ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನಿಮ್ಮನ್ನು ಗೆಲ್ಲಿಸಿ ತಪ್ಪು ಮಾಡಿದೆವು : ಜನರನ್ನು ಮರುಳು ಮಾಡಿದ ನೀವು ಷ್ಟಾಚಾರದ ಪಿತಾಮಹ: ಮಿಲ್ಟನ್ ವೆಂಕಟೇಶ್ ಆಕ್ರೋಶ

ಕೈಯಲ್ಲಿ ಬಿಡಿಗಾಸು ಇಲ್ಲದೆ ಕ್ಷೇತ್ರಕ್ಕೆ ಬಂದ ನಿಮಗೆ ನಾವೆಲ್ಲಾ ಹಣ ಖರ್ಚು ಮಾಡಿಕೊಂಡು ಕೆಲಸ ಮಾಡಿದ್ದೇವೆ. ಕೈಯಲ್ಲಿ ಅಂಬೇಡ್ಕರ್ ಪೋಟೋ ಹಿಡಿದು ಕಾಲೋನಿಗಳಿಗೆ ಹೋಗಿ ಅಮ್ಮಾ ನಾನು ಅನಾಥ, ನನ್ನ ಕೈಹಿಡಿದು ನಡೆಸಿ ಎಂದು ಗೋಗರೆದೆ. ಅವರೊಟ್ಟಿಗೆ ಕುಳಿತು ಅನ್ನ ತಿಂದು ಪ್ರಾಮಾ ಣಿಕವಾಗಿ ಕೆಲಸ ಮಾಡುವ ಮಾತಾಡಿದೆ.

ಚಿಕ್ಕಬಳ್ಳಾಫುರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾಜಿ ನಗರಸಭಾ ಸದಸ್ಯ ಮಿಲ್ಟನ್ ವೆಂಕಟೇಶ್ ಮಾತನಾಡಿದರು.

ಚಿಕ್ಕಬಳ್ಳಾಪುರ : ಕ್ಷೇತ್ರ ಪರಿಚಯವೇ ಇಲ್ಲದ, ಕೃತಜ್ಞತೆಯಿಲ್ಲದ ವ್ಯಕ್ತಿಯನ್ನು ತಂದು ನಿಲ್ಲಿಸಿ, ಗೆಲ್ಲಿಸಿ ತಪ್ಪು ಮಾಡಿದೆವು. ನಿಮಗಾಗಿ ಪ್ರತಿ ಮುಖಂಡರು ಕೆಲಸ ಮಾಡಿ ಗೆಲ್ಲಿಸುವ ಕೆಲಸ ಮಾಡಿದ್ದಾರೆ. ಗೆದ್ದ ಮೇಲೆ ನಮ್ಮನ್ನು ಮರೆತು 15 ದಿನಗಳಲ್ಲಿ ಗೆಲುವು ಕಂಡೆ ಹೇಳಿಕೊಂಡು ತಿರುಗಿದೆ ಇದೇ ನಿಮ್ಮ ನಿಜವಾದ ವ್ಯಕಿತ್ವ ಎಂದು ನಗರಸಭಾ ಮಾಜಿ ಸದಸ್ಯ ಮಿಲ್ಟನ್ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೈಯಲ್ಲಿ ಬಿಡಿಗಾಸು ಇಲ್ಲದೆ ಕ್ಷೇತ್ರಕ್ಕೆ ಬಂದ ನಿಮಗೆ ನಾವೆಲ್ಲಾ ಹಣ ಖರ್ಚು ಮಾಡಿಕೊಂಡು ಕೆಲಸ ಮಾಡಿದ್ದೇವೆ. ಕೈಯಲ್ಲಿ ಅಂಬೇಡ್ಕರ್ ಪೋಟೋ ಹಿಡಿದು ಕಾಲೋನಿಗಳಿಗೆ ಹೋಗಿ ಅಮ್ಮಾ ನಾನು ಅನಾಥ, ನನ್ನ ಕೈಹಿಡಿದು ನಡೆಸಿ ಎಂದು ಗೋಗೆರೆದೆ.ಅವರೊಟ್ಟಿಗೆ ಕುಳಿತು ಅನ್ನ ತಿಂದು ಪ್ರಾಮಾ ಣಿಕವಾಗಿ ಕೆಲಸ ಮಾಡುವ ಮಾತಾಡಿದೆ. ಗೆದ್ದ ಮೇಲೆ ಏನು ಮಾಡಿದೆ ಎಂದು ಪ್ರಶ್ನಿಸಿದ ಅವರು ದಲಿತ ಪ್ರೀತಿ ನಿಮಗಿದ್ದದ್ದು ಸತ್ಯವೇ ಆಗಿದ್ದಲ್ಲಿ ನಗರ ಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಕ್ಯಾಟಗೆರಿ ತಂದು ದಲಿತರನ್ನು ಅಧ್ಯಕ್ಷ ಮಾಡಬಹುದಿತ್ತು. ಚಿಮುಲ್ ನಲ್ಲಿ ನೀವೇ ಹೇಳಿದ ಹಾಗೆ 2 ಸ್ಥಾನ ನೀಡಿದ್ದೀರಾ ಇಲ್ಲ.ಯಾಕೆ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Chikkaballapur News: ಬುದ್ಧ, ಬಸವ ಅಂಬೇಡ್ಕರ್ ಅವರ ಬದುಕು ಬರಹವೇ ನಮ್ಮ ಜೀವನಕ್ಕೆ ಸ್ಪೂರ್ತಿ: ಎಸ್‌ಎಸ್‌ಡಿ ರಾಜ್ಯಾಧ್ಯಕ್ಷ ಜಿ.ಸಿ.ವೆಂಕಟರವಣಪ್ಪ

ಕ್ಷೇತ್ರದಲ್ಲಿ ನಡೆಯುವ ರಾಷ್ಟಿçಯ ಹಬ್ಬಗಳಾಗಲಿ, ಸಮುದಾಯದ ಕಾರ್ಯಕ್ರಮಗಳಾಗಲಿ ಯಾವು ದಕ್ಕೂ ಭಾಗಿಯಾಗುವುದಿಲ್ಲ.ಜಿಲ್ಲಾಡಳಿತದ ಯಾವ ಸಭೆಗೆ ನೀವು ಭಾಗಿಯಾಗಿದ್ದೀರಾ,? ನೀವು ಜನಪರ ಕಾಳಜಿಯಿಲ್ಲದ ಪ್ರಚಾರಪ್ರಿಯ ಶಾಸಕ ಅಷ್ಟೇ.ಕಾಂಗ್ರೆಸ್ ಪಕ್ಷ ನಿಮ್ಮಪ್ಪನ ಆಸ್ತಿನಾ? ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ 3 ಕೋಟಿ ತೆಗೆದುಕೊಂಡು ಹೋಗಿರುವುದು ಪ್ರೂವ್ ಮಾಡಿ. ಅವರು ದಲಿತ ವಿರೋಧಿ ಎಂದು ತೋರಿಸಿ ಎಂದು ಸವಾಲು ಹಾಕಿದರು.

ಭ್ರಷ್ಟಾಚಾರ ನಿಮ್ಮಿಂದಲೇ ಶುರುವಾಗಿದೆ.ನಿನ್ನ ಮನೆ ವಿಳಾಸ ಯಾರಿಗೆ ಕೊಟ್ಟಿದ್ದೀರಿ, ಚಿಕ್ಕಬಳ್ಳಾ ಪುರದಲ್ಲಿ ನಿಮ್ಮ ಮನೆ ಇದೆಯಾ, ಪ್ರದೀಪ ಅವರ ಆದೇಶದಂತೆ 2016ರಲ್ಲಿ ಆಗಿರುವ ಆದೇಶ ಈಗ ತಹಶೀಲ್ದಾರ್ ಮಾಡಿದ್ದಾರೆ. ಯಾವ ದಲಿತರು ಬಂದು ನಿಮಗೆ ಹೀಗೆ ಮಾಡಿಸಿ ಎಂದು ದೂರು ನೀಡಿದ್ದರು ಸರ್, ಹೀಗೆ ಆದೇಶ ಮಾಡಿಸುವ ಮೂಲಕ ಕೋಮುಗಲಭೆಗೆ ಕಾರಣವಾಗಿದ್ದಾರೆ. ತಹಶೀಲ್ದಾರ್‌ಗಳು ನಿಮ್ಮ ಕೆಲಸ ಮಾಡಿ ರಾಜಕೀಯ ಮಾಡಬೇಡಿ,ಇಬ್ಬರು ಚಿಕ್ಕಬಳ್ಳಾಪುರ, ಮಂಚೇನಹಳ್ಳಿ ತಹಶೀಲ್ದಾರ್ ವಿರುದ್ದ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಹರಿಹಾಯ್ದರು.

ನಮ್ಮೂರಿಗೆ ನಮ್ಮ ಶಾಸಕ ಮೂಲಕ ಹಳ್ಳಿಯ ಜನತೆ ಮಲಗಿರುವ 5 ಗಂಟೆಗೆ ಹೋಗುವುದು ಅವರು ಎದ್ದು ಹೊರಗೆ ಬರುವಷ್ಟರಲ್ಲಿ ಅಲ್ಲಿಂದ ವಾಪಸ್ಸು ಬರುತ್ತೀಯಾ, ಪ್ರತಿ ವರ್ಷ ಮಹಿಳೆಯರಿಗೆ ಅರಿಶಿನ ಕುಂಕುಮ ಕೊಟ್ಟಿದ್ದೇನೆ ಎನ್ನುವ ನೀವು ಸರಿಯಾಗಿ ನೀವು ಹೇಳಿದ ಹಬ್ಬಕ್ಕೆ ಕೊಟ್ಟಿದ್ದೀರಾ?  ಅಂಬೇಡ್ಕರ್ ಪೋಟೋ ಬಳಸುವ ನೀವು ಕಾಲೋನಿಗೆ ಯಾವ ಸೌಲಭ್ಯವೂ ಕೊಟ್ಟಿಲ್ಲ.

ಒಕ್ಕಲಿಗರು ಓಟ್ ಹಾಕಿಲ್ಲ,ಅವರು ಜೊತೆ ಹೋಗಬೇಡಿ ಎಂದು ಪಿ.ಎ ಕೈಲಿ ನನಗೆ ಹೇಳಿಸಿದ್ದು ಸುಳ್ಳಾ..ರಾಜಕೀಯ ಜೀವನ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ನಮ್ಮಿಂದ ದೂರವಾದೇ..ನೀವು ನಡೆಸುವ ಕಾಲೇಜುಗಳ ಪೈಕಿ ಎಷ್ಟಕ್ಕೆ ಅನುಮತಿ ಪಡೆದಿದ್ದೀರಿ.ನಿಮ್ಮ ಸಮುದಾಯ ಮುಖಂಡರಿಗೆ ಗೌರವ ತರುತ್ತಿದ್ದೀಯಾ ಎಂದ ಅವರು ಈ ಕೂಡಲೆ ನೀವು ರಾಜೀನಾಮೆ ಕೊಟ್ಟು ಇಲ್ಲಿಂದ ತೊಲಗ ಬೇಕು. ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಸಮುದಾಯದವರನ್ನು ಸೇರಿಸಿ ಮಾಡಿದ್ದೀಯಾ, ನಿಮ್ಮ ವರ್ತನೆ ಸರಿ ಮಾಡಿಕೋ ಇಲ್ಲವಾದಲ್ಲಿ ದಾವಣಗೆರೆ ಸೇವೆ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.