ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಜೆಡಿಎಸ್(JDS) ಸಮರ್ಥ ನಾಯಕತ್ವದ ಕೊರತೆಯಿಂದ ಪಕ್ಷ ಸಂಘಟನೆಯ ವಿಚಾರದಲ್ಲಿ ದುರ್ಬಲಗೊಂಡಿದ್ದು, ಪಕ್ಷಕ್ಕೆ ಮತ್ತೆ ಬಲ ತುಂಬುವ ನಿಟ್ಟಿನಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಕ್ಷೇತ್ರ ಸಂಚಾರ ಮಾಡುವ ಮೂಲಕ ಸಂಘಟನಾತ್ಮಕವಾಗಿ ಗಟ್ಟಿತಳಹದಿಯ ಮೇಲೆ ಪಕ್ಷವನ್ನು ಸಂಘಟಿಸುವ ಗುರಿ ಹೊಂದಲಾಗಿದೆ ಎಂದು ಜೆಡಿಎಸ್ ಯುವ ಮುಖಂಡ ಶ್ರೀನಿವಾಸ್ ತಿಳಿಸಿದರು.
ನಗರದ ಲಕ್ಕಮ್ಮ ದೊಡ್ಡ ಮುನಿಯಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಸರಳ ಕನ್ನಡ ರಾಜ್ಯೋತ್ಸವ(Kannada Rajyotsava) ಹಾಗೂ ಜೆಡಿಎಸ್ ಯುವ ಕಾರ್ಯಕರ್ತರ ಸಭೆಯಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗಾಡರು(H D Devegowda), ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ(H D Kumaraswamy), ನಿಖಿಲ್ ಕುಮಾರಸ್ವಾಮಿ(Nikhil Kumaraswamy) ನೇತೃತ್ವದಲ್ಲಿ ಭದ್ರವಾಗಿದೆ. ಎಂದಿಗೂ ಕೂಡ ಯಾರೋ ಒಬ್ಬಿಬ್ಬರು ನಾಯಕರನ್ನು ಅವಲಂಬಿಸಿರುವ ಪಕ್ಷವಲ್ಲ, ಬದಲಾಗಿ ಸಾಮಾನ್ಯ ಕಾರ್ಯಕರ್ತರ ಶ್ರಮ ಮತ್ತು ನಿಷ್ಠೆಯ ಮೇಲೆ ಬೆಳೆದು ನಿಂತಿರುವ ಪಕ್ಷವಾಗಿದೆ. ರಾಷ್ಟ್ರೀಯ ಪಕ್ಷಗಳು ಎಷ್ಟೇ ಪ್ರಭಾವ ಬೀರಿದರೂ, ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅನ್ನು ದುರ್ಬಲಗೊಳಿಸಲು ಪ್ರಯತ್ನಿಸಿ ದರೂ ಪೂರ್ಣವಾಗಿ ಮಣಿಸಲು ಸಾಧ್ಯವಿಲ್ಲ. ಏಕೆಂದರೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಜೆಡಿಎಸ್ ಪಕ್ಷದ ಬಗ್ಗೆ ಅಭಿಮಾನ ಹೊಂದಿರುವ ಪ್ರಾಮಾಣಿಕ ಕಾರ್ಯಕರ್ತರ ದೊಡ್ಡ ಪಡೆ ಇದೆ ಎಂದು ಹೇಳಿದರು.
ಆದರೆ ಜಿಲ್ಲೆಯಲ್ಲಿ ಕೆಲವರ ರಾಜೀ ಮನೋಭಾವದ ಕಾರಣವಾಗಿ ಪಕ್ಷ ಸಂಘಟನೆಗೆ ತೊಡಕಾಗಿರು ವುದು ಕಾರ್ಯಕರ್ತರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜಿಲ್ಲಾ ಕೇಂದ್ರದಲ್ಲಿರುವ ಕೆಲ ನಾಯಕರು ಪಕ್ಷಕ್ಕಾಗಿ ದುಡಿಯುವ ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸುವ ಹಾಗೂ ಅವರಿಗೆ ಸೂಕ್ತ ಅವಕಾಶ ಕಲ್ಪಿಸುವ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಪಕ್ಷದ ಸಂಘಟನೆ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ. ಜೆಡಿಎಸ್ ಎನ್ಡಿಎ ಮೈತ್ರಿಕೂಟ(JDS_NDA alliance)ದಲ್ಲಿದೆಯೆ ವಿನಃ ಬಿಜೆಪಿ ಯೊಂದಿಗೆ ವಿಲೀನವಾಗಿಲ್ಲ, ಕೆಲವರು ಹಾಗೆ ನಡೆಸುಕೊಳ್ಳುವುದು ಬೇಡ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿಯೂ ಜಿಲ್ಲಾಧ್ಯಕ್ಷರು ಹಾಗೂ ಅವರ ಸುತ್ತಮುತ್ತಲಿನ ಕೆಲವರಿ ಗಷ್ಟೇ ಆದ್ಯತೆ ಸಿಗುತ್ತಿದೆ. ಇತರ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಕ್ತ ಮಾನ್ಯತೆ ದೊರೆಯುತ್ತಿಲ್ಲ. ಇಂತಹ ಬೆಳವಣಿಗೆಗಳಿಂದಾಗಿ ರಾಜಕೀಯ ವಲಯದಲ್ಲಿ ಜೆಡಿಎಸ್ ಪಕ್ಷದ ಅಸ್ತಿತ್ವದ ಬಗ್ಗೆಯೇ ಪ್ರಶ್ನೆಗಳು ಕೇಳಿ ಬರುತ್ತಿವೆ. ಬಿಜೆಪಿ ಮುಖಂಡರು ಕೂಡ ಜೆಡಿಎಸ್ ಎಲ್ಲಿದೆ ಎಂದು ವ್ಯಂಗ್ಯವಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ರಾಜ್ಯೋತ್ಸವದ ದಿನದಂದೇ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಗೆ ಸ್ವತಂತ್ರವಾಗಿ ಚಾಲನೆ ನೀಡುವ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ಗೆ ಹೊಸ ಚೈತನ್ಯ ತುಂಬುವ ಉದ್ದೇಶ ಹೊಂದಲಾಗಿದೆ. ಪಕ್ಷದ ಸಿದ್ಧಾಂತ, ಸಂಘಟನೆಯ ಶಕ್ತಿ ಮತ್ತು ಕಾರ್ಯಕರ್ತರ ಸ್ವಾಭಿಮಾನಕ್ಕೆ ಆದ್ಯತೆ ನೀಡಿ ಮುಂದಿನ ದಿನಗಳಲ್ಲಿ ಗ್ರಾಮಮಟ್ಟದಿಂದಲೇ ಸಂಘಟನೆಯನ್ನು ಬಲಪಡಿಸ ಲಾಗುವುದು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಶಿವಪ್ರಸಾದ್ ಮಾತನಾಡಿ ಎಂಪಿ ಚುನಾವಣೆ(MP Election) ಆದ ನಂತರ ಪಕ್ಷದ ನಾಯಕರು ಜಿಲ್ಲೆಯಲ್ಲಿ ಪಕ್ಷದ ಸ್ಥಿತಿ ಕಾರ್ಯಕರ್ತರ ಸಂಕಟಗಳೇನು ಎಂದು ಅರಿಯುವ ಕೆಲಸ ಮಾಡಬೇಕು. ಜೆಡಿಎಸ್ ನಿಂದ ಯಾವುದಾದರೂ ಕಾರ್ಯಕ್ರಮ ಮಾಡಿದ್ದಿರಾ ಎಂದು ಪ್ರಶ್ನಿಸಿದ ಅವರು ಪಂಚಾಯತಿ ಹಂತದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದರು.
ಈ ವೇಳೆ ವೆಂಕಟೇಶ್, ಅಂದರ್ಲಹಳ್ಳಿ ಶ್ರೀನಿವಾಸ್, ಮೋಹನ್ರಾಜ್, ಶಿವಪ್ರಸಾದ್, ಅಡ್ಡಗಲ್ ಅನಿಲ್, ಶ್ರೀಧರ್, ಶ್ರೀಕಾಂತ್, ಅರುಣ್, ವೆಂಕಟರೆಡ್ಡಿ, ಗಂಗರಾಜು, ಗುಂಡ್ಲಗುರ್ಕಿ ನವೀನ್ ಮತ್ತಿತರರು ಇದ್ದರು.