರವೇಶವಿಲ್ಲ. ಆದರೆ ಹೊರಗಿನವರಿಗೆ ಮುಕ್ತ ಪ್ರವೇಶ ನೀಡಿರುವುದು. ಹಾಗೂ ಇಲ್ಲಿ ಸಿ ಸಿ ಕ್ಯಾಮೆರಾಗಳು ಇಲ್ಲದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಇದನ್ನೂ ಓದಿ: Chikkamagaluru news: ಕಡೂರು ಶಾಸಕರ ಪಿಎಯಿಂದ ಕಿರುಕುಳ, ಸರಕಾರಿ ನೌಕರ ಡೆತ್‌ನೋಟ್ ಬರೆದಿಟ್ಟು ನಾಪತ್ತೆ
ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಭದ್ರತೆ ಇದೆಯೇ ಎಂದು ಸಾರ್ವಜನಿಕರು ಸಂಭಂದಪಟ್ಟ ಇಲಾಖೆಯ ಮೇಲಧಿಕಾರಿಗಳಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ವಾರ್ಡನ್ ನವೀನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ವಿದ್ಯಾರ್ಥಿಗೆ ಅಡುಗೆ ಸಿಬ್ಬಂದಿ ಪತಿ ಥಳಿಸಿರುವ ಘಟನೆಯ ವಿಡಿಯೋ ಎರಡು ತಿಂಗಳ ಹಿಂದೆ ನಡೆದಿರುವುದು. ಈಗ ನನ್ನ ಗಮನಕ್ಕೆ ಬಂದಿದೆ. ರಾತ್ರಿ ಸಹ ಇಬ್ಬರು ವ್ಯಕ್ತಿಗಳು ಹಾಸ್ಟೆಲ್ ನ ಕಾಂಪೌಂಡ್ ಹಾರಿ ಬಂದು ನಾವು ಪತ್ರಕರ್ತರು ಎಂದು ಹೇಳಿಕೊಂಡು ಹಾಸ್ಟೆಲ್ ನ ತರಗತಿಗಳನ್ನು ಪರಿಶೀಲನೆ ಮಾಡಿದ್ದಾರೆ. ಅವರು ಪತ್ರಕರ್ತರೋ ಅಲ್ಲವೋ ನನಗೆ ಸರಿಯಾದ ಮಾಹಿತಿಯಿಲ್ಲ, ಇದನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪೊಲೀಸರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಸ್ಥಳಕ್ಕೆ ತಹಶೀಲ್ದಾರ್ ಅರವಿಂದ್ ಭೇಟಿ ಹಾಸ್ಟೆಲ್ ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಸರಿಯಾದ ಬೆಳಕಿನ ವ್ಯವಸ್ಥೆಯಾಗಲಿ, ವಿಷ ಜಂತುಗಳಿಂದ ಮಕ್ಕಳಿಗೆ ರಕ್ಷಣೆಯಾಗಲಿ, ಸಿ ಸಿ
ಕ್ಯಾಮೆರಾವಾಗಲಿ, ಬಯೋ ಮೆಟ್ರಿಕ್ ಆಗಲಿ, ಮತ್ತು ಕಾಂಪೌಂಡ್ ವ್ಯವಸ್ಥೆಯಾಗಲಿ, ಯಾವುದೇ ಭದ್ರತೆ ಇಲ್ಲ, ರಾತ್ರಿ ವೇಳೆ ರಕ್ಷಣಾ ಸಿಬ್ಬಂದಿ ಇಲ್ಲದೆ. ಇರುವುದನ್ನು ಗಮನಿಸಿ ವಾರ್ಡನ್ ಗೆ ತರಾಟೆಗೆ ತೆಗೆದುಕೊಂಡರು.
ಮಂಗಳವಾರ ರಾತ್ರಿ ಹಾಸ್ಟೆಲ್ ಗೆ ಬಂದಿದ್ದ ಅಪರಿಚಿತರು ವಾರ್ಡನ್, ಸಿಬ್ಬಂದಿ ಮತ್ತು ಮಕ್ಕಳಿಂದ ಮಾಹಿತಿ ಪಡೆದುಕೊಂಡರು, ಕೊಠಡಿಗಳ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಸಿ ಸಿ ಕ್ಯಾಮೆರಾ, ಊಟದ ಮೆನು, ಬಯೋ ಮೆಟ್ರಿಕ್ ಇಲ್ಲದೆ ಇರುವ ಬಗ್ಗೆ ವಿವರಣೆ ಕೇಳಿ, ನೋಟೀಸ್ ನೀಡಲಾಗುವುದು. ಹಾಗೂ ಎಂದು ಅಪರಿಚಿತರು ಬಂದಿರುವ ಬಗ್ಗೆ ಪೊಲೀಸ್ ದೂರು ನೀಡಲು ವಾರ್ಡನ್;ಗೆ ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಆಶಾ, ಆರ್ ಐ ಖಾದರ್, ವಿ ಎ ಅಮರ್ ನಾರಾಯಣ, ವಾರ್ಡನ್ ನವೀನ್, ಹಾಗೂ ಸಿಬ್ಬಂದಿ ಹಾಜರಿದ್ದರು