ಚಿಕ್ಕಬಳ್ಳಾಪುರ: ಯುವಜನತೆ ನಿಯಮಿತವಾಗಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ಮೂಲಕ ಅಪಾಯದಲ್ಲಿರುವ ಜೀವನಗಳನ್ನು ಉಳಿಸಲು ನೆರವಾಗಬೇಕಿದೆ ಎಂದು ಆದಿಚುಂಚನ ಗಿರಿ ಶಾಖಾ ಮಠದ ಶ್ರೀ ಮಂಗಳನಾಥಸ್ವಾಮೀಜಿ ಕರೆ ನೀಡಿದರು.
ನಗರದ ಸಿಎಸ್‌ಐ ಆಸ್ಪತ್ರೆ ರಸ್ತೆಯಲ್ಲಿ ನೂತನವಾಗಿ ತಲೆಯೆತ್ತಿರುವ ಚಿಕ್ಕಬಳ್ಳಾಪುರ ರಕ್ತನಿಧಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ದಾನಗಳಲ್ಲೆಲ್ಲಾ ರಕ್ತದಾನ ಶ್ರೇಷ್ಟವಾದ ಮಹಾದಾನವಾಗಿದೆ. ಜಿಲ್ಲೆಯಲ್ಲಿ ನಿತ್ಯವೂ ರಕ್ತದ ಅವಶ್ಯ ಕತೆ ಹೆಚ್ಚಿದ್ದು, ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ, ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಅಗತ್ಯವಿರು ವವರಿಗೆ ರಕ್ತ ಸಕಾಲದಲ್ಲಿ ದೊರೆಯುವಂತಾಗಬೇಕು. ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾಗುವ ರಕ್ತವನ್ನು ಅಗತ್ಯವಿರುವವರಿಗೆ ಒದಗಿಸುವ ಮಾನವೀಯ ಕಾರ್ಯವನ್ನು ಈ ಕೇಂದ್ರ ಮಾಡಲಿ ಎಂದು ಆಶಿಸಿದರು.
ಇದನ್ನೂ ಓದಿ: Adichunchanagiri Sri: ಗುರಿಯತ್ತ ದೃಢ ಸಂಕಲ್ಪದಿಂದ ಸಾಗಿದರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ : ಮಂಗಳನಾಥಸ್ವಾಮೀಜಿ ಅಭಿಮತ
ರಕ್ತದ ಅವಶ್ಯಕತೆ ಎದುರಾದಾಗ ಹಣಕ್ಕಿಂತ ಮೊದಲು ನೆನಪಾಗುವುದು ಮಾನವೀಯತೆ. ಅಪಘಾತ, ಶಸ್ತ್ರಚಿಕಿತ್ಸೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಸಕಾಲಕ್ಕೆ ರಕ್ತ ದೊರೆತರೆ ಒಂದು ಜೀವ ಉಳಿಯಬಹುದು. ಇಂತಹ ಜೀವಪರ ಆಶಯದೊಂದಿಗೆ ಲೋಕಾರ್ಪಣೆಗೊಂಡಿರುವ ರಾಮಕೃಷ್ಣಾರೆಡ್ಡಿ ಮತ್ತು ರೇಖಾ ದಂಪತಿಗಳು ನಿರ್ಮಿಸಿರುವ ‘ ಚಿಕ್ಕಬಳ್ಳಾಪುರ ರಕ್ತನಿಧಿ ಕೇಂದ್ರವು ಜನಪರವಾಗಿ ಕೆಲಸ ಮಾಡಲಿ.ನಾಗರೀಕರು ಕೂಡ ಈ ಸಂಸ್ಥೆಯೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಅಮೂಲ್ಯವಾದ ರಕ್ತದ ಕೊರತೆ ನೀಗಿಸಲು,ದಾನಿಗಳಿಂದ ಪಡೆದ ರಕ್ತವನ್ನು ವೈಜ್ಞಾ ನಿಕವಾಗಿ ಸಂಸ್ಕರಿಸಿ ರಕ್ತದ ಅಗತ್ಯವುಳ್ಳವರಿಗೆ ಕೈಗೆಟಕುವ ಧರದಲ್ಲಿ ವಿತರಿಸಲು ಮುಂದಾಗಬೇಕು ಎಂದರು.
ಹೈಟೆಕ್ನಾಲಜಿ ಬಳಸಿ ರಕ್ತ ಸಂಗ್ರಹ ಸೇರಿ ಈ ನಿಟ್ಟಿನಲ್ಲಿ ಅಗತ್ಯ ಸೇವೆಗಳನ್ನು ಒದಗಿಸುವ ಕೇಂದ್ರದ ಅಗತ್ಯ ಜಿಲ್ಲೆಗೆ ಅಗತ್ಯವಾಗಿತ್ತು. ಒಂದು ರಕ್ತದ ಗುಂಪಿನಲ್ಲಿಯೇ ನೂರಾರು ಉಪಗುಂಪುಗಳಿರುವುದು ಇಲ್ಲಿಗೆ ಬಂದಾಗಲೇ ನನಗೆ ಗೊತ್ತಾಯಿತು.ಸರಕಾರಿ ಖಾಸಗಿ ಎಂಬ ಬೇದವಿಲ್ಲದೆ ಅಗತ್ಯವಿರುವವರಿಗೆ ರಕ್ತವನ್ನು ಸೂಕ್ತ ಸಮಯದಲ್ಲಿ ಪೂರೈಸುವ ವ್ಯವಸ್ಥೆ ಅತ್ಯಂತ ಮಹತ್ವದ್ದು, ಈ ಕೆಲಸವನ್ನು ಈ ಸಂಸ್ಥೆ ಪರಿಣಾಮಕಾರಿಯಾಗಿ ಮಾಡುವ ವಿಶ್ವಾಸವಿದೆ ಎಂದರು.
ಲಾಭದ ದೃಷಿಯಿಂದ ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಉದ್ಯಮಗಳತ್ತ ಜನರು ಆಕರ್ಷಿತರಾಗುತ್ತಿರುವ ಸಂದರ್ಭದಲ್ಲಿ, ಲಾಭ-ನಷ್ಟದ ಲೆಕ್ಕಾಚಾರವಿಲ್ಲದೆ ಜೀವ ಉಳಿಸುವ ಉದ್ದೇಶಕ್ಕಾಗಿಯೇ ಆರಂಭವಾಗಿರುವ ಚಿಕ್ಕಬಳ್ಳಾಪುರ ರಕ್ತ ನಿಧಿ ಕೇಂದ್ರವು ಮಾದರಿಯಾಗಿದೆ. ಇಂತಹ ಮಾನವೀಯ ಕಾರ್ಯಕ್ಕೆ ಸಮಾಜದ ಸಂಪೂರ್ಣ ಬೆಂಬಲ ದೊರೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆದದ್ದು ರಾಮಕೃಷ್ಣಪ್ಪ ಅವರ 18 ವರ್ಷದ ಪುತ್ರ ದಿಗಂತ್ ತಂದೆ-ತಾಯಿ ನಿರ್ಮಿಸಿರುವ ರಕ್ತ ಕೇಂದ್ರದ ಉದ್ಘಾಟನೆಯನ್ನು ರಕ್ತದಾನ ಮಾಡುವ ಮೂಲಕವೇ ಆರಂಭಿಸಿದ ಅವರು, ‘ಜೀವ ಉಳಿಸುವ ಕಾರ್ಯಕ್ಕೆ ನನ್ನದೊಂದು ಸಣ್ಣ ಕೊಡುಗೆ’ ಎಂಬ ಸಂದೇಶ ಸಾರಿದರು. ಅವರ ರಕ್ತದಾನದ ಮೂಲಕ ಕೇಂದ್ರದ ಸೇವೆಗೆ ಅರ್ಥಪೂರ್ಣ ಚಾಲನೆ ದೊರೆಯಿತು.
ಹರೀಶ್ ರೆಡ್ಡಿ ಮಾತನಾಡಿ, ಅನ್ನದಾನ, ಗೋದಾನ ಹಾಗೂ ರಕ್ತದಾನ ಶ್ರೇಷ್ಠವಾದ ಸೇವೆಗಳು. ಪ್ರತಿಯೊಬ್ಬರೂ ಕನಿಷ್ಠ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿ ರುವ ಜೀವಗಳನ್ನು ಉಳಿಸುವ ಮಹತ್ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸಂಸ್ಥೆಯ ಸಂಸ್ಥಾಪಕ ರಾಮಕೃಷ್ಣಪ್ಪ ಮಾತನಾಡಿ, ಚಿಕ್ಕಬಳ್ಳಾಪುರ ರಕ್ತ ನಿಧಿ ಕೇಂದ್ರದಲ್ಲಿ ಒಂದು ಯೂನಿಟ್ ರಕ್ತವನ್ನು ಸರಕಾರ ನಿಗಧಿಪಡಿಸಿರುವ ಬೆಲೆಗಿಂತ ಕನಿಷ್ಟ ಅಂದರೆ 1000ಕ್ಕೆ ಒದಗಿಸುವ ಉದ್ದೇಶ ಹೊಂದಲಾಗಿದೆ. ರಕ್ತಕ್ಕಾಗಿ ಬರುವ ರೋಗಿಗಳ ಬಂಧುಗಳಿAದ ಕಡ್ಡಾಯವಾಗಿ ‘ರೀಪ್ಲೇಸ್ ಮೆಂಟ್ ಡೊನೇಶನ್’ ಕೇಳಬಾರದು ಎಂಬ ಸಂಕಲ್ಪದೊAದಿಗೆ ಕೇಂದ್ರವನ್ನು ಆರಂಭಿಸಲಾಗಿದೆ. ಒಬ್ಬ ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದ್ದು, ಪ್ರತಿ ಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ರಕ್ತದಾನ ಮಾಡುವ ಸಂಕಲ್ಪ ಮಾಡಬೇಕು ಎಂದರು.
ಈ ಕೇಂದ್ರದಲ್ಲಿ 1500 ಯೂನಿಟ್‌ಗಳವರೆಗೆ ರಕ್ತ ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಗ್ರಹ ವಾಗುವ ರಕ್ತದಲ್ಲಿ ಶೇ.25ರಷ್ಟನ್ನು ಸರ್ಕಾರಕ್ಕೆ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಗಮನ ಸೆಳೆದದ್ದು ರಾಮಕೃಷ್ಣಪ್ಪ ಅವರ 18 ವರ್ಷದ ಪುತ್ರ ದಿಗಂತ್. ತಂದೆ-ತಾಯಿ ನಿರ್ಮಿಸಿರುವ ನೂತನ ಚಿಕ್ಕಬಳ್ಳಾಪುರ ರಕ್ತ ನಿಧಿ ಕೇಂದ್ರದ ಉದ್ಘಾಟನೆ ಯನ್ನು ಸ್ವತಃ ರಕ್ತದಾನ ಮಾಡುವ ಮೂಲಕವೇ ಆರಂಭಿಸಿದ ಅವರು, ಜೀವ ಉಳಿಸುವ ಸೇವೆಗೆ ತಾವೂ ಕೈಜೋಡಿಸುವ ಸಂದೇಶ ಸಾರಿದರು. ಅವರ ರಕ್ತದಾನದ ಮೂಲಕ ಕೇಂದ್ರದ ಸೇವೆಗೆ ಅರ್ಥಪೂರ್ಣ ಚಾಲನೆ ದೊರೆಯಿತು.
ಕಾರ್ಯಕ್ರಮದಲ್ಲಿ ಲಯನ್ಸ್ ಕೆ.ಹೆಚ್. ವೆಂಕಟಪ್ಪ,ವಕೀಲ ಕೆ.ಎಂ. ಮುನೇಗೌಡ,ಅನು ಆನಂದ್, ಮೊಬೈಲ್ ಬಾಬು ಧರ್ಮ, ಸೋಮಶೇಖರ್, ಲಯನ್ ಲಕ್ಷ್ಮಣ್, ಲಯನ್ ಬ್ರಹ್ಮಚಾರಿ, ಲಯನ್ ಮುರಳಿ, ಲಯನ್ ಲಕ್ಷ್ಮಿ ನಾರಾಯಣ, ಚಂದ್ರಪ್ಪ, ಸೂರ್ಯನಾರಾಯಣ ಶೆಟ್ಟಿ, ಡಾ. ಮುನಿ ನಾರಾಯಣರೆಡ್ಡಿ, ಲಯನ್ ಸುನಿಲ್, ಚಿಕ್ಕಬಳ್ಳಾಪುರ ರಕ್ತ ಕೇಂದ್ರದ ಸಂಸ್ಥಾಪಕ ಲಯನ್ ಡಿ.ಸಿ. ರಾಮಕೃಷ್ಣಾರೆಡ್ಡಿ,ಶ್ರೀಮತಿ ರೇಖಾ ಹಾಗೂ ಪುತ್ರ ದಿಗಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.