ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಧರ್ಮಸ್ಥಳ ಬುರುಡೆ ಪ್ರಕರಣ; ಇಂದು ಶ್ರೀ ಕ್ಷೇತ್ರದ ಪರ ಸಲ್ಲಿಸಿದ ಅರ್ಜಿ ವಿಚಾರಣೆ, ಬೆಳ್ತಂಗಡಿಗೆ ಹಿರಿಯ ನ್ಯಾಯವಾದಿ ರಾಜಶೇಖರ್ ಹಿಲಿಯಾರ್ ಭೇಟಿ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಹೊಸ ಬೆಳವಣಿಗೆ ಕಂಡುಬಂದಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ಸಲ್ಲಿಸಲಾದ ಅರ್ಜಿ ವಿಚಾರಣೆಗಾಗಿ ಹಿರಿಯ ಹಾಗೂ ಖ್ಯಾತ ವಕೀಲ ರಾಜಶೇಖರ್ ಹಿಲಿಯಾರ್ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಅವರು ವಕೀಲರ ತಂಡದ ಭಾಗವಾಗಿ ಹಾಜರಾಗುತ್ತಿದ್ದು, ಈ ಹಿಂದೆ ಸಿ.ವಿ. ನಾಗೇಶ್ ಅವರು ಕ್ಷೇತ್ರದ ಪರವಾಗಿ ವಕಾಲತ್ತು ವಹಿಸಿದರು.

ರಾಜಶೇಖರ್ ಹಿಲಿಯಾರ್

ಧರ್ಮಸ್ಥಳ: ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ಧರ್ಮಸ್ಥಳ (Dharmasthala) ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಹೊಸ ಅಪ್‌ಡೇಟ್ ಸಿಕ್ಕಿದೆ. ಇಂದು ಖ್ಯಾತ ವಕೀಲರಾದ ರಾಜಶೇಖರ್ ಹಿಲಿಯಾರು(Rajashekar Hilliyar) ರವರು ಬೆಳ್ತಂಗಡಿ ನ್ಯಾಯಾಲಯಕ್ಕೆ(Belthangady Court) ಹಾಜರಾಗಲಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಡಿ.29 ರಂದು ದಾಖಲಾದ 39/25 ಪ್ರಕರಣ ಸಂಬಂಧ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ. ಈ ಹಿನ್ನಲೆ ಶ್ರೀಕ್ಷೇತ್ರವನ್ನು ಸಂತ್ರಸ್ತರು ಎಂದು ಪರಿಗಣಿಸಿ ನ್ಯಾಯ ಕೊಡಿಸಬೇಕು ಎಂದು ಈಗಾಗಲೇ ಅರ್ಜಿ ಸಲ್ಲಿಕೆಯಾಗಿದ್ದು, ಅದರ ವಿಚಾರಣೆ ಇಂದು ನಡೆಯಲಿದೆ.

ಬುರುಡೆ ಪ್ರಕರಣದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಆಡಳಿತ ಮಂಡಳಿಯ ಗೌರವಕ್ಕೆ ಧಕ್ಕೆಯಾಗಿದೆ. ಕೋಟ್ಯಾಂತರ ಭಕ್ತರ ಭಾವನೆಗೆ ಘಾಸಿಯಾಗಿದೆ. ಇದಕ್ಕೆ ನ್ಯಾಯ ಕೊಡಿಸಬೇಕು ಎಂದು ಬೆಳ್ತಂಗಡಿ ಕೋರ್ಟ್ ಗೆ ಧರ್ಮಸ್ಥಳ ಪರ ಅರ್ಜಿ ಸಲ್ಲಿಸಲಾಗಿತ್ತು. ಬೆಂಗಳೂರಿನ ಹಿರಿಯ ನ್ಯಾಯವಾದಿ ಸಿ.ವಿ ನಾಗೇಶ್(CV Nagesh) ಹಾಗೂ ಪುತ್ತೂರಿನ ವಕೀಲ ಮಹೇಶ್ ಕಜೆ (Mahesh Kaje) ಇಂದು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿ ವಕಾಲತ್ತು ಸಲ್ಲಿಕೆ ಮಾಡಿದ್ದರು.

ರಾಜಶೇಖರ್ ಹಿಲಿಯಾರ್ ಕರ್ನಾಟಕದ ಒಬ್ಬ ಖ್ಯಾತ ನ್ಯಾಯವಾದಿ (ವಕೀಲ). ಇವರು ಮುಖ್ಯವಾಗಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಶ್ರೀ ಕ್ಷೇತ್ರ ಧರ್ಮಸ್ಥಳದ ಪರವಾಗಿ ವಾದ ಮಂಡಿಸಲು ಬೆಳ್ತಂಗಡಿ ನ್ಯಾಯಾಲಯಕ್ಕೆ ಆಗಮಿಸಿದ ಖ್ಯಾತ ವಕೀಲರ ತಂಡದಲ್ಲಿ ಒಬ್ಬರಾಗಿದ್ದು, ಇವರು ಸಿ.ವಿ.ನಾಗೇಶ್ ಅವರಂತಹ ಪ್ರಮುಖ ವಕೀಲರೊಂದಿಗೆ ಕಾರ್ಯನಿರ್ವಹಿಸಿದ್ದಾರೆ.

ಕರ್ನಾಟಕ ಹೈಕೋರ್ಟ್‌ (High Court)ನಲ್ಲಿ ಅನುಭವಿ ವಕೀಲರಾಗಿರುವ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಖ್ಯಾತರಾಗಿರುವ ನ್ಯಾಯವಾದಿ ಸಿ.ವಿ.ನಾಗೇಶ್ (CV Nagesh) ಹಾಗೂ ಪುತ್ತೂರಿನ ಖ್ಯಾತ ವಕೀಲ ಹಾಗೂ ವಿಶೇಷವಾಗಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯದ (ED) ಪರ ವಾದಿಸಲು ವಿಶೇಷ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡಿರುವ ನ್ಯಾಯವಾದಿ ಮಹೇಶ್ ಕಜೆ(Mahesh KJ) ಅವರು ಈ ಹಿಂದೆ ಧರ್ಮಸ್ಥಳದ ಪರ ವಕಾಲತು ವಹಿಸಿದ್ದರು. ಇದೀಗ ಮತ್ತೊಬ್ಬ ಹಿರಿಯ ಅನುಭವಿ ನ್ಯಾಯವಾದಿ ಧರ್ಮಸ್ಥಳದ ಪರ ವಕಾಲತು ವಹಿಸಲಿದ್ದಾರೆ.

Dharmasthala Case: ಬುರುಡೆ ಕೇಸ್‌ಗೆ ಶ್ರೀಕ್ಷೇತ್ರ ಧರ್ಮಸ್ಥಳ ಎಂಟ್ರಿ; ಎಸ್‌ಐಟಿ ವರದಿ ವಿಚಾರಣೆಗೆ ಪ್ರತಿವಾದಿಯಾಗಿಸಲು ಅರ್ಜಿ

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವ ಹೂತಿರುವುದಾಗಿ ಆರೋಪಿಸಿದ್ದ ಬಳಿಕ ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಗಾಗಿ ಸರ್ಕಾರವು ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ನೇಮಿಸಿತು. ಎಸ್‌ಐಟಿ ನಡೆಸಿದ ತನಿಖೆಯಲ್ಲಿ ಇದು ಅಪಪ್ರಚಾರದ ಭಾಗವೆಂದೂ ಹಾಗೂ ಚಿನ್ನಯ್ಯನಿಗೆ ಹಣದ ಆಮಿಷ ತೋರಿಸಿ ಈ ಕೆಲಸ ಮಾಡಿಸಲಾಗಿತ್ತು ಎಂದು ತಿಳಿದುಬಂದಿತು. ಬಳಿಕ ಎಸ್ಐಟಿ ತನ್ನ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಸುಜಾತಾ ಭಟ್, ಜಯಂತ್ ಮತ್ತು ವಿಠ್ಠಲಗೌಡ ಸೇರಿದಂತೆ ಆರು ಜನರ ತಂಡವು ಧರ್ಮಸ್ಥಳಕ್ಕೆ ಮಸಿ ಬಳಿಯಲು ಅನಾಮಿಕ ದೂರುದಾರ ಚಿನ್ನಯ ಮೂಲಕ ಸುಳ್ಳು ಆರೋಪಗಳನ್ನು ಮಾಡಿತ್ತು ಎಂಬುವುದನ್ನು ಎಸ್ಐಟಿ ತಂಡ ಬಯಲು ಮಾಡಿತ್ತು.