ಗೌರಿಬಿದನೂರು: ನಗರಕ್ಕೆ ಸಮೀಪವಿರುವ ಗೊಟಕಣಾಪುರ ಗ್ರಾಮದಲ್ಲಿ ಉತ್ತಮ, ಮಳೆ, ಬೆಳೆ ಆಗಿ, ಗ್ರಾಮಸ್ಥರನ್ನು ಹಾಗೂ ಜಾನುವಾರುಗಳಿಗೆ ರೋಗರುಜಿನಗಳು ಕಾಡದೆ ಇರದಂತೆ ಕಾಪಾಡು ವಂತೆ ಕೋರಿ ಸೋಮವಾರ ಆಂಜಿನೇಯ ಸ್ವಾಮಿಗೆ, ಮಂಗಳವಾರ ಮುಂಜಾನೆ ಗ್ರಾಮ ದೇವತೆ ಮಾರೆಮ್ಮ ಹಾಗು ಅದೇ ದಿನ ಸಂಜೆ ಗ್ರಾಮದ ಸಮೀಪವಿರುವ ಧರ್ಮಮ್ಮ ದೇವತೆಗೆ ಗ್ರಾಮದ ಮಹಿಳೆಯರು ದೀಪಗಳನ್ನು ಹೊತ್ತು ಆರತಿ ಬೆಳಗಿದರು.
ವಿಜೃಂಭಣೆಯಿಂದ ನಡೆದ ಊರಹಬ್ಬವನ್ನು ಕುರಿತು ಗ್ರಾಮದ ಮುಖಂಡ ಹಾಗು ಜಿ.ಪಂ.ಮಾಜಿ ಉಪಾಧ್ಯಕ್ಷ ಜಿಕೆ ರಮೇಶ್ ಮಾತನಾಡಿ, ಊರಹಬ್ಬ ಮಾಡಿ ಸುಮಾರು ಏಳು ವರ್ಷವಾಗಿತ್ತು ಆದ್ದರಿಂದ ಗ್ರಾಮದ ಹಿರಿಯರು, ಗೌಡರು, ಶ್ಯಾನುಭೋಗರು, ಪೂಜಾರಿಗಳು, ತಳವಾರಿ ಹಾಗೂ ಆಯಗಾರರು ಮೊದಲಾದ ಗ್ರಾಮ ಮುಖಂಡರು ಸಭೆ ಸೇರಿ ಊರಹಬ್ಬ ಆಚರಿಸುವ ದಿನಾಂಕ ವನ್ನು ಒಮ್ಮತದಿಂದ ನಿಗದಿಪಡಿಸಿದರು.
ಇದನ್ನೂ ಓದಿ:Gauribidanur News: ಕಾದಲವೇಣಿಯಲ್ಲಿ ಕೈವಾರ ತಾತಯ್ಯ ನವರ ದೇವಾಲಯ ನಿರ್ಮಾಣ
ಗ್ರಾಮದ ಪ್ರತಿ ಕುಟುಂಬದಿಂದ ಸಂಗ್ರಹಿಸಿದ ವಂತಿಗೆ ಹಣದಿಂದ ಊರಹಬ್ಬವನ್ನು ಶ್ರದ್ದಾಭಕ್ತಿ ಯಿಂದ ಆಚರಿಸಲಾಯಿತು ಎಂದರು.
ಗ್ರಾಮದ ಸಮಸ್ತ ಜನ ಶಾಂತಿಯಿಂದ ಇರಲು ಹಾಗು ಉತ್ತಮ ಮಳೆ, ಬೆಳೆ ಆಗಲೆಂದು ಗ್ರಾಮ ದೇವತೆಗಳನ್ನು ಪ್ರಾರ್ಥಿಸಲಾಯಿತು ಎಂದರು. ಗ್ರಾಮದ ಸಮಸ್ತ ಜನರು ಈ ಉತ್ಸವಗಳಲ್ಲಿ ಬಾಗಿ ಆಗುವುದಲ್ಲದೇ ಪೂರ್ಣ ಸಹಕಾರ ನೀಡಿದರು ಎಂದರು.
ಈ ಊರಹಬ್ಬದಲ್ಲಿ ತಾಲೂಕಿನ ಅಹಿಂದ ನಾಯಕರಾದ ಅರ್ ಅಶೊಕ್ ಕುಮಾರ್,ಪೋತೇನಹಳ್ಳಿ ರಾಮಣ್ಣ ಮುಂತಾದವರು ಭಾಗಿಯಾಗಿದ್ದರು.