ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಚೌದರಿ ಗಾರ್ಮೆಂಟ್ಸ್ ನಿರ್ವಾಹಕರ ವಿರುದ್ಧ ಮಹಿಳಾ ಕಾರ್ಮಿಕರು ಜಟಾಪಟಿ

ಚೌದರಿ ಗಾರ್ಮೆಂಟ್ಸ್ ಕನ್ನಡ ಚಿತ್ರರಂಗದ ಖ್ಯಾತಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಸೇರಿದ ಗಾರ್ಮೆಂಟ್ಸ್ ಆಗಿದೆ ಎನ್ನಲಾಗಿದ್ದು ಹೊಸದಾಗಿ ಬಂದಿರುವ ಕೆಲ ಗಾರ್ಮೆಂಟ್ಸ್ನ ಗ್ರೂಪ್ ಮುಖ್ಯಸ್ಥ ಹರಿ ಪ್ರಸಾದ್ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕಾರ್ಮಿಕರು ತಿರುಗಿ ಬಿದ್ದು ತಮ್ಮ ಶಕ್ತಿಯ ಬಿಸಿ ಮುಟ್ಟಿಸಿದರು.

ಬಾಗೇಪಲ್ಲಿ: ಅನೇಕ ವರ್ಷಗಳಿಂದ ಚೌದರಿ ಗಾರ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಆದರೆ ಈಗ ಹೊಸದಾಗಿ ಬಂದಿರುವ ಹರಿ ಪ್ರಸಾದ್ ಎಂಬವವರ ಸ್ವಂತ ನಿರ್ಧಾರಗಳಿಂದ ನಮಗೆ ತೊಂದರೆ ಉಂಟಾಗಿದೆ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಪ್ಲಾಜ ಬಳಿ ಇರುವ ಚೌದರಿ ಗಾರ್ಮೆಂಟ್ಸ್ ಕಂಪನಿ ಯಲ್ಲಿ ವಿನಾಕಾರಣ ಕಾರ್ಮಿಕರ ಮೇಲೆ ದೌರ್ಜನ್ಯ ನಡೆಸುತ್ತಿರುವುದನ್ನು ಖಂಡಿಸಿ ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.

ಗಾರ್ಮೆಂಟ್ ಕಂಪನಿಯಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ಮಂದಿ ಕಾರ್ಮಿಕರು ಕೆಲಸ ಮಾಡು ತ್ತಿದ್ದಾರೆ. ಆದರೆ ಆಡಳಿತ ಮಂಡಳಿಯವರು ಕಾರ್ಮಿಕ ಕಾಯ್ದೆ ಉಲ್ಲಂಘಿಸಿ ಅಮಾನವೀಯವಾಗಿ ಹಿಟ್ಲರ್ ದರ್ಬಾರ್ ನಡೆಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Chikkaballapur News: ನಕಲಿ ವೈದ್ಯರ ವಿರುದ್ದ ನಿರ್ದಾಕ್ಷಿಣ್ಯ ಕ್ರಮಕ್ಕೆ ಖಡಕ್ ಸೂಚನೆ ನೀಡಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ

ಕಾರ್ಮಿಕರನ್ನು ಏಕಾಏಕಿ ನಿಮ್ಮನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಹೇಳಿದಾಗ ನಮ್ಮ ಪರಸ್ಥಿತಿ ಏನು ಎಂಬುದು ನಮಗೆ ಅರಿವಾಗತ್ತೆ ಜೊತೆಗೆ ನಾವು ಸುಮಾರು 150 ಜನರು ಗಾರ್ಮೆಂಟ್ಸ್ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಶೇಷವೆಂದರೆ ಚೌದರಿ ಗಾರ್ಮೆಂಟ್ಸ್ ಕನ್ನಡ ಚಿತ್ರರಂಗದ ಖ್ಯಾತಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾಗೆ ಸೇರಿದ ಗಾರ್ಮೆಂಟ್ಸ್ ಆಗಿದೆ ಎನ್ನಲಾಗಿದ್ದು ಹೊಸದಾಗಿ ಬಂದಿರುವ ಕೆಲ ಗಾರ್ಮೆಂಟ್ಸ್ನ ಗ್ರೂಪ್ ಮುಖ್ಯಸ್ಥ ಹರಿ ಪ್ರಸಾದ್ ಕಾರ್ಮಿಕರ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಕಾರ್ಮಿಕರು ತಿರುಗಿ ಬಿದ್ದು ತಮ್ಮ ಶಕ್ತಿಯ ಬಿಸಿ ಮುಟ್ಟಿಸಿದರು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಕಾರ್ಮಿಕರು ನಮಗೆ ಎಂದಿನಂತೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಬೇಕು. ಮಾಡಿದ ಕೆಲಸಕ್ಕೆ ಸರಿಯಾಗಿ ಸಕಾಲಕ್ಕೆ, ಸಂಬಳ ಹಣ ಜಮಾ ಮಾಡಬೇಕು, ಮುಖ್ಯವಾಗಿ ನಮಗೆ ಗೌರವ ಕೊಡುವ ಕೆಲಸವಾಗಬೇಕು ಎಂದು ಮಹಿಳಾ ಕಾರ್ಮಿಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ಅಧಿಕ್ಷಕ ಶಿವಕುಮಾರ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ನಯಜ್ ಬೇಗ್ ಮತ್ತು ಸಬ್ ಇನ್ಸ್ಪೆಕ್ಟರ್ ನಾಗಮ್ಮ ಅವರು ಗಾರ್ಮೆಂಟ್ಸ್ ಆಡಳಿತ ಮಂಡಳಿ ಪ್ರತಿನಿಧಿಗಳೊಂದಿಗೆ ಚರ್ಚಿಸಿ,ನಿರ್ವಾಹಕರು ಮತ್ತು ಗ್ರೂಪ್ ಕ್ಯಾಪ್ಟನ್‌ಗಳನ್ನು ಕಾರ್ಮಿ ಕರ ಜೊತೆ ಸರಿಯಾಗಿ ವರ್ತಿಸುವಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಿ. ಪಿ. ಎಂ. ಹೋರಾಟಗಾರಾದ ಅಶ್ವತ್ಥಪ್ಪ,ಮಸಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮುನಿಯಪ್ಪ,ಡಿ.ಎಸ್.ಎಸ್.ಮುದ್ದಲಪಲ್ಲಿ ವೆಂಕಟೇಶ್ ಮಹಿಳಾ ಕಾರ್ಮಿಕರಾದ ಭಾಗ್ಯಮ್ಮ, ನಾಗವೇಣಿ, ರಜಿಯಾ, ಶಾಂತಮ್ಮ, ಅರುಣ, ಆನಿತಾ, ಸುನೀತಾ ಸೇರಿದoತೆ ನೂರಾರು ಕಾರ್ಮಿಕರು ಇದ್ದರು.