ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೋದಿ ಹೆಸರಿನಲ್ಲಿ 7 ಉಚಿತ ಮನೆ ನಿರ್ಮಿಸಿದ ಕ್ಯಾನ್ಸರ್‌ ಬಾಧಿತ ವ್ಯಕ್ತಿ

ಮೋದಿ ಮೇಲಿನ ಪ್ರೀತಿಯಿಂದ ಇದುವರೆಗೆ 7 ಮನೆಗಳನ್ನು ಉಚಿತವಾಗಿ ಕಟ್ಟಿಕೊಟ್ಟಿರುವ ಅವರು, ಒಟ್ಟು 10 ಮನೆಗಳನ್ನು ಉಚಿತವಾಗಿ ಕಟ್ಟಿಸಲು ನಿರ್ಧಾರ ಮಾಡಿದ್ದಾರೆ. ತಾವು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಅವಧಿಯಲ್ಲಿ ಬಂದ ಸಂಪೂರ್ಣ ಗೌರವ ಧನವನ್ನು 162 ಕ್ಯಾನ್ಸರ್ ಪೀಡಿತ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟಿದ್ದವರು ಸಂತೋಷ್.

ಮೋದಿ ಮೇಲೆ ಗೌರವ: ಉಳ್ಳಾಲದ ಸಂತೋಷ್ ರೈರಿಂದ ಅಪೂರ್ವ ಸಂಕಲ್ಪ

ಬಡವರಿಗೆ 10 ಮನೆ ಕೊಡುಗೆ ನೀಡುವ ಗುರಿ

162 ಕ್ಯಾನ್ಸರ್ ರೋಗಿಗಳಿಗೆ ನೆರವು

ಮಣಿಪಾಲ ಆಸ್ಪತ್ರೆಯ ಐಸಿಯು ವಾರ್ಡ್‌ನಿಂದ ಹೊರಬಂದ ಸಂತೋಷ್ ಕುಮಾರ್ ರೈ ಬೊಳಿಯಾರ್ ಅವರಿಗೆ ವೈದ್ಯರು ಕೊಟ್ಟ ಸೂಚನೆ ಸ್ಪಷ್ಟವಾಗಿತ್ತು. ಯಾವುದೇ ಸೋಂಕು ತಗುಲ ಬಾರದು, ಯಾರನ್ನೂ ಭೇಟಿಯಾಗಬೇಡಿ. ಆದರೆ ಕರುಳಿನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿರುವ 59 ವರ್ಷದ ಈ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರ ಧ್ಯಾನ ಮಾತ್ರ ತಮ್ಮ ಹುಟ್ಟುಹಬ್ಬದ ಸಂಭ್ರಮದ ದಿನ ಬಡವರೊಬ್ಬರಿಗೆ ಹಸ್ತಾಂತರಿಸಬೇಕಾದ ನೂತನ ಮನೆಯ ಮೇಲಿತ್ತು! ತಮಗೆ ಒಕ್ಕರಿಸಿದ ರೋಗದ ತೀವ್ರತೆಯ ನಡುವೆಯೂ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಎಂಟನೇ ‘ನಮೋ ಕುಟೀರ’ ನಿರ್ಮಾಣವನ್ನು ಅತ್ಯಂತ ಪ್ರೀತಿಯಿಂದ ಸೋಮವಾರ ಘೋಷಿಸಿದ್ದಾರೆ.

ಮೋದಿ ಮೇಲಿನ ಪ್ರೀತಿಯಿಂದ ಇದುವರೆಗೆ 7 ಮನೆಗಳನ್ನು ಉಚಿತವಾಗಿ ಕಟ್ಟಿಕೊಟ್ಟಿರುವ ಅವರು, ಒಟ್ಟು 10 ಮನೆಗಳನ್ನು ಉಚಿತವಾಗಿ ಕಟ್ಟಿಸಲು ನಿರ್ಧಾರ ಮಾಡಿದ್ದಾರೆ. ತಾವು ಜಿಲ್ಲಾ ಪಂಚಾ ಯತ್ ಸದಸ್ಯರಾಗಿದ್ದ ಅವಧಿಯಲ್ಲಿ ಬಂದ ಸಂಪೂರ್ಣ ಗೌರವ ಧನವನ್ನು 162 ಕ್ಯಾನ್ಸರ್ ಪೀಡಿತ ರೋಗಿಗಳ ಚಿಕಿತ್ಸೆಗೆ ಮೀಸಲಿಟ್ಟಿದ್ದವರು ಸಂತೋಷ್.

ಇದಷ್ಟೇ ಅಲ್ಲದೆ, ಸಾವಿರಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು; ಹಲವು ಬಾರಿ ಆಸ್ಪತ್ರೆಯ ಬಿಲ್ಲನ್ನು ತಾವೇ ಪ್ರೀತಿಯಿಂದ ಭರಿಸಿದ್ದರು. ಆದರೆ, ಈ ವರ್ಷ ಕೇರಳ ಚುನಾವಣೆಯ ಉಸ್ತುವಾರಿ ವಹಿಸಿದ್ದಾಗ ಅವರ ತೂಕ ದಿಢೀರನೆ 20 ಕೆಜಿ ಕಡಿಮೆಯಾಯಿತು.

ವೈದ್ಯಕೀಯ ತಪಾಸಣೆಯಲ್ಲಿ ಕರುಳಿನಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಪತ್ತೆಯಾಯಿತು. ಮಾರ್ಚ್ 27ರಿಂದ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಆರಂಭವಾಯಿತು. 10.5 ಗಂಟೆಗಳ ಕಾಲ ಸುದೀರ್ಘ ಶಸಚಿಕಿತ್ಸೆ ನಡೆದಿದ್ದು, ಪ್ರಸ್ತುತ ಅವರು ಪದೇ ಪದೇ ರೇಡಿಯೇಷನ್ ಹಾಗೂ ಕಿಮೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾನ್ಸರ್ ಅಂತ ಗೊತ್ತಾ ದಾಗ ಅವರ ಸೇವಾಭಾವ ಇನ್ನಷ್ಟು ತೀವ್ರವಾಗಿದೆ.

ಇದನ್ನೂ ಓದಿ: KMC Hospital Mangalore: ಜೀವಕ್ಕೆ ಅಪಾಯವಾದ ಕಡಜ ಕಡಿತ: ಕೆಎಂಸಿ ವೈದ್ಯರಿಂದ ಬಾಲಕನಿಗೆ ಯಶಸ್ವಿ ಚಿಕಿತ್ಸೆ

ತಮ್ಮ ಸಂಕಲ್ಪ ಈಡೇರಿಸಲು ಅವರ ಕಠಿಣ ದುಡಿಮೆಗ ಕುಟುಂಬಸ್ಥರೂ ಕೈಜೋಡಿಸಿದ್ದಾರೆ. ತಲೆಗೂದಲು ಉದುರುತ್ತದೆ, ನಿಮ್ಮ ಮೀಸೆ ಹೋಗುತ್ತದೆ, ತೀವ್ರ ನಿತ್ರಾಣರಾಗುತ್ತೀರಿ ಎಂದು ಹೆಂಡತಿ-ಮಕ್ಕಳ ಮುಂದೆ ವೈದ್ಯರು ಕ್ಯಾನ್ಸರ್ ಪತ್ತೆಯಾದಾಗ ಹೇಳಿದರು, ಆಗ ಮಕ್ಕಳು ಬಿಕ್ಕಿ ಬಿಕ್ಕಿ ಅತ್ತರು. ಆದರೆ ನಾನು ಧೈರ್ಯಗುಂದಲಿಲ್ಲ. ನನ್ನ ಬದುಕಿನಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ನನ್ನ ಜಿಲ್ಲಾ ಪಂಚಾಯತ್ ಗೌರವ ಧನವನ್ನೂ ಕ್ಯಾನ್ಸರ್ ಪೀಡಿತರಿಗೇ ಮೀಸಲಿಟ್ಟಿದ್ದೆ. ಸಾವಿರಕ್ಕೂ ಹೆಚ್ಚು ರೋಗಿಗಳ ಆರೈಕೆ ಮಾಡಿದ್ದೆ. ‘ದೇವರ ಇಚ್ಛೆಯಂತೆ ಆಗಲಿ’ ಎಂದು ಗಟ್ಟಿ ನಿರ್ಧಾರ ಮಾಡಿದೆ. ಇದೀಗ ಕ್ಯಾನ್ಸರ್ ಗುಣಮುಖವಾಗುವ ಹಂತದಲ್ಲಿದೆ.

ಇದನ್ನು ದೇವರು ನನಗೆ ಕೊಟ್ಟ ಹೊಸ ಬದುಕು ಎಂದು ಭಾವಿಸಿದ್ದೇನೆ. ನಾನು ಉದ್ಯಮದಲ್ಲಿ ಗಳಿಸಿದ ಆಸ್ತಿಯನ್ನು ಮಾರಾಟ ಮಾಡಿಯಾದರೂ ಬಡವರಿಗೆ ಮನೆಗಳನ್ನು ಕಟ್ಟಿಕೊಡುತ್ತೇನೆ. ನನಗೆ ಇದರಲ್ಲಿ ಸಿಗುವ ಆತ್ಮಾನಂದವೇ ಬೇರೆ, ಎನ್ನುತ್ತಾರೆ ಸಂತೋಷ್ ರೈ ಬೊಳಿಯಾರ್.

ಬಡವರಿಗೆ ಸ್ವಂತ ವೆಚ್ಚದಲ್ಲಿ ಸೂರು: ಪ್ರಧಾನಿ ಮೋದಿ ಅವರ ಮೇಲಿನ ಅಗಾಧ ಗೌರವದಿಂದ ಸ್ವಂತ ವೆಚ್ಚದಲ್ಲಿ 10 ಬಡ ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಪವಿತ್ರ ಸಂಕಲ್ಪ ತೊಟ್ಟಿರುವ ಸಂತೋಷ್ ರೈ, ಈಗಾಗಲೇ ಏಳು ಮನೆಗಳ ನಿರ್ಮಾಣವನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿ ದ್ದಾರೆ. ಜಮೀನಿನ ಯಾವುದೇ ದಾಖಲೆಗಳಿಲ್ಲದೆ ಸಣ್ಣ ಜೋಪಡಿಯಲ್ಲಿದ್ದ, 16 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡ ಬಡ ವಿಧವೆಗೆ ಸ್ವಂತ ವೆಚ್ಚದಲ್ಲಿ ನೂತನ ಮನೆ ನಿರ್ಮಿಸಿಕೊಡ ಲಾಗಿದೆ. ಆಸರೆಯಿಲ್ಲದೆ ಕಷ್ಟದಲ್ಲಿದ್ದ, ಮಕ್ಕಳಿಲ್ಲದ ವೃದ್ಧದಂಪತಿಗೆ ರೂಮ್, ಹಾಲ್, ಕಿಚನ್ ಹಾಗೂ ಸಿಟ್‌ಔಟ್ ಒಳಗೊಂಡ ಸುಂದರ ಮನೆ ನಿರ್ಮಿಸಿ ಕೀಲಿ ಕೈ ಹಸ್ತಾಂತರಿಸಿದ್ದಾರೆ. ಕೊಟೇಕಾರಿನ ಅಡ್ಡ ಶ್ರೀಭಗವತಿ ಕ್ಷೇತ್ರದ ದರ್ಶನ ಪಾತ್ರಿ ಶ್ರವಣ್ ಬೆಳ್ಳಪ್ಪಾಡ ಅವರ ಕುಟುಂಬಕ್ಕೆ 7ನೇ ‘ನಮೋ ಕುಟೀರ’ ನಿರ್ಮಾಣವಾಗಿದೆ

ನಮೋ ಕುಟೀರ ಯೋಜನೆ ಯಾಕೆ?

ನನಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಪಾರ ಅಭಿಮಾನ. ಅಂತಹ ಅದ್ಭುತ ನಾಯಕತ್ವ ಹಾಗೂ ವ್ಯಕ್ತಿತ್ವವನ್ನು ನಾನು ಎಲ್ಲೂ ನೋಡಿಲ್ಲ. ಅದಕ್ಕಾಗಿ ಅವರ ಗೌರವಾರ್ಥ ನನ್ನ ಸ್ವಂತ ಖರ್ಚಿನಲ್ಲಿ ಬಡ, ವಸತಿ ರಹಿತ ಕುಟುಂಬಗಳಿಗೆ 10 ಮನೆಗಳನ್ನು ಕಟ್ಟಿಕೊಡುತ್ತಿದ್ದೇನೆ. ಈಗಾಗಲೇ ಏಳು ಮನೆಗಳನ್ನು ನಿರ್ಮಿಸಲಾಗಿದೆ. ಪ್ರೀತಿಯಿಂದ ಈ ಮನೆಗಳಿಗೆ ನಮೋ ಕುಟೀರ ಎಂದು ನಾಮಕರಣ ಮಾಡಿದ್ದೇನೆ, ಎಂದು ಸಂತೋಷ್ ರೈ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ನೂರು ಮನೆಗಳ ನಿರ್ಮಾಣದ ಆಸೆ

ಕರ್ನಾಟಕ ಸರ್ಕಾರದ ಮೈಸೂರು ಎಲೆಕ್ಟ್ರಿಕಲ್ಸ್ ಅಧ್ಯಕ್ಷರಾಗಿ ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭ ದತ್ತ ಮುನ್ನಡೆಸಿ, 42 ಶಾಲೆಗಳಿಗೆ ಸಿಎಸ್‌ಆರ್ ನಿಧಿಯ ನೆರವು ನೀಡಿದ್ದ ಸಂತೋಷ್ ರೈ, ಈಗ ತಮ್ಮ ಮಾರಕ ಅನಾರೋಗ್ಯದ ಸ್ಥಿತಿಗಿಂತ ಬಡವರ ವಸತಿ ಕನಸಿನ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದಾರೆ. ತಮ್ಮ ಸೇವಾ ಪಥದ ಮುಂದಿನ ಹೆಜ್ಜೆಯ ಬಗ್ಗೆ ಅತ್ಯಂತ ದೃಢವಾಗಿ ಮಾತನಾಡುವ ಅವರು, ಕ್ಯಾನ್ಸರ್ ನನ್ನನ್ನು ಬಾಧಿಸುತ್ತಿರಬಹುದು, ಆದರೆ ನನ್ನ ಸೇವಾ ಮನೋಭಾವಕ್ಕೆ ಅಡ್ಡಿಯಾಗಲು ಆ ಕಾಯಿಲೆಗೆ ಸಾಧ್ಯವಿಲ್ಲ!

ನನ್ನ ಮಕ್ಕಳು ಕೂಡ ಈ ಕಾರ್ಯಕ್ಕೆ ದನಿಗೂಡಿಸಿ ದ್ದಾರೆ. ಅದಕ್ಕೇ ಈ ಬಾರಿಯೂ ನನ್ನ ಜನ್ಮದಿನ ದಂದು ಬಡವರಿಗೆ ಮನೆ ನಿರ್ಮಿಸುವ ಘೋಷಣೆ ಮಾಡಿದ್ದೇನೆ. 100 ಮನೆಗಳನ್ನಾದರೂ ಬಡವರಿಗೆ ಕಟ್ಟಿಕೊಡಬೇಕು ಎನ್ನುವುದೇ ನನ್ನ ಬದುಕಿನ ಮಹಾದಾಸೆ ಎನ್ನುತ್ತಾರೆ.