ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chitradurga Accident: ಭೀಕರ ಅಪಘಾತ; KSRTC ಬಸ್‌ ಡಿಕ್ಕಿಯಾಗಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಬಲಿ

ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕೆಎಸ್ ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಕೇರಳ ಮೂಲದವರು ಎಂದು ಗುರುತಿಸಲಾಗಿದೆ. . ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ KSRTC ಬಸ್‌ ಡಿಕ್ಕಿ- ನರ್ಸಿಂಗ್‌ ವಿದ್ಯಾರ್ಥಿಗಳ ದುರ್ಮರಣ

Profile Rakshita Karkera Mar 23, 2025 7:54 AM

ಚಿತ್ರದುರ್ಗ : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ನರ್ಸಿಂಗ್‌ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಚಿತ್ರದುರ್ಗದಲ್ಲಿ ದುರ್ಘಟನೆ ಸಂಭವಿಸಿದ್ದು(Chitradurga Accident), ಕೆಎಸ್ ಆರ್ ಟಿಸಿ ಬಸ್ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತರು ಕೇರಳ ಮೂಲದವರು. ಮೃತ ವಿದ್ಯಾರ್ಥಿಗಳನ್ನು ಯಾಸೀನ್ ಹಾಗೂ ಅಲ್ತಾಫ್ ಎಂದು ಗುರುತಿಸಲಾಗಿದೆ. ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನೂ ಓದಿ: Accident News: ಬೆಂಗಳೂರಿನಲ್ಲಿ ವಿದ್ಯುತ್ ಕಂಬ ಮುರಿದುಬಿದ್ದು ಇಬ್ಬರು ಮಹಿಳೆಯರು ಸಾವು

ಕೆಲವು ದಿನಗಳ ಹಿಂದೆಯಷ್ಟೇ ಅಕ್ರಮವಾಗಿ ಮರಳು (sand mafia) ಸಾಗಿಸುತ್ತಿದ್ದ ಟಿಪ್ಪರ್​ ಹರಿದು (Road Accident News) ಬೈಕ್​ ಸವಾರರಿಬ್ಬರು (bike riders) ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppala News) ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಬಳಿ ನಡೆದಿತ್ತು. ರಮೇಶ ಜವಳಗೇರಿ (27), ಸಿದ್ದಪ್ಪ ಪ್ಯಾಟ್ಯಾಳ್ (34) ಮೃತ ಯುವಕರು. ಸಾವನ್ನಪ್ಪಿರುವ ಇಬ್ಬರು ಯುವಕರು ಕನಕಗಿರಿ‌ ತಾಲೂಕಿನ ಗುಡೂರಿನ ನಿವಾಸಿಗಳಾಗಿದ್ದು, ಇಂದು ಬೈಕ್ ಮೇಲೆ ಹೋಗುತ್ತಿದ್ದ ವೇಳೆ ಮರಳು ತುಂಬಿದ ಟಿಪ್ಪರ್ ಹರಿದಿತ್ತು. ಪರಿಣಾಮ ಟಿಪ್ಪರ್ ಕೆಳಗೆ ಸಿಲುಕಿ ಯುವಕರ ದೇಹ ಛಿದ್ರವಾಗಿತ್ತು.

ನವಲಿ ಕಡೆಯಿಂದ ಗುಡೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರ ಪೈಕಿ ಒಬ್ಬನ ಮೃತದೇಹ ಛಿದ್ರ ಛಿದ್ರವಾಗಿದೆ. ರಸ್ತೆ ತುಂಬ ದೇಹದ ಮಾಂಸ ಚೆಲ್ಲಾಪಿಲ್ಲಿಯಾಗಿದೆ. ಮತ್ತೋರ್ವ ಯುವಕನ ತಲೆ ಛದ್ರಗೊಂಡಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹಗಲು ರಾತ್ರಿ ಎನ್ನದೇ ಇಲ್ಲಿ ಮರಳು ತುಂಬಿದ ಟಿಪ್ಪರ್ ಗಳು ಓಡಾಡುತ್ತಿದ್ದು, ಅಕ್ರಮ ಮರಳು ದಂಧೆಗೆ ಯುವಕರು ಬಲಿಯಾಗಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಈ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.