ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಯನತಾರಾ ದಂಪತಿ, ಸರ್ಪಸಂಸ್ಕಾರದಲ್ಲಿ ಭಾಗಿ

Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿನಿಮಾ ಹಾಗೂ ಕ್ರಿಕೆಟ್‌ನ ಸೆಲೆಬ್ರಿಟಿಗಳು ಆಗಾಗ ಆಗಮಿಸುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್‌ ತಮ್ಮ ಗಂಡ ವಿಕ್ಕಿ ಕೌಶಲ್‌ ಜೊತೆಗೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನೆರವೇರಿಸಿದ್ದರು. ಆ ಬಳಿಕ ಅವರು ಗರ್ಭಿಣಿಯಾಗಿದ್ದರು. ಸಂತಾನಫಲದ ಸಮಸ್ಯೆಯನ್ನು ಹೊಂದಿದವರಿಗೆ ಕುಕ್ಕೆ ಸುಬ್ರಹ್ಮಣ್ಯದ ಭೇಟಿಗೆ ಜ್ಯೋತಿಷಿಗಳು ಸೂಚಿಸುವುದು ಸಾಮಾನ್ಯವಾಗಿದೆ. ಸಚಿನ್‌ ತೆಂಡುಲ್ಕರ್‌, ಶಿಲ್ಪಾ ಶೆಟ್ಟಿ ಮೊದಲಾದವರೆಲ್ಲ ಇಲ್ಲಿಗೆ ಭೇಟಿ ನೀಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಟಿ ನಯನತಾರಾ ದಂಪತಿ

ಕುಕ್ಕೆ ಸುಬ್ರಹ್ಮಣ್ಯ: ದಕ್ಷಿಣ ಭಾರತದ ಜನಪ್ರಿಯ ನಟಿ, ಲೇಡಿ ಸೂಪರ್ ಸ್ಟಾರ್ ಖ್ಯಾತಿಯ ನಯನತಾರಾ (Actress Nayanthara) ಹಾಗೂ ಅವರ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ಅವರು ಬುಧವಾರ ನಾಗಾರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ (Kukke Sri Subrahmanya temple) ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ದಂಪತಿ ಸರ್ಪಸಂಸ್ಕಾರ (Sarpa Samskara) ಪೂಜೆಯಲ್ಲಿ ಭಾಗವಹಿಸಿ, ಕುಕ್ಕೆ ಸುಬ್ರಹ್ಮಣ್ಯ ದೇವರ ಆಶೀರ್ವಾದ ಪಡೆದರು.

ದೇವರ ದರ್ಶನದ ನಂತರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಅವರು ನಯನತಾರಾ ದಂಪತಿಗೆ ದೇವಾಲಯದ ಪರವಾಗಿ ಸ್ಮರಣಿಕೆಯೊಂದಿಗೆ ಸನ್ಮಾನಿಸಿದರು. ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತರು, ನೆಚ್ಚಿನ ತಾರಾ ದಂಪತಿಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಈ ವೇಳೆ ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಪೂಜೆ ವೇಳೆ, ದೇವಾಲಯದ ಅರ್ಚಕರು ಹಾಗೂ ದೇವಸ್ಥಾನ ಸಿಬ್ಬಂದಿ ಅವರ ಸೇವೆಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದರು.

ನಯನತಾರಾ ಅವರು ಮಲಯಾಳಂ ಚಿತ್ರರಂಗದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿ ತಮಿಳು, ತೆಲುಗು, ಹಾಗೂ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಅಭಿನಯಿಸಿ ಜನಮನ ಗೆದ್ದಿದ್ದಾರೆ. ತಮ್ಮ ವಿಭಿನ್ನ ಪಾತ್ರಗಳ ಮೂಲಕ ಅದ್ಭುತ ಅಭಿನಯ ಹಾಗೂ ಸಾಮಾಜಿಕ ಸೇವಾ ಚಟುವಟಿಕೆಗಳಿಂದಲೂ ಅವರು ಅಭಿಮಾನಿಗಳ ಹೃದಯದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಅವರು ದಕ್ಷಿಣ ಭಾರತೀಯ ಚಿತ್ರರಂಗದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿದ್ದು, ಹಲವು ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: Katrina Kaif: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂತಾನ ಭಾಗ್ಯ ಪೂಜೆ; ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟ ಕತ್ರಿನಾ-ವಿಕ್ಕಿ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿನಿಮಾ ಹಾಗೂ ಕ್ರಿಕೆಟ್‌ನ ಸೆಲೆಬ್ರಿಟಿಗಳು ಆಗಾಗ ಆಗಮಿಸುತ್ತಿರುತ್ತಾರೆ. ಕೆಲ ತಿಂಗಳ ಹಿಂದೆ ಬಾಲಿವುಡ್ ನಟಿ ಕತ್ರಿನಾ ಕೈಫ್‌ ತಮ್ಮ ಗಂಡ ವಿಕ್ಕಿ ಕೌಶಲ್‌ ಜೊತೆಗೆ ಆಗಮಿಸಿ ಸರ್ಪಸಂಸ್ಕಾರ ಪೂಜೆ ನೆರವೇರಿಸಿದ್ದರು. ಆ ಬಳಿಕ ಅವರು ಗರ್ಭಿಣಿಯಾಗಿದ್ದರು. ಸಂತಾನಫಲದ ಸಮಸ್ಯೆಯನ್ನು ಹೊಂದಿದವರಿಗೆ ಕುಕ್ಕೆ ಸುಬ್ರಹ್ಮಣ್ಯದ ಭೇಟಿಗೆ ಜ್ಯೋತಿಷಿಗಳು ಸೂಚಿಸುವುದು ಸಾಮಾನ್ಯವಾಗಿದೆ. ಸಚಿನ್‌ ತೆಂಡುಲ್ಕರ್‌, ಶಿಲ್ಪಾ ಶೆಟ್ಟಿ ಮೊದಲಾದವರೆಲ್ಲ ಇಲ್ಲಿಗೆ ಭೇಟಿ ನೀಡಿದ್ದಾರೆ.

ಕುಕ್ಕೆಯಲ್ಲಿ ಚಂಪಾಷಷ್ಠಿ ಸಂಭ್ರಮ

ಸುಬ್ರಹ್ಮಣ್ಯದಲ್ಲಿ ಪ್ರಸ್ತುತ ಪ್ರತಿ ವರ್ಷದಂತೆ ಈ ವರ್ಷವೂ ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ವಿಶ್ವವಸು ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ (ನ. 6) ರಿಂದ ಮಾರ್ಗಶಿರ ಶುದ್ಧ ದ್ವಾದಶಿ (ಡಿ.2) ರವರೆಗೆ ವಾರ್ಷಿಕ ಚಂಪಾಷಷ್ಠಿ ಮಹೋತ್ಸವಗಳು ಜರುಗುತ್ತಿವೆ. ನವೆಂಬರ್ 16ರಂದು ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, 17ರಂದು ಹಾಗೂ 18ರಂದು ರಾತ್ರಿ ಶೇಷವಾಹನ ಬಂಡಿ ಉತ್ಸವ, 19ರಂದು ಲಕ್ಷ ದೀಪೋತ್ಸವ ಹಾಗೂ 20ರಂದು ರಾತ್ರಿ ಶೇಷವಾಹನೋತ್ಸವ ನಡೆಯಲಿವೆ.

ಇದನ್ನೂ ಓದಿ: Kukke Subrahmanya Temple: ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದೇವಾಲಯಗಳಲ್ಲಿ ದೇವರ ಸೇವೆಗೆ ಚಾರ್ಜ್‌ ಭಾರಿ ಏರಿಕೆ

ಹರೀಶ್‌ ಕೇರ

View all posts by this author