ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿಕೊಳ್ಳಿ: ಡಾ.ಲಕ್ಷ್ಮೀ ಪಾಟೀಲ ಮಾಕಾ
ಮಾಧ್ಯಮವನ್ನು ಸರ್ಕಾರದ ನಾಲ್ಕನೇ ಅಂಗವೆಂದೆ ಭಾವಿಸಲಾಗಿದೆ. ಪ್ರಜಾಪ್ರಭುತ್ವದ ಉಳಿವಿನಲ್ಲಿ ಮಾಧ್ಯಮ ಪಾತ್ರ ದೊಡ್ಡದಾಗಿದ್ದು, ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ಆಳುವ ಸರ್ಕಾ ರಕ್ಕೆ ಎಚ್ಚರಿಸುವ ಕೆಲಸ ಪತ್ರಿಕೆ ಮತ್ತು ಮಾಧ್ಯಮಗಳು ಮಾಡುತ್ತಿವೆ. ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆ ಮತ್ತು ಪುಸ್ತಕ ಓದುವ ರೂಢಿ ಹಾಕಿಕೊಂಡಲ್ಲಿ ನಿಮ್ಮ ಓದುವ ಕೌಶಲ್ಯ ಸಹ ಹೆಚ್ಚಲಿದೆ ಎಂದು ಅಭಿಪ್ರಾಯ ಪಟ್ಟರು


ಕಲಬುರಗಿ: ವಿಶ್ವದಾದ್ಯಂತ ನಡೆಯುವ ನೈಜ ಘಟನೆಗಳನ್ನು ಪತ್ರಿಕೆ ನಮಗೆ ಮಾಹಿತಿ ನೀಡುವು ದರ ಜೊತೆಗೆ ಕಲೆ, ಸಂಸ್ಕೃತಿ, ವಾಣಿಜ್ಯ, ವ್ಯವಹಾರ, ಆಡಳಿತ, ರಾಜಕೀಯ ಜ್ಞಾನವನ್ನು ನೀಡುವ ಭಂಡಾರವಾಗಿದೆ. ಹೀಗಾಗಿ ವಿದ್ಯಾರ್ಥಿ ಸಮುದಾಯ ಮೋಬೈಲ್ ಗೀಳಿನಿಂದ ಹೊರಬಂದು ಪತ್ರಿಕೆ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ಕಲಬುರಗಿಯ ಶರಣಬಸವ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀ ಪಾಟೀಲ ಕರೆ ನೀಡಿದರು.
ಶುಕ್ರವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಶರಣಬಸವ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕ ಕಲಬುರಗಿ ಇವುಗಳ ಸಂಯುಕ್ತಾಶಯದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಅನುಭವ ಮಂಟಪದಲ್ಲಿ ಆಯೋಜಿಸಿದ ಪತ್ರಿಕಾ ದಿನಾಚರಣೆ ಮತ್ತು ಭಾರತದಲ್ಲಿ ಪ್ರಸಕ್ತ ಮಾಧ್ಯಮ ಸ್ಥಿತಿಗತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮವನ್ನು ಸರ್ಕಾರದ ನಾಲ್ಕನೇ ಅಂಗವೆಂದೆ ಭಾವಿಸಲಾಗಿದೆ. ಪ್ರಜಾಪ್ರಭುತ್ವದ ಉಳಿವಿನಲ್ಲಿ ಮಾಧ್ಯಮ ಪಾತ್ರ ದೊಡ್ಡದಾಗಿದ್ದು, ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ಆಳುವ ಸರ್ಕಾ ರಕ್ಕೆ ಎಚ್ಚರಿಸುವ ಕೆಲಸ ಪತ್ರಿಕೆ ಮತ್ತು ಮಾಧ್ಯಮಗಳು ಮಾಡುತ್ತಿವೆ. ವಿದ್ಯಾರ್ಥಿಗಳು ಪ್ರತಿ ದಿನ ಪತ್ರಿಕೆ ಮತ್ತು ಪುಸ್ತಕ ಓದುವ ರೂಢಿ ಹಾಕಿಕೊಂಡಲ್ಲಿ ನಿಮ್ಮ ಓದುವ ಕೌಶಲ್ಯ ಸಹ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ನ್ಯೂಸ್ ಪ್ರಿಂಟ್ ಅಮದು ಸುಂಕ ನಿಲ್ಲಿಸಿ: ಭಾರತದಲ್ಲಿ ಪ್ರಸಕ್ತ ಮಾಧ್ಯಮ ಸ್ಥಿತಿಗತಿ ಕುರಿತು ವಿಶೇಷ ಉಪನ್ಯಾಸದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವ ಹನ ವಿಭಾಗದ ಡೀನ್ ಟಿ.ವಿ. ಶಿವಾನಂದನ್ ಮಾತನಾಡಿ, ಕೋವಿಡ್ ನಂತರ ಪತ್ರಿಕೆಗಳ ಪ್ರಸಾರ ದಲ್ಲಿ ಗಣನೀಯ ಇಳಿಕೆ ನಡುವೆಯೂ ಪ್ರಜಾಪ್ರಭುತ್ವದ ಮೌಲ್ಯ ಎತ್ತಿ ಹಿಡಿಯುವ ಕೆಲಸ ಮಾಡು ತ್ತಿರುವ ಪತ್ರಿಕಾ ಉದ್ಯಮ ಇಂದು ಸಂಕಷ್ಟದ ಸ್ಥಿತಿ ಎದುರಿಸುತ್ತಿದೆ. ಕೇಂದ್ರ ಸರ್ಕಾರ ಕೂಡಲೆ ನ್ಯೂಸ್ ಪ್ರಿಂಟ್ ಅಮದಿಗೆ ಸುಂಕ ಹೇರಿಕೆ ನಿಲ್ಲಿಸುವುದರ ಜೊತೆಗೆ ಮಾಧ್ಯಮವನ್ನು ಜಿ.ಎಸ್.ಟಿ. ವ್ಯಾಪ್ತಿಯಿಂದ ಹೊರತುರುವ ಮೂಲಕ ನಾಲ್ಕನೇ ಅಂಗದ ನೆರವಿಗೆ ಬರಬೇಕಿದೆ ಎಂದರು.
ಹಿಂದೆಲ್ಲ ಕೇಂದ್ರ ಸರ್ಕಾರ ಪತ್ರಿಕೆಗಳಿಗೆ ಪ್ರೋತ್ಸಾಹ ರೂಪದ ಜಾಹೀರಾತು ನೀಡುತ್ತಿತ್ತು. ಆದರೆ ಇತ್ತೀಚೆಗೆ ಶೇ.60ರಷ್ಟು ಜಾಹೀರಾತು ನೀಡುವದನ್ನು ನಿಲ್ಲಿಸಿದ್ದರಿಂದ ಪತ್ರಿಕೆಗಳಿಗೆ ಆದಾಯ ಮೂಲವೇ ಇಲ್ಲದಂತಾಗಿದೆ. ಹೀಗಾಗಿ ಪತ್ರಿಕೆಗಳು ಆದಾಯ ಮೂಲ ಹುಡುಕುತ್ತಾ ಹೊರಟಿರುವುದು ದುರಾದೃಷ್ಟ. ಇನ್ನು ಸ್ಥಳೀಐ, ಪ್ರದೆಶದ ಸುದ್ದಿಗೆ ಮಹತ್ವ ನೀಡುವ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಸ್ಥಿತಿ ಸಹ ಹೇಳತೀರದು. ರಾಜ್ಯ ಸರ್ಕಾರದ ಜಾಹೀರಾತುಗಳೆ ಇವರ ಮೂಲ ಆದಾಯ ವಾಗಿದ್ದರಿಂದ, ಅಷ್ಟರ ಮಟ್ಟಿಗೆ ರಾಜ್ಯ ಸರ್ಕಾರ ಇವರ ನೆರವಿಗೆ ಬಂದಿರುವುದು ಸಂತಸದ ವಿಚಾರ ವಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ 2 ವರ್ಷಗಳ ಕಾಲ ವರದಿಗಾರರಿಗೆ ಶೇ.10 ರಿಂದ 30ರ ವರೆಗೆ ಕಡಿಮೆ ಸಂಬಳ ನೀಡಿದ್ದು, ಇದೀಗ ನಿಧಾನಗತಿಯಲ್ಲಿ ಪ್ರಸಾರ ಸಂಖ್ಯೆ ಹೆಚ್ಚಳವಾಗುತ್ತಿರುವು ದರಿಂದ ಬಾಕಿ ಸಂಬಳ ಮಾಧ್ಯಮ ಸಂಸ್ಥೆಗಳು ನೌಕರರಿಗೆ ಪಾವತಿಸಬೇಕು ಎಂದು ಒತ್ತಾಯ ಮಾಡಿದರು.
ಸ್ವಾತಂತ್ರ‍್ಯ ಪೂರ್ವದಲ್ಲಿ ನಡೆದ ಸ್ವಾತಂತ್ರ‍್ಯ ಚಳುವಳಿ, ಜನರ ಅಭಿಪ್ರಾಯ ಸಂಗ್ರಹಣೆ, ಸ್ವಾತಂತ್ರ್ಯ ಹೋರಾಟಕ್ಕೆ ಬಲ ನೀಡುವಲ್ಲಿ ಪತ್ರಿಕೆಗಳ ಪಾತ್ರ ಅಪಾರವಾಗಿದೆ. ಪ್ರಜಾಪ್ರಭುತ್ವಕ್ಕೆ ಆಪತ್ತು ಬಂದಾಗಲೆಲ್ಲ ಅದನ್ನು ರಕ್ಷಿಸುವ ಕೆಲಸ ಪತ್ರಿಕೆಗಳು ಮಾಡಿವೆ. 1975-77ರ ಅವಧಿಯ ತುರ್ತು ಪರಿಸ್ಥಿತಿ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದ ಅವರು ಭಾರತದಲ್ಲಿ ಮಾಧ್ಯಮ ಒಂದು ದೊಡ್ಡ ಉದ್ಯಮವಾಗಿ ಹೊರಹೊಮ್ಮಿದೆ ಎಂದರು.
ಪತ್ರಿಕೆ ಓದುವ ಖುಷಿ ಬೇರೊಂದರಲ್ಲಿಲ್ಲ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಕೋವಿಡ್ ಕಾರಣ ಪ್ರತಿಷ್ಠಿತ ದೈನಿಕ ಗಳಾದ ಡೆಕ್ಕನ್ ಕ್ರೋನಿಕಲ್, ಡಿ.ಎನ್.ಎ., ಏಶಿಯನ್ ಏಜ್ ಮತ್ತು ಟೈಮ್ಸ್ ಗ್ರೂಪ್‌ನ ಮಹಾರಾಷ್ಟ್ರ ಟೈಮ್ಸ್ ಪತ್ರಿಕೆ ಮುಚ್ಚಲ್ಪಟ್ಟಿವೆ. ಕೋವಿಡ್ ಹೊಡೆತದಿಂದ ಹೆಚ್ಚು ತೊಂದರೆ ಅನುಭವಿಸಿರುವುದೇ ಪತ್ರಿಕೆಗಳು. ಆದರೆ ಇಂದು ನಿಧಾನತಿಯಲ್ಲಿ ಚೇತರಿಕೆ ಕಾಣುತ್ತಿರುವುದೇ ನಮಗೆ ಸಮಾಧಾನಕರ ಸಂಗತಿ ಎಂದರು.
ಪತ್ರಿಕೆ ನಿಂತ ನೀರಲ್ಲ, ಹರಿಯುವ ನದಿ ಇದ್ದಂತೆ. ಎಷ್ಟೆ ತಂತ್ರಜ್ಞಾನ ಬಂದರೂ ಪತ್ರಿಕೆ ಓದುವಲ್ಲಿ ನೀಡುವ ಖುಷಿ ಬೇರೊಂದಲ್ಲಿ ಸಿಗದು ಎಂದ ಅವರು ಪತ್ರಿಕೆ ಮತ್ತು ಪುಸ್ತಕ ಓದುವ ಅಭ್ಯಾಸ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಮುದ್ರಣ, ವಿದ್ಯುನ್ಮಾನ, ಡಿಜಿಟಿಲ್ ಮೀಡಿಯಾ ಜೊತೆಗೆ ಎಲ್ಲಾ ಕಾರ್ಪೋರೇಟ್ ಕಂಪನಿಗಳು ಸಹ ತಮ್ಮ ಉತ್ಪನ್ನದ ಪ್ರಚಾರ ಅಥವಾ ಸಂವಹನಕ್ಕಾಗಿ ಪತ್ರಿಕೋದ್ಯಮದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದು, ಪತ್ರಿಕೋದ್ಯಮದಲ್ಲಿ ವಿಫುಲ ಅವಕಾಶಗಳಿವೆ. ಪತ್ರಿಕೋದ್ಯಮದ ಕುರಿತು ಮುಂದಿನ ಭವಿಷ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಚಿಂತೆ ಬೇಡ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿ ಸಿಂಗ್ ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ದಿನಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಬಿರಾದರ, ಹಿರಿಯ ಪತ್ರಕರ್ತ ರಾಮೃಷ್ಣ ಬಡಶೇಷಿ ಸೇರಿದಂತೆ ವಾರ್ತಾ ಇಲಾಖೆಯ ಸಿಬ್ಬಂದಿಗಳು ಮತ್ತು ಪತ್ರಿಕೋದ್ಯಮ ವಿಭಾಗದ ಬೋಧಕ, ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿ ಸಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸರ್ವ ರನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ನಿರೂಪಿಸಿದರು. ವಿದ್ಯಾ ರ್ಥಿನಿ ಯಶಸ್ವಿನಿ ವಂದಿಸಿದರು. ರಂಜಿತಾ ಮತ್ತು ತಂಡ ಪ್ರಾರ್ಥನೆ ಗೀತೆ ಹಾಡಿದರು.