ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಅಂಬೇಡ್ಕರ್ ಭವನದ ಇತಿಹಾಸ ನಿಮಗೇನು ಗೊತ್ತು? ಜೆ.ಕೆ.ಕೃಷ್ಣಾರೆಡ್ಡಿ ವಿರುದ್ಧ ಸಚಿವ ಡಾ.ಎಂ.ಸಿ.ಸುಧಾಕರ್ ಆಕ್ರೋಶ

ಆಶ್ರಯ ಲೇಔಟ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸ ಬೇಕು ಎಂಬ ಆಲೋಚನೆ ಮಾಡಿದ್ದೇ ನಾವು. ಅದಕ್ಕಾಗಿ ಸರ್ಕಾರದಿಂದ 5 ಲಕ್ಷ ರೂಪಾಯಿ ಹಣವನ್ನೂ ಕಾಯ್ದಿರಿಸ ಲಾಗಿತ್ತು. ಆದರೆ ನಗರದ ಮಧ್ಯಭಾಗದಲ್ಲೇ ಭವನ ನಿರ್ಮಾಣ ವಾಗಬೇಕು ಎಂದು ನಮ್ಮ ಸ್ನೇಹಿತರು ಒತ್ತಾಯಿಸಿದಾಗ, ಕಾಸ್ಮೋಪಾಲಿಟನ್ ಕ್ಲಬ್ ಇದ್ದ ಜಾಗವನ್ನು ಗುರುತಿಸಲಾಯಿತು

ನಮ್ಮ ವಿರುದ್ಧ ಆಪಾದನೆ ಮಾಡುವುದೇ ನಿಮ್ಮ ಕೆಲಸವಾಯ್ತು, ಚಿಂತಾಮಣಿಯ ಇತಿಹಾಸ ಗೊತ್ತಿಲ್ಲದರ ಮಾತಿಗೆ ಕಿಮ್ಮತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕೃಷ್ಣಾರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

ಚಿಂತಾಮಣಿ: ಅಭಿವೃದ್ಧಿಯ ಹೆಸರಿನಲ್ಲಿ ಬಡವರ ಕಣ್ಣಲ್ಲಿ ನೀರು ತರಿಸುತ್ತಿದ್ದಾರೆ ಎಂದು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಆದರೆ,ನಗರದಲ್ಲಿ ಐಡಿಎಸ್‌ಎಂಟಿ ತಂದಿದ್ದು ಯಾರು? ಮುನ್ಸಿಪಾಲಿಟಿ ಮಳಿಗೆಗಳನ್ನು ಕಟ್ಟಿಸಿದ್ದು ಯಾರು? 10 ವರ್ಷಗಳ  ಅವರ ಅಧಿಕಾರಾವಧಿಯಲ್ಲಿ ಕೇವಲ ನನ್ನ ವಿರುದ್ಧ ಅಪಪ್ರಚಾರ ಮಾಡುವುದರಲ್ಲೇ ಕಳೆದ ಇವರಿಗೆ,ಬಡವರ ಬಗ್ಗೆ ಈಗ ಕಾಳಜಿ ಬಂದಿರುವುದು ಹಾಸ್ಯಾಸ್ಪದ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್(Dr M C Sudhakar) ಅವರು ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ(Ex MLA K J KrishnaReddy)ರವರ ವಿರುದ್ಧ ಹರಿಹಾಯ್ದರು.

ಚಿಂತಾಮಣಿ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಮತ್ತು ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಆಶ್ರಯ ಲೇಔಟ್ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಿಸ ಬೇಕು ಎಂಬ ಆಲೋಚನೆ ಮಾಡಿದ್ದೇ ನಾವು.ಅದಕ್ಕಾಗಿ ಸರ್ಕಾರದಿಂದ 5 ಲಕ್ಷ ರೂಪಾಯಿ ಹಣವನ್ನೂ ಕಾಯ್ದಿರಿಸಲಾಗಿತ್ತು.ಆದರೆ ನಗರದ ಮಧ್ಯಭಾಗದಲ್ಲೇ ಭವನ ನಿರ್ಮಾಣ ವಾಗಬೇಕು ಎಂದು ನಮ್ಮ ಸ್ನೇಹಿತರು ಒತ್ತಾಯಿಸಿದಾಗ, ಕಾಸ್ಮೋಪಾಲಿಟನ್ ಕ್ಲಬ್ ಇದ್ದ ಜಾಗವನ್ನು ಗುರುತಿಸಲಾಯಿತು ಎಂದರು.

ಇದನ್ನೂ ಓದಿ: Chikkaballapur News: ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ

ಮುಂದುವರಿದು ಆ ಕಟ್ಟಡ ಲೈಬ್ರರಿ ಹೆಸರಿನಲ್ಲಿತ್ತು. ಅದನ್ನು ಯಾರು ಬಿಡಿಸಿಕೊಟ್ಟರು ಎಂಬ ಬಗ್ಗೆ ದಾಖಲೆಗಳು ನಮ್ಮ ಬಳಿ ಇವೆ. ಪಟೇಲರ ಬಿಲ್ಡಿಂಗ್ ಮತ್ತು ಕಾಸ್ಮೋ ಪಾಲಿಟನ್ ಕ್ಲಬ್ ಜಾಗಗಳನ್ನು ವಶಕ್ಕೆ ಪಡೆದು ಅಭಿವೃದ್ಧಿಪಡಿಸಲು ನಾವು ಎರಡು ವರ್ಷಗಳ ಕಾಲ ಶ್ರಮಪಟ್ಟಿದ್ದೇವೆ. ಚಿಂತಾಮಣಿಯ ಹಿನ್ನೆಲೆ ಮತ್ತು ಇತಿಹಾಸ ಯಾವುದೂ ತಿಳಿಯದವರು ಇಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಜೆ.ಕೆ.ಕೃಷ್ಣಾರೆಡ್ಡಿ ವಿರುದ್ದ ತೀವ್ರ ಅಸಮಾಧಾನ ಹೊರ ಹಾಕಿದರು.

cbpm2dr.mcs

ನಗರದ ಸುರಕ್ಷತೆ ಮತ್ತು ದೂರದೃಷ್ಟಿಯ ಅಭಿವೃದ್ಧಿಗಾಗಿ ಹಳೆಯ ಕಟ್ಟಡಗಳ ತೆರವು ಅನಿವಾರ್ಯವಾಗಿತ್ತು. ಇದರಲ್ಲಿ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದು, ಮಾಜಿ ಶಾಸಕರ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.

ಚಿಂತಾಮಣಿಯ ಯಾವ ಮೂಲೆಯಲ್ಲಿ ಏನಿದೆ ಎಂಬ ಬಗ್ಗೆ ಎಬಿಸಿಡಿಯೂ ಗೊತ್ತಿಲ್ಲದ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ" ಇಂತಹವರ ಮಾತಿಗೆ ಬೆಲೆನೀಡುವ ಅಗತ್ಯವಿಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

ಇನ್ನೊಂದು ತಿಂಗಳ ಒಳಗಾಗಿ ಅಂಬೇಡ್ಕರ್ ಭವನವನ್ನು ನಾನೇ ಉದ್ಘಾಟನೆ ಮಾಡು ತ್ತೇನೆ. ಅದು ಯಾವ ರೀತಿ ಇರಲಿದೆ ಎಂಬುದನ್ನು ನೀವೇ ಬಂದು ಕಣ್ಣಾರೆ ನೋಡಿ. ಕೇವಲ ಬಾಯಿ ಮಾತಿನಲ್ಲಿ ದಲಿತರ ಹಾಗೂ ಶೋಷಿತ ವರ್ಗಗಳ ಬಗ್ಗೆ ಮಾತನಾಡುವುದಲ್ಲ ನಮ್ಮ ಕೆಲಸದಲ್ಲಿ ಅದು ಕಾಣಿಸಬೇಕು ಎಂದು ತಿರುಗೇಟು ನೀಡಿದರು.