ಚಿಂತಾಮಣಿ: ಸಮಾಜದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ವರ್ಗವಿದೆ. ಸಂಘಟಿತ ಕಾರ್ಮಿಕ ವರ್ಗಕ್ಕೆ ನಿಯಮಗಳ ಅಡಿಯಲ್ಲಿ ಕ್ಷೇಮಾಭಿವೃದ್ಧಿ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ. ಅಸಂಘಟಿತ ಕಾರ್ಮಿಕರ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ (Higher Education Minister Dr. M.C. Sudhakar) ಅಭಿಪ್ರಾಯಪಟ್ಟರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘವು ರಾಜ್ಯ ಮಾನವ ಹಕ್ಕುಗಳ ಸಮಿತಿಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಅಸಂಘಟಿತ ಕಾರ್ಮಿಕ ವರ್ಗದಡಿಯಲ್ಲಿ 26 ಕಸಬುಗಳ ಕಾರ್ಮಿಕರ ಪಟ್ಟಿ ಈಗ 91ಕ್ಕೆ ಏರಿದೆ.ಯಾವ ವೃತ್ತಿಯನ್ನೂ ಬಿಡದೆ ಎಲ್ಲ ಪಾರಂಪರಿಕ ವೃತ್ತಿಗಳಲ್ಲಿರುವ ಎಲ್ಲರನ್ನು ಸೇರಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಎಲ್ಲರನ್ನು ಒಳಗೊಂಡಿದೆ. ಹೊಸದಾಗಿ ಜೀತ ಕಾರ್ಮಿಕರ ವಿಮಾ ಯೋಜನೆ ಇದೆ. ಬಹುರಾಷ್ಟ್ರೀಯ ಕಂಪನಿಗಳ ವ್ಯವಸ್ಥೆಯಲ್ಲಿ ಮನೆಗಳಿಗೆ ವಸ್ತುಗಳ ತಲುಪುವ ವ್ಯವಸ್ಥೆಯಲ್ಲಿ(ಆನ್ ಲೈನ್ ಮಾರ್ಕೆಟಿಂಗ್)ಅಮೆಜಾನ್, ಬಿಗ್ ಬ್ಯಾಸ್ಕೆಟ್, ಬ್ಲಿಂಕ್ ಇಟ್, ಫ್ಲಿಪ್ ಕಾರ್ಟ್ ಮತ್ತಿತರ ಸಂಸ್ಥೆ ಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ಸರ್ಕಾರ ಸೌಲಭ್ಯಗಳನ್ನು ರೂಪಿಸಿದೆ ಎಂದರು.
ಇದನ್ನೂ ಓದಿ:Chikkaballapur News: ಕರ್ನಾಟಕ ರಿಪಬ್ಲಿಕನ್ ಸಂಘಟನೆಯ ನೂತನ ಪದಾಧಿಕಾರಿಗಳ ಆಯ್ಕೆ
ಸರ್ಕಾರ ಕಾನೂನಿನಲ್ಲಿ ತಿದ್ದುಪಡಿ ತಂದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೂ ವಿಮೆ, ಮರಣ ಹೊಂದಿದರೆ ಇಡಗಂಟು ಹಣ, ಪರಿಹಾರ ನೀಡು ವುದು ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿಶೇಷವಾಗಿ, ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಲೆಯಿಂದ ಹಿಡಿದು, ಕಾಲೇಜು, ಪ್ರತಿಷ್ಠಿತ ಸಂಸ್ಥೆಗಳು, ವಿದೇಶದಲ್ಲಿ ವ್ಯಾಸಂಗ ಮಾಡುವವರಿಗೂ ಸರ್ಕಾರ ಹಣಕಾಸಿನ ನೆರವು ನೀಡುತ್ತದೆ.
ವೈದ್ಯಕೀಯ ಸೌಲಭ್ಯವಿದೆ
ಆಧುನಿಕ ಯುಗದಲ್ಲಿ ಸಾಕಷ್ಟು ಎತ್ತರದ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಅಷ್ಟು ಎತ್ತರ ದಲ್ಲಿ ಕೆಲಸ ಮಾಡುವುದು ಬಹಳ ಕಷ್ಟದ ಕೆಲಸ. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಸ್ವಲ್ಪ ಎಡವಟ್ಟಾದರೂ ಪ್ರಾಣ ಕಳೆದುಕೊಳ್ಳುವ ಸಂಭವವಿರುತ್ತದೆ. ಸಮಾಜದಲ್ಲಿ ಕೆಲವರಿಗೆ ಕೆಟ್ಟ ಮನಸ್ಥಿತಿ ಇರುತ್ತದೆ. ಮಾನವೀಯ ನೆಲೆಗಟ್ಟಿನಲ್ಲಿ ಪರಿಸ್ಥಿತಿ ಯನ್ನು ಅವಲೋಕಿಸುವುದಿಲ್ಲ ಎಂದು ಅಸಮದಾನ ವ್ಯಕ್ತಪಡಿಸಿದರು.
ಕಾನೂನಿಗಿಂತ ಮಾನವೀಯ ನೆಲೆಗಟ್ಟು ಬಹಳ ಮುಖ್ಯ. ಯಾವ ವರ್ಗದ ಕಾರ್ಮಿಕ ರಾಗಲಿ ತುರ್ತು ಸಂದರ್ಭಗಳಲ್ಲಿ ತಕ್ಷಣ ಚಿಕಿತ್ಸೆ ಮತ್ತು ಉನ್ನತ ಚಿಕಿತ್ಸೆ ಒದಗಿಸಬೇಕು. ನಂತರ ನಿಯಮಗಳ ಕಡೆ ಗಮನಹರಿಸಬೇಕು. ಮೊದಲ ಆದ್ಯತೆ ಪ್ರಾಣ ಉಳಿಸುವ ಕಡೆ ಗಮನಹರಿಸಬೇಕು.ಕೆಲಸದ ಸಂದರ್ಭದಲ್ಲಿ ಏನಾದರೂ ಅಪಘಾತಗಳಾದರೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಮಾನವ ಹಕ್ಕುಗಳ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಬೈರೇಗೌಡ ಮಾತನಾಡಿ, ಕಾರ್ಮಿಕರು ದೇಶದ ಬೆನ್ನೆಲುಬು, ಕಾರ್ಮಿಕರ ದಿನಾಚರಣೆ ಕೇವಲ ಹೆಸರಿಗೆ ಮಾತ್ರ ದಿನಾಚರಣೆ ಆಗಬಾರದು. ಅರ್ಥಪೂರ್ಣ ಚರ್ಚೆ, ಕಾರ್ಮಿಕರಿಗೆ ದೊರೆಯುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಬೇಕು.ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಕಾರ್ಮಿಕರಿಗಾಗಿ ರೂಪಿಸಲಾಗಿದೆ. ಕಾರ್ಮಿಕ ಸಂಘಟನೆಗಳ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 116 ಜನ ಕಾರ್ಮಿಕರಿಗೆ ಸುರಕ್ಷತಾ ಕಿಟ್ ವಿತರಿಸಲಾಯಿತು. ಕಾರ್ಮಿ ಕರ ಮಕ್ಕಳಿಗೆ ಪ್ರತಿಭಾ ಪುಸ್ಕಾರ ಹಾಗೂ ಹಿರಿಯ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.
ಸ್ವಾಭಿಮಾನಿ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ದೇವರಾಜ್, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬನಾ ಅಜ್ಮಿ,ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಸ್.ಆನಂದ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ, ತಾಲ್ಲೂಕು ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ, ವಕೀಲ ಸಂತೋಷ್, ಮುಖಂಡರಾದ ವೆಂಕಟರಾಜು, ಕೃಷ್ಣಮೂರ್ತಿ, ಜ್ಯೋತಿ, ಸವಿತ, ಪ್ರಕಾಶ್, ನಟರಾಜ್ ಹಾಗೂ ಕಾರ್ಮಿಕರು ಭಾಗವಹಿಸಿ ದ್ದರು.