Chikkaballapur News: 70ರ ದಶಕದ ದಸಂಸ ಎಲ್ಲಾ ಹೋರಾಟಗಳ ಮಹಾಮನೆ, ಇತಿಹಾಸ ಮರುಕಳಿಸಬೇಕಿದೆ : ಬಿ.ವಿ. ಆನಂದ್ ಅಭಿಮತ
ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಭವಿಷ್ಯ ನಿರ್ಮಾಣದಲ್ಲಿ ದಸಂಸ ಪಾತ್ರ ದೊಡ್ಡದಿದೆ. 70ರ ದಶಕದಿಂದ ಈತನಕ ಲಕ್ಷಾಂತರ ಮಂದಿ ಕಾರ್ಯಕರ್ತರ ಮುಖಂದರ ತ್ಯಾಗ ಬಲಿದಾನವಿದೆ. ಸಮ ಸಮಾಜದ ಆಶಯವಿದೆ ನಿಷ್ಕಲ್ಮಶ ಹೋರಾಟವಿದೆ. 50 ವರ್ಷಗಳ ಈ ಸುದೀರ್ಘ ಇತಿಹಾಸದಲ್ಲಿ ಒಟ್ಟಾಗಿದ್ದ ದಸಂಸ ಬಣಗಳಾಗಿ ವಿಭಜನೆಯಾಗಿದೆ.
-
ಚಿಕ್ಕಬಳ್ಳಾಪುರ: 70ರ ದಶಕದ ಎಲ್ಲಾ ಹೋರಾಟಗಳಿಗೂ ದಸಂಸ ಮಹಾಮನೆಯಂತಿತ್ತು. ಗತಿಸಿದ ಇತಿಹಾಸ ಮರುಕಳಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯಾ ಸಂಚಾಲಕ ಗುರುಪ್ರಸಾದ್ ಕೆರಗೋಡು, ಮಾರಪ್ಪ ಹಳ್ಳಿ ನೇತೃತ್ವದಲ್ಲಿ ಸಂಘಟನೆಯನ್ನು ಸಶಕ್ತಗೊಳಿಸಲಾಗುತ್ತಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಬಿ.ವಿ.ಆನಂದ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಭವಿಷ್ಯ ನಿರ್ಮಾಣದಲ್ಲಿ ದಸಂಸ ಪಾತ್ರ ದೊಡ್ಡದಿದೆ. 70ರ ದಶಕದಿಂದ ಈತನಕ ಲಕ್ಷಾಂತರ ಮಂದಿ ಕಾರ್ಯಕರ್ತರ ಮುಖಂದರ ತ್ಯಾಗ ಬಲಿದಾನವಿದೆ. ಸಮಸಮಾಜದ ಆಶಯವಿದೆ ನಿಷ್ಕಲ್ಮಶ ಹೋರಾಟವಿದೆ. 50 ವರ್ಷಗಳ ಈ ಸುದೀರ್ಘ ಇತಿಹಾಸ ದಲ್ಲಿ ಒಟ್ಟಾಗಿದ್ದ ದಸಂಸ ಬಣಗಳಾಗಿ ವಿಭಜನೆಯಾಗಿದೆ. ಆದರೂ ಎಲ್ಲಾ ಬಣಗಳ ಧ್ಯೇಯ ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡುವುದೇ ಆಗಿದೆ. ಈ ನಿಟ್ಟಿನಲ್ಲಿ ದಿವಂಗತ ಎಸ್. ಶಿವಣ್ಣ, ಜಿಲ್ಲೆಯ ಹಿರಿಯ ಮುಖಂಡರಾದ ಗಡ್ಡಂ ವೆಂಕಟೇಶಣ್ಣ, ಮುನಿಶಾಮಣ್ಣ, ಗೊಲ್ಲಹಳ್ಳಿ ಶಿವಪ್ರಸಾದ್ ಅವರ ಹೆಸರು ಸ್ಮರಣೀಯವಾಗಿದೆ. ಇವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯು ವುದು ನಮಗೆ ಹೆಮ್ಮೆಯೆನಿಸಿದೆ ಎಂದರು.
ಇದನ್ನೂ ಓದಿ: Chikkaballapur News: ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ 30 ತಿಂಗಳ ಕಾಲ ಅಭಿವೃದ್ಧಿಯ ಪರ್ವದತ್ತ ಸಾಗಿದ್ದೇನೆ: ಮಂಜುನಾಥ್
2021ರಲ್ಲಿ ದಸಂಸ ಸಂವಿಧಾನದಂತೆ ತಾಲೂಕು ಪದಾಧಿಕಾರಿಗಳ ನೂತನ ಸಮಿತಿ ಆಯ್ಕೆಯಾಗು ತ್ತದೆ. ಇದು ಜಿಲ್ಲೆಯ ಮುಖಂಡರಿಗೆ ಇಷ್ಟವಾಗಲಿಲ್ಲ ಎಂದು 3 ತಿಂಗಳ ಅವಧಿಯಲ್ಲಿ ಮತ್ತೆ ಬದಲಾವಣೆ ಮಾಡಿ ಹೊಸ ಸಮಿತಿ ಮಾಡುತ್ತಾರೆ. ಆಗ ನಾವು ಮರುಮಾತನಾಡದೆ ಸುಮ್ಮನಿದ್ದೆವು. ಇದಾಗಿ ಕಳೆದ 5 ವರ್ಷದಲ್ಲಿ ಸುಧಾರಣೆ ಬದಲಿಗೆ ಗುಂಪುಗಾರಿಕೆ ಆಂತರಿಕ ಕಲಹ ಹೆಚ್ಚಾಯಿತು. ಪರಿಣಾಮ ಸಂವಿಧಾನದ ಆಶಯವನ್ನು ಮರೆತು ಸಂಘಟನೆ ನಿಷ್ಟ್ರಿಯವಾದಾಗ ಗಡ್ಡಂ ವೆಂಕಟೇಶಣ್ಣ, ಮುನಿಸ್ವಾಮಣ್ಣ ಅವರಿಗೆ ಸರಿಪಡಿಸುವಂತೆ ಮನವಿ ಮಾಡಿದರೂ ಏನೂ ಪ್ರಯೋಜನ ಆಗಲಿಲ್ಲ. ಅಂತಿಮವಾಗಿ 2024ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಜಿಲ್ಲೆಯ ವಿದ್ಯಾಮಾನಗಳನ್ನು ರಾಜ್ಯ ನಾಯಕರಿಗೆ ತಿಳಿಸಲಾಗಿತ್ತು ಎಂದರು.
ಆಗ ಇದೇ ಗಡ್ಡಂ ವೆಂಕಟೇಶಣ್ಣ, ಮುನಿಸ್ವಾಮಣ್ಣ ಜಿಲ್ಲೆಯ ಸಮಸ್ಯೆ ಸರಿಪಡಿಸುವುದಾಗಿ ಹೇಳಿ ಬಂದವರು ಕೆಲವೇ ಕೆಲವು ವ್ಯಕ್ತಿಗಳ ಮಾತು ಕೇಳಿ ಏನೂ ಮಾಡಲಿಲ್ಲ. ಆಂತರಿಕ ಕಲಹ ಹೆಚ್ಚಾಗುತ್ತಲೇ ಇರುವಾಗ ಗಡ್ಡಂ ವೆಂಕಟೇಶಣ್ಣ ಬಾಗೇಪಲ್ಲಿ ತಾಲೂಕು ಸಮಿತಿಯನ್ನು ವಿಸರ್ಜಸದೆ, ಪದಾಧಿಕಾರಿಗಳ ಗಮನಕ್ಕೂ ತರದೆ ಹೊಸ ಸಮಿತಿ ರಚಿಸುತ್ತಾರೆ.ಆಗಲೂ ನಾವು ದೂರು ನೀಡುತ್ತೇವೆ.ಆಗ ರಾಜ್ಯ ಸಮಿತಿ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ ಅವರಿಗೆ ವಾಟ್ಸಪ್ ಮೆಸೇಜ್ ಮಾಡಿ ಸಮಸ್ಯೆ ಸರಿಪಡಿಸಲು ಹೇಳುತ್ತಾರೆ.ಆಗಲೂ ಇವರು ಗಮನ ಹರಿಸಲಿಲ್ಲ. ಕೊನೆಗೆ ರಾಜ್ಯ ಸಮಿತಿ ನನ್ನನ್ನು ಜಿಲ್ಲೆಯಲ್ಲಿ ಸಂಘಟನೆ ಸಂಚಾಲಕನನ್ನಾಗಿ ನೇಮಿಸಿ ನಿರ್ದೇಶನ ನೀಡಿದ ಪರಿಣಾಮ ನಾನು ಸಮಿತಿಗಳನ್ನು ರಚಿಸಿದ್ದೇನೆ. ನಮ್ಮದೇ ಒರಿಜಿನಲ್ ಸಮಿತಿಯಾಗಿದೆ ಎಂದರು.
ಇವರಿಗೆ ನಾವು ಮಾಡುತ್ತಿರುವುದು ತಪ್ಪು ಅನ್ನಿಸಿದ್ದರೆ ಮೊದಲ ತಾಲೂಕು ಸಮಿತಿ ಮಾಡಿದಾಗಲೇ ಪ್ರತಿರೋಧ ತೋರಬಹುದಿತ್ತು.ಚಿಕ್ಕಬಳ್ಳಾಪುರ ಸಮಿತಿ ಮಾಡಿದ ತಕ್ಷಣ ಯಾಕೆ ನಮ್ಮ ವಿರುದ್ದ ಸುದ್ದಿಗೋಷ್ಟಿ ಮಾಡಿ ಟೀಕಾಪ್ರಹಾರ ಮಾಡುತ್ತಾರೆ? ಯಾರನ್ನೋ ಮೆಚ್ಚಿಸಲು ಹೀಗೆ ಮಾಡುತ್ತಿದ್ದಾರೆ. ನಾವು ದಸಂಸ ಸಂವಿಧಾನಕ್ಕೆ ಬದ್ಧವಾಗಿ ಸಮಿತಿಗಳನ್ನು ರಚಿಸಿದ್ದು ನಮ್ಮದೇ ನಿಜವಾದ ಸಮಿತಿಯಾಗಲಿದೆ ಎಂದರು.
ಮಾ.4ರಂದು ಜಿಲ್ಲೆಯಲ್ಲಿ ರಾಜ್ಯ ನಾಯಕರನ್ನು ಕರೆಸಿ ಸಂಘಟನಾ ಸಮಾವೇಶ ನಡೆಸಲಾಗುವುದು. ನಮ್ಮ ಹೆಸರನ್ನು ಯಾವುದೇ ಆಹ್ವಾನ ಪತ್ರಿಕೆಯಲ್ಲಿ ಹಾಕಬೇಡ ಎಂದು ಹಿರಿಯರಾದ ಗಡ್ಡಂ ವೆಂಕಟೇಶ್, ಮುನಿಸ್ವಾಮಣ್ಣ ಹೇಳಿದ್ದರಿಂದ ಚೇಳೂರು ತಾಲೂಕು ಸಮಿತಿ ರಚಿಸುವಾಗ ಹೆಸರನ್ನು ಮುದ್ರಿಸಿಲ್ಲ.ಆದರೆ ಅವರ ಮೇಲಿನ ಪ್ರೀತಿ ಮತ್ತು ಸಂಬಂಧ ಕಡಿಮೆಯಾಗಿಲ್ಲ ಎಂದರು.
ಈ ವೇಳೆ ಜಿಲ್ಲಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾದ ಅಂದರ‍್ಲಹಳ್ಳಿ ವೆಂಕಟೇಶ್, ಪೂಜನಹಳ್ಳಿ ಕೃಷ್ಣಪ್ಪ, ನಡಿಪಣ್ಣ, ಡಿ.ಸಿ.ವೀಣ, ಎಲ್.ಎನ್.ನರಸಿಂಹಯ್ಯ, ಜಯಕುಮಾರ್, ಎಂ.ವಿ.ನರಸಿಂಹಪ್ಪ, ಭಗವನ್ ಮೂರ್ತಿ, ನಾರಾಯಣಸ್ವಾಮಿ, ಶಿವಪ್ಪ, ಆದಿನಾರಾಯಣ, ವೆಂಕಟೇಶ್, ಕೃಷ್ಣಪ್ಪ, ಡಿ.ಸಿ.ನರಸಿಂಹಮೂರ್ತಿ, ಡಿ.ಆರ್.ಬಸಪ್ಪ, ನರಸಿಂಹಪ್ಪ ಮತ್ತಿತರರು ಇದ್ದರು.