ಮಂಗಳೂರು: Divine Solitairesನ ಪ್ರಮುಖ ವಾರ್ಷಿಕ ಗ್ರಾಹಕ ಅಭಿಯಾನವಾದ ದಿ ಸೊಲಿಟೇರ್ ಫೆಸ್ಟಿವಲ್ ಆಫ್ ಇಂಡಿಯಾ (TSFI) 2026 ದೇಶಾದ್ಯಂತದ ತನ್ನ ವಿಶಾಲ ಪಾಲುದಾರ ಆಭರಣ ಮಳಿಗೆಗಳ ಜಾಲದ ಮೂಲಕ ಆರಂಭಗೊಂಡಿದ್ದು, ಇದೀಗ ಅಂತಿಮ ವಾರಕ್ಕೆ ಪ್ರವೇಶಿಸಿದೆ. ಉತ್ಸವ ಮುಕ್ತಾಯದ ಹಂತಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ, Divine Solitaires ಗ್ರಾಹಕರಿಗೆ ಹಬ್ಬದ ಋತುವಿನಲ್ಲಿ ವಿಶೇಷ ಪ್ರಯೋಜನಗಳು ಮತ್ತು ಬಹುಮಾನಗಳನ್ನು ಪಡೆಯಲು ಮತ್ತೊಂದು ಅವಕಾಶ ನೀಡುವಂತಹ ಆಕರ್ಷಕ ಹಬ್ಬದ ಕೊಡುಗೆಗಳನ್ನು ಘೋಷಿಸಿದೆ.
TSFI 2026ರ ಭಾಗವಾಗಿ, Divine Solitaires ಗ್ರಾಹಕರಿಗೆ ಮತ್ತಷ್ಟು ವಿಶೇಷ ಹಬ್ಬದ ಅನುಭವ ನೀಡಲು ಹೊಸ ಹಾಗೂ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಿದೆ. ಖರೀದಿ ಮಾಡುವ ಗ್ರಾಹಕರಿಗೆ ಖಚಿತ ಉಡುಗೊರೆಗಳ ಅಪ್‌ಗ್ರೇಡ್ ದೊರೆಯಲಿದೆ. ಇದರ ಜೊತೆಗೆ, ತಮ್ಮ ಆಭರಣಗಳನ್ನು ವೈಯಕ್ತೀಕರಿಸಲು ಬಯಸುವ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ತಮ್ಮ ಮೊದಲಕ್ಷರ ಗಳನ್ನು ಕೆತ್ತಿಸಿಕೊಳ್ಳಬಹುದು. ಸಾಮಾನ್ಯ ವಾಗಿ ಈ ಕೆತ್ತನೆ ಸೇವೆಯ ವೆಚ್ಚ ₹2,500ರಿಂದ ₹3,000 ರವರೆಗೆ ಇದ್ದರೂ, ವಿಶೇಷ ಹಬ್ಬದ ಕೊಡುಗೆಯಾಗಿ ಈ ಸೇವೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಇದನ್ನೂ ಓದಿ: Jewel Fashion 2026: ಜ್ಯುವೆಲ್ ಫ್ಯಾಷನ್‌ಗೆ ಮರಳಿದ ಅಜ್ಜಿ ಕಾಲದ ಕಾಸಿನ ಸರ
ದಿ ಸೊಲಿಟೇರ್ ಫೆಸ್ಟಿವಲ್ ಆಫ್ ಇಂಡಿಯಾ ದೇಶದ ಅತ್ಯಂತ ನಿರೀಕ್ಷಿತ ನೈಸರ್ಗಿಕ ವಜ್ರದ ಸೊಲಿಟೇರ್ ರಿಟೇಲ್ ಉತ್ಸವಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ತಿಂಗಳಿಡೀ ನಡೆಯುವ ಈ ಸಂಭ್ರಮವು ಗ್ರಾಹಕರು ಮತ್ತು ಆಭರಣ ಮಳಿಗೆಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುತ್ತದೆ. ಪ್ರಮಾಣೀಕೃತ ನೈಸರ್ಗಿಕ ವಜ್ರದ ಸೊಲಿಟೇರ್‌ಗಳ ಮೂಲಕ ಜೀವನದ ವಿಶೇಷ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಳ್ಳಲು ಗ್ರಾಹಕರನ್ನು ಪ್ರೋತ್ಸಾಹಿಸುವುದರ ಜೊತೆಗೆ, ದೇಶಾದ್ಯಂತ Divine Solitairesನ ರಿಟೇಲ್ ಪಾಲುದಾರರಿಗೆ ಹೆಚ್ಚಿನ ಗೋಚರತೆ ಮತ್ತು ಗ್ರಾಹಕರ ಭೇಟಿ ಹೆಚ್ಚಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಹೊಸ ಕೊಡುಗೆಗಳು ಮತ್ತು ಉತ್ಸವದ ಕುರಿತು ಮಾತನಾಡಿದ Divine Solitairesನ ವ್ಯವಸ್ಥಾಪಕ ನಿರ್ದೇಶಕ ಜಿಗ್ನೇಶ್ ಮೆಹ್ತಾ ಅವರು, ಮಾತನಾಡಿ, “ದಿ ಸೊಲಿಟೇರ್ ಫೆಸ್ಟಿವಲ್ ಆಫ್ ಇಂಡಿಯಾ ನಮ್ಮ ಗ್ರಾಹಕರು ಮತ್ತು ರಿಟೇಲ್ ಪಾಲುದಾರ ರಿಬ್ಬರಿಗೂ ಪ್ರಮುಖ ವಾರ್ಷಿಕ ಸಂಭ್ರಮವಾಗಿ ರೂಪುಗೊಂಡಿದೆ. ಪ್ರತಿವರ್ಷವೂ ಗ್ರಾಹಕರು ನೈಸರ್ಗಿಕ ವಜ್ರದ ಸೊಲಿಟೇರ್‌ನೊಂದಿಗೆ ತಮ್ಮ ಜೀವನದ ಮಹತ್ವದ ಮೈಲಿಗಲ್ಲುಗಳನ್ನು ಆಚರಿಸಿ ಕೊಳ್ಳಲು ಈ ಸಂದರ್ಭವನ್ನು ಆಯ್ಕೆ ಮಾಡುತ್ತಿರುವುದು ಸಂತಸದ ಸಂಗತಿ.
TSFI 2026 ಅಂತಿಮ ವಾರಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ, ಖಚಿತ ಉಡುಗೊರೆಯ ಅಪ್ ಗ್ರೇಡ್ ಮತ್ತು ಖರೀದಿಯೊಂದಿಗೆ ಉಚಿತ ಕೆತ್ತನೆ ಸೇವೆಯನ್ನು ನೀಡುವ ಮೂಲಕ ಈ ಸಂಭ್ರಮಕ್ಕೆ ಮತ್ತಷ್ಟು ಹಬ್ಬದ ಮೆರುಗು ನೀಡಲು ನಾವು ಬಯಸಿದ್ದೇವೆ. ಗ್ರಾಹಕರು ಈ ವಿಶೇಷ ಪ್ರಯೋಜನಗಳ ಸದುಪಯೋಗ ಪಡೆದುಕೊಂಡು, ಪ್ರಮಾಣೀಕೃತ ನೈಸರ್ಗಿಕ ವಜ್ರದ ಸೊಲಿಟೇರ್ ನೊಂದಿಗೆ ತಮ್ಮ ಅಮೂಲ್ಯ ಕ್ಷಣಗಳನ್ನು ಸಂಭ್ರಮಿಸಿಕೊಳ್ಳುವಂತೆ ನಾವು ಆಹ್ವಾನಿಸುತ್ತೇವೆ.”