ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Assault Case: ಪೋಷಕರಿಗೆ ಕರೆ ಮಾಡಿದ್ದಕ್ಕೆ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ ಮಾಡಿದ ಅಧ್ಯಾಪಕ

Chitrdadurga: ಆ ವಿದ್ಯಾರ್ಥಿಗೆ ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದು, ಆ ಶಿಕ್ಷಕನ ಕ್ರೌರ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆಕ್ರೋಶದಿಂದ ಪುಟ್ಟ ವಿದ್ಯಾರ್ಥಿ ಮೇಲೆ ಈ ರೀತಿ ಅಮಾನುಷವಾಗಿ ಶಿಕ್ಷಕ ಕ್ರೌರ್ಯ ಮೆರೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಿಕ್ಷಕ ವೀರೇಶ್ ನಾಪತ್ತೆಯಾಗಿದ್ದಾನೆ.

ಚಿತ್ರದುರ್ಗ: ಸಂಸ್ಕೃತ ಪಾಠಶಾಲೆಯ ಅಧ್ಯಾಪಕನೊಬ್ಬ ಅಸಂಸ್ಕೃತ ಕೆಲಸ ಮಾಡಿ ಪರಾರಿಯಾಗಿದ್ದಾನೆ. ವಿದ್ಯಾರ್ಥಿಯೊಬ್ಬ ದೂರದ ಊರಿನಲ್ಲಿರುವ ಅವರ ಪೋಷಕರಿಗೆ ಬೇರೊಬ್ಬರ ಮೊಬೈಲ್‌ನಿಂದ ಕರೆ ಮಾಡಿದ್ದಕ್ಕೆ ಆಕ್ರೋಶಗೊಂಡ ಮುಖ್ಯ ಶಿಕ್ಷಕ (Head Master) ಮನಸೋಇಚ್ಛೆ ವಿದ್ಯಾರ್ಥಿ ಮೇಲೆ ಹಲ್ಲೆ (Assault Case) ನಡೆಸಿ ಕ್ರೌರ್ಯ ಮೆರೆದಿರುವ ಪ್ರಕರಣ ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ (Challakere) ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮದಲ್ಲಿರುವ ಗುರು ತಿಪ್ಪೇರುದ್ರಸ್ವಾಮಿ ದೇಗುಲಕ್ಕೆ ಸೇರಿದ ವೇದಾಧ್ಯಯನ ಶಾಲೆಯಲ್ಲಿ ವಿವಿದೆಡೆಯ ಹಲವು ವಿದ್ಯಾರ್ಥಿಗಳು ವೇದಾಧ್ಯಯನ ಮಾಡುತ್ತಿದ್ದಾರೆ. ಅವರಲ್ಲಿ ಉತ್ತರ ಕರ್ನಾಟಕ ಮೂಲದ ಓರ್ವ ವಿದ್ಯಾರ್ಥಿ ಮೇಲೆ ವೀರೇಶ್ ಹಿರೇಮಠ್ ಎಂಬ ಮುಖ್ಯ ಶಿಕ್ಷಕ ಮನಸೋಇಚ್ಛೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದಿದ್ದಾನೆ.

ಆ ವಿದ್ಯಾರ್ಥಿಗೆ ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದು, ಆ ಶಿಕ್ಷಕನ ಕ್ರೌರ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಆಕ್ರೋಶದಿಂದ ಪುಟ್ಟ ವಿದ್ಯಾರ್ಥಿ ಮೇಲೆ ಈ ರೀತಿ ಅಮಾನುಷವಾಗಿ ಶಿಕ್ಷಕ ಕ್ರೌರ್ಯ ಮೆರೆದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದರ ಬೆನ್ನಲ್ಲೇ ಶಿಕ್ಷಕ ವೀರೇಶ್ ನಾಪತ್ತೆಯಾಗಿದ್ದಾನೆ. ಈ ರೀತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆದ ಹಿನ್ನೆಲೆ ಸಾರ್ವಜನಿಕ ವಲಯದಿಂದ ಬಾರಿ ಆಕ್ರೋಶ ವ್ಯಕ್ತವಾಗಿದೆ. ಪ್ರಕರಣ ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಅಧ್ಯಾಪಕನಿಗಾಗಿ ಶೋಧಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ಪತ್ನಿಯ ಲವ್ವರ್‌ ಎಂದು ತಪ್ಪಾಗಿ ಭಾವಿಸಿ ಯುವಕನ ಮೇಲೆ ಬರ್ಬರ ಹಲ್ಲೆ- ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

ಹರೀಶ್‌ ಕೇರ

View all posts by this author