ಶಿಡ್ಲಘಟ್ಟ: ನಗರಸಭೆ ಪೌರಾಯುಕ್ತೆಗೆ ‘ಕೈ’ ಮುಖಂಡನಿಂದ ನಿಂದನೆ ವಿಚಾರ ಸಂಬಂಧ ಆರೋಪಿ ರಾಜೀವ್ ಗೌಡ ಈ ರೀತಿ ಮಾತನಾಡಬಾರದಾಗಿತ್ತು. ಕ್ಷೇತ್ರಕ್ಕೆ ನಾವೇ ಅವರನ್ನ ಆಯ್ಕೆ ಮಾಡಿದ್ದೇವೆ. ಅವರು ಈ ರೀತಿ ಮಾತನಾಡಿರೋದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಿದೆ ಎಂದು ಶಶಿಧರ್ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಹಂಡಿಗನಾಳ ತಮ್ಮ ಸ್ವಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್ ಗೌಡ ಅವರು ಈ ರೀತಿ ಮಾತನಾಡಿರೋದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗಿದೆ.ಕಾಂಗ್ರೆಸ್ ಪಕ್ಷದಿಂದ ಅವರಿಗೆ ನಾನು ಕ್ಷಮೆಯಾಚಿಸುತ್ತೇನೆ ಎಂದರು.
ಇಂತಹ ಘಟನೆಯಿಂದ ಪಾರ್ಟಿಗೆ ಡ್ಯಾಮೇಜ್ ಆಗುತ್ತೆ. ಅವುಗಳನ್ನ ಸರಿದೂಗಿಸಿಕೊಂಡು ಹೋಗುವಂತಹ ಜವಾಬ್ದಾರಿ ಅವರಲ್ಲಿ ಇರುತ್ತದೆ. ಈ ಘಟನೆ ಕುರಿತು ಈಗಾಗಲೇ ನಾವು ಮಾಹಿತಿ ತಿಳಿಸಿದ್ದೇವೆ. ಪಕ್ಷದ ಹೈಕಮಾಂಡ್ ಎಐಸಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ. ಕಾಂಗ್ರೆಸ್ ಪಕ್ಷದ ಘನತೆ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಅವರೂ ಸಹ ಏನು ನಿರ್ದೇಶನ ಮಾಡುತ್ತಾರೆ ನಾವು ಕಾದು ನೋಡಬೇಕು ಎಂದರು.
ಚಿಮೂಲ್ ಚುನಾವಣೆಗೂ ಹಿನ್ನಡೆ ಭೀತಿ: ಫೆಬ್ರವರಿ ಒಂದರಂದು ನಡೆಯಲಿರುವ ಚಿಕ್ಕಬಳ್ಳಾ ಪುರ ಜಿಲ್ಲೆಯ ಚುನಾವಣೆಗೆ ಈ ರಾಜೀವ್ ಗೌಡ ಅವರ ಹೇಳಿಕೆಯಿಂದ ಹಾಗೂ ಅವರ ಅಶ್ಲೀಲ ಪದಗಳ ಬಳಕೆಯಿಂದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಚಿಮೂಲ್ ಚುನಾವಣೆಗೂ ಹಿನ್ನಡೆ ಭೀತಿ ಕಾಂಗ್ರೆಸ್ ಪಕ್ಷ ಎದುರಿಸುತ್ತಿದೆ. ತಪ್ಪನ್ನ ತಪ್ಪೇ ಎಂದು ಜನ ಸೂಚಿಸುತ್ತಾರೆ ವಿನಃ ಅದು ಸರಿ ಎಂದು ಯಾವತ್ತೂ ಹೇಳುವುದಿಲ್ಲ. ಆದ್ದರಿಂದ ಆ ತಪ್ಪಿನಿಂದ ನಾವು ಯಾವ ರೀತಿ ಸರಿಪಡಿಸಿಕೊಳ್ಳ ಬೇಕು ಎಂಬುದನ್ನು ಚರ್ಚೆ ಮಾತನಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ ಮುನಿಯಪ್ಪ, ಆಂಜಿನಪ್ಪ ಪುಟ್ಟು, ನಟರಾಜು, ಶ್ರೀನಿವಾಸ್ ರಾಮಯ್ಯ, ಚೌಕ್ಕೆಗೌಡ , ನಿರಂಜನ್, ರಾಜಕುಮಾರ್, ನಾಗೇಶ್, ಬೆಳ್ಳೂಟಿ ವೆಂಕಟೇಶ್, ಗುಡಿಹಳ್ಳಿ ಚಂದ್ರು, ಮುಂತಾದ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.