ಮಂಗಳೂರು: ಜಗಳದ ವೇಳೆ ತಂದೆಗೆ ಚಾಕುವಿನಿಂದ ಇರಿದ ಬಾಲಕನೊಬ್ಬ, ಬಳಿಕ ಮನೆಯಲ್ಲಿದ ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ರಾಮಕುಂಜ ಗ್ರಾಮದ ಪಾದೆಯಲ್ಲಿ ನಡೆದಿದೆ.
ತಂದೆ ವಸಂತ ಅಮೀನ್ ಹಾಗೂ ಪುತ್ರ ಮೋಕ್ಷ ನಡುವೆ ಜಗಳ ನಡೆದಿದೆ. ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಿ ತಂದೆಗೆ ಬಾಲಕ ಮೋಕ್ಷ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತಂದೆ ವಂಸತ ಅವರನ್ನು ಮಂಗಳೂರಿನ ಎ.ಜೆ ಆಸ್ಪತ್ರೆದೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ತಂದೆ ಸಾವು ಬದುಕಿನ ನಡುವೆ ಹೋರಾಡುತ್ತಿರುವ ವಿಷಯ ತಿಳಿದಂತ ಅವರ ಪುತ್ರ ಬಾಲಕ ಮೋಕ್ಷ, ಮನೆಯಲ್ಲಿದ್ದ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ತಂದೆ-ಮಗನ ನಡುವೆ ಯಾವ ವಿಷಯಕ್ಕೆ ಜಗಳವಾಗಿದೆ?, ಇದು ಆತ್ಮಹತ್ಯೆಯೋ ಅಥವಾ ಕೊಲೆಯಾ ಎಂಬುವುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ.
ಮಗಳು ಪ್ರಿಯಕರನೊಟ್ಟಿಗೆ ಎಸ್ಕೇಪ್; ಇತ್ತ ಪತಿಗೇ ಚಾಕು ಇರಿದು ಕೊಲೆ ಮಾಡಿದ ಪತ್ನಿ
ಕೇರಳ ಮೂಲದವರಾದ ವಸಂತ ಅಮೀನ್ ಅವರು ರಾಮಕುಂಜ ಪಾದೆಯಲ್ಲಿ ಜಮೀನು ಖರೀದಿಸಿ ಮನೆ ನಿರ್ಮಿಸಿಕೊಂಡು ಪುತ್ರನೊಂದಿಗೆ ವಾಸವಿದ್ದರು. ಮೃತ ಬಾಲಕ ಮೋಕ್ಷ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಟಾಟಾ ಏಸ್-ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಸಾವು
ಬೆಂಗಳೂರು: ಟಾಟಾ ಏಸ್ ಹಾಗೂ ಸ್ಕೂಟರ್ ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿಯಲ್ಲಿ ನಡೆದಿದೆ. ಶೈಲಜಾ (45) ಹಾಗೂ ಪ್ರಜ್ವಲ್ (26) ಮೃತ ತಾಯಿ-ಮಗ.
ತಾಯಿ-ಮಗ ದಿನಸಿ ಸಾಮಗ್ರಿ ಖರೀದಿಸಿ ಡಿಯೋ ಸ್ಕೂಟರ್‌ನಲ್ಲಿ ಮನೆಯತ್ತ ಸಾಗುತ್ತಿದ್ದರು. ಈ ವೇಳೆ ಎದುರುನಿಂದ ಬಂದ ಟಾಟಾ ಏಸ್ ಡಿಕ್ಕಿಯಾಗಿದೆ. ಇದರಿಂದ ಸ್ಥಳದಲ್ಲೇ ತಾಯಿ-ಮಗ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.