ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ (Speaker U.T. Khadar) ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ 11 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ 7 ರಂದು ಮಂಗಳೂರು ಬಳಿಯ ಉಳ್ಳಾಲ ಪ್ರದೇಶದ ನಡೆದಿದ್ದ ಕಾರ್ಯಕ್ರಮದಲ್ಲಿ ಖಾದರ್ ಭಾಗವಹಿಸಿದ್ದರು. ನಂತರ ಖಾದರ್ ಅವರು ಬೆಂಗಾವಲು ಪಡೆಯಲ್ಲಿ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರತಿಭಟನಾಕಾರರ ಗುಂಪೊಂದು ಬೆಂಗಾವಲು ಪಡೆಯನ್ನು ತಡೆಯಲು ಪ್ರಯತ್ನಿಸಿತು ಮತ್ತು ಅವರ ವಿರುದ್ಧ ಘೋಷಣೆಗಳನ್ನು ಕೂಗಿತು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಪೀಕರ್ ಅವರ ಗನ್ ಮ್ಯಾನ್ ಮೊಹಮ್ಮದ್ ಯಾಸೀನ್ ನೀಡಿದ ದೂರಿನ ಪ್ರಕಾರ, ಕುತ್ತಾರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬಾಪುನಿ ಸರ್ಕಾರಿ ಅತಿಥಿ ಗೃಹದ ಮುಂದೆ ಜನರ ಗುಂಪೊಂದು ಸ್ಪೀಕರ್ ಅವರ ಬೆಂಗಾವಲು ಪಡೆಯನ್ನು ತಡೆದು, ಭದ್ರತಾ ಅಧಿಕಾರಿಗಳನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ ಸಮಸ್ಯೆಗಳ ಕುರಿತು ಸ್ಪೀಕರ್ ಜೊತೆ ಮಾತನಾಡಲು ಅವಕಾಶ ನೀಡಬೇಕೆಂದು ಅವರು ಒತ್ತಾಯಿಸಿದರು. ಆದರೆ ರಾತ್ರಿ 10.30 ಆಗಿದ್ದರಿಂದ, "ನಾನು ಅವರಿಗೆ ಸ್ಪೀಕರ್ ಭೇಟಿ ಮಾಡಲು ಅವಕಾಶ ನೀಡಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಪೀಕರ್ ಅವರ ಬೆಂಗಾವಲು ಪಡೆ ಸಾಗಿದ ಮಾರ್ಗದ ಬಳಿ ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ಆ ಪ್ರದೇಶದಲ್ಲಿ ಸ್ವಲ್ಪ ಸಮಯ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.
ದೂರಿನ ಆಧಾರದ ಮೇಲೆ, ಉಳ್ಳಾಲ ಪೊಲೀಸರು ಮದನಿ ನಗರದ ನಿವಾಸಿ ಜುನೈದ್ ಮತ್ತು ಇತರ 10 ಜನರ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ಸೆಕ್ಷನ್ ಗಳಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
DA Hike: ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ತುಟ್ಟಿಭತ್ಯೆ ಶೇ.15.75ಕ್ಕೆ ಹೆಚ್ಚಳ ಮಾಡಿ ಸರ್ಕಾರ ಆದೇಶ
ಏನಿದು ಪ್ರಕರಣ?
ನಿಟ್ಟೆ ಪರಿಗಣಿತ ವಿವಿ ವತಿಯಿಂದ ಕುತ್ತಾರು ಜಂಕ್ಷನ್ ನಲ್ಲಿ ಕುತ್ತಾರ್ ಜಂಕ್ಷನ್ನಲ್ಲಿ ವೃತ್ತವೊಂದನ್ನ ನಿರ್ಮಿಸಲು ರೂಪುರೇಷೆ ಸಿದ್ಧಗೊಂಡಿದ್ದು, ಇದೇ ವೇಳೆ ಅಲ್ಲಿ ಕೊರಗಜ್ಜನ ಹೆಸರಲ್ಲಿ ವೃತ್ತ ನಿರ್ಮಿಸಬಾರದೆಂದು ಅಲ್ಪಸಂಖ್ಯಾತ ಸಮುದಾಯದ ಗುಂಪೊಂದು ಸ್ಪೀಕರ್ ಖಾದರ್ ಅವರನ್ನ ತಡೆದು ಫೇರಾವ್ ಮಾಡಿ ತರಾಟೆಗೈದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತು. ಉಳ್ಳಾಲ ಮಾಸ್ತಿಕಟ್ಟೆಯ ರೆಸಾರ್ಟ್ ಒಂದರಲ್ಲಿ ಗುರುವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಮುಸ್ಲಿಮರ ಗುಂಪೊಂದು ಸ್ಪೀಕರ್ ಖಾದರ್ ಅವರನ್ನು ಪ್ರಶ್ನೆ ಮಾಡಿ ಕುತ್ತಾರು ಜಂಕ್ಷನ್ ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣ ಮಾಡದಂತೆ ತಗಾದೆ ಎತ್ತಿದ್ದರು. ಸ್ಪೀಕರ್ ಮೇಲೆ ಆ ವೇಳೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರು ನೀಡಲಾಗಿದೆ.