ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chitradurga News: ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ, ಪ್ರಜಾಪ್ರಭುತ್ವದ ಅರಿವು ಅಗತ್ಯ

ರಾಜ್ಯ ಸರಕಾರವು 'ನಮ್ಮ ಮತ ನಮ್ಮ ಹಕ್ಕು' ಘೋಷಣೆಯಡಿ ಪ್ರಜಾಪ್ರಭುತ್ವವನ್ನು ಆಚರಿಸುವ ಮೂಲಕ ನಾವೆಲ್ಲರೂ ಒಟ್ಟಿಗೆ ಇರೋಣ. ಪ್ರಜಾಪ್ರಭುತ್ವವು ಯುವಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ, ನಾಗರಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಜೊತೆಗೆ ನಮ್ಮ ಭೂಮಿ, ಪರಿಸರವೂ ಪ್ರಭುತ್ವದ ಭಾಗವಾಗಿದೆ

ಚಿತ್ರದುರ್ಗ: ಸಂವಿಧಾನದ 51 (ಎ) ಪರಿಚ್ಛೇದದಲ್ಲಿ “ಭಾರತದ ಪ್ರಜೆಯಾಗಿ ನಾನು ಅರಣ್ಯ, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುತ್ತೇನೆ ಮತ್ತು ಉತ್ತಮ ಪಡಿಸುತ್ತೇನೆ. ಭಾರತದ ಸಂವಿಧಾನದ ನಾನು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿ ರುತ್ತೇನೆ’’ ಎಂದಿದೆ. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಪ್ರಕೃತಿ ಪರಿಸರ ರಕ್ಷಿಸಬೇಕು ಎಂದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಸಮಿತಿ ಅಧ್ಯಕ್ಷ ಮಾಲತೇಶ್ ಅರಸ್ ಹೇಳಿದರು.

ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪರಿಸರದ ಮಡಿಲಾದ ಜೋಗಿಮಟ್ಟಿ ಗಿರಿಧಾಮದಲ್ಲಿ ವಿದ್ಯಾರ್ಥಿಗಳಲ್ಲಿ "ಪರಿಸರ ಜಾಗೃತಿ, ಪ್ರಜಾಪ್ರಭುತ್ವದ ಅರಿವು" ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಕೃತಿ ಆರಾಧನೆಯು ಶ್ರೇಷ್ಠವಾದುದು. ಸಂವಿಧಾನದಲ್ಲಿ ಪರಿಸರ, ಜೀವವೈವಿಧ್ಯ, ವನ್ಯಜೀವಿ, ಅರಣ್ಯ, ಸರೋವರ, ನದಿ ಪ್ರಕೃತಿ, ಮಣ್ಣು, ಭೂಮಿ ಸಂರಕ್ಷಣೆ ಅನೇಕ ಕಾಯ್ದೆಗಳನ್ನು ಮಾಡಲಾಗಿದೆ ಅವುಗಳ ಅಧ್ಯಯನ ಮುಖ್ಯ ಎಂದರು.

ಇದನ್ನೂ ಓದಿ: Vishweshwar Bhat Column: ಹೆಡ್‌ ವಿಂಡ್‌ ಮತ್ತು ಟೇಲ್‌ ವಿಂಡ್

ರಾಜ್ಯ ಸರಕಾರವು 'ನಮ್ಮ ಮತ ನಮ್ಮ ಹಕ್ಕು' ಘೋಷಣೆಯಡಿ ಪ್ರಜಾಪ್ರಭುತ್ವವನ್ನು ಆಚರಿಸುವ ಮೂಲಕ ನಾವೆಲ್ಲರೂ ಒಟ್ಟಿಗೆ ಇರೋಣ. ಪ್ರಜಾಪ್ರಭುತ್ವವು ಯುವಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ, ನಾಗರಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ ಜೊತೆಗೆ ನಮ್ಮ ಭೂಮಿ, ಪರಿಸರ ವೂ ಪ್ರಭುತ್ವದ ಭಾಗವಾಗಿದೆ ಎಂದರು.

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಕಾರ್ಯದರ್ಶಿ ಟಿ.ರುದ್ರಮುನಿ ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.