ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಂಗಳೂರು MRPL ನಲ್ಲಿ ಭಾರೀ ಸ್ಫೋಟ; ಮುಗಿಲೆತ್ತರಕ್ಕೆ ಆವರಿಸಿದ ಹೊಗೆ

MRPL: ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ ಭಾರೀ ಸ್ಪೋಟ ಸಂಭವಿಸಿದ್ದು, ಆಕಾಶದೆತ್ತರಕ್ಕೆ ಹೊಗೆ ಹಾರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಸ್ಫೋಟದ ತೀವ್ರತೆಗೆ ಪಕ್ಕದಲ್ಲಿಯೇ ಇದ್ದ ವಿಮಾನ ನಿಲ್ದಾಣದ ಗಾಜು ಒಡೆದು ಹೋಗಿದೆ.

ಸಂಗ್ರಹ ಚಿತ್ರ

ಮಂಗಳೂರು ರಿಫೈನರಿ ಆಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್‌ನಲ್ಲಿ (MRPL Blast) ಭಾರೀ ಸ್ಪೋಟ ಸಂಭವಿಸಿದ್ದು, ಆಕಾಶದೆತ್ತರಕ್ಕೆ ಹೊಗೆ ಹಾರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಸ್ಫೋಟದ ತೀವ್ರತೆಗೆ ಪಕ್ಕದಲ್ಲಿಯೇ ಇದ್ದ ವಿಮಾನ ನಿಲ್ದಾಣದ ಗಾಜು ಒಡೆದು ಹೋಗಿದೆ ಎಂದು ತಿಳಿದು ಬಂದಿದೆ. ಮಂಗಳೂರು ತಾಲೂಕಿನ ಜೋಕಟ್ಟೆ ಗ್ರಾಮದ ಬಳಿ ಇರುವ MRPL ಈ ಘಟನೆ ಸಂಭವಿಸಿದೆ.

ಸ್ಫೋಟದ ಶಬ್ದದಿಂದಾಗಿ ಜೋಕಟ್ಟೆ ಪಂಚಾಯತ್ ಕಟ್ಟಡ ಸಹಿತ ಮನೆಗಳು ಕಂಪಸಿವೆ. ಬಾಗಿಲು, ಕಿಟಕಿಗಳ ಗಾಜುಗಳು ಹಾನಿಗೀಡಾಗಿವೆ. ಆಕಾಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ಸುತ್ತಮುತ್ತಲಿನ ವಸತಿ ಪ್ರದೇಶ ಮಾತ್ರವಲ್ಲದೆ ಕಿಲೋ ಮೀಟರ್ ಗಟ್ಟಲೆ ಏರಿಯಾಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಕಾರ್ಖಾನೆಯ ಒಳಗಡೆಯೇ ಭಾರೀ ಪ್ರಮಾಣದ ಸ್ಪೋಟ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಪೈಪ್‌ಲೈನ್ ಒಡೆದಿದೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಯಲ್ಲಿ ಸಾವು ನೋವುಗಳಾಗಿರುವ ಮತ್ತು ಈ ಸ್ಫೋಟಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಈ ಹಿಂದೆಯೂ MRPLನಲ್ಲಿ ಈ ರೀತಿಯ ಘಟನೆಯಾಗಿತ್ತು. 2025 ರಲ್ಲಿ ಟ್ಯಾಂಕ್ ಪ್ಲಾಟ್‌ಫಾರ್ಮ್‌ ಮೇಲ್ಭಾಗದಲ್ಲಿ ತಪಾಸಣೆ ನಡೆಸುತ್ತಿದ್ದಾಗ ಅತ್ಯಂತ ಅಪಾಯಕಾರಿ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಾಗಿತ್ತು. ಘಟನೆಯಲ್ಲಿ ಇಬ್ಬರು ಮೃತ ಪಟ್ಟಿದ್ದರು.

ಮೂತ್ರದಿಂದ ಯೂರಿಯಾ ತೆಗೆದು ಬಾಂಬ್ ತಯಾರಿ? ರೆಡ್‌ಫೋರ್ಟ್ ಸ್ಫೋಟದ ಬಗ್ಗೆ NIA ಸ್ಫೋಟಕ ಮಾಹಿತಿ!

2012 ರಲ್ಲಿ ಸಲ್ಫರ್ ರಿಕವರಿ ಯುನಿಟ್ ಸಮೀಪ ವೆಲ್ಡಿಂಗ್ ಕೆಲಸ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಿಡಿ ತಗುಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಓರ್ವ ಕಾರ್ಮಿಕ ಸಾವನ್ನಪ್ಪಿದ್ದ. ಅದೇ ವರ್ಷ ಫೇಸ್-III ರ ಪವರ್ ಪ್ಲಾಂಟ್‌ನಲ್ಲಿ ಸ್ಟೀಮ್ ಪೈಪ್‌ಲೈನ್ ಅಧಿಕ ಒತ್ತಡದಿಂದಾಗಿ ಒಡೆದು ಸ್ಪೋಟಗೊಂಡಿತ್ತು. ಈ ದುರಂತದಲ್ಲಿ ಸುಮಾರು 7 ಜನ ಕಾರ್ಮಿಕರು ತೀವ್ರವಾಗಿ ಗಾಯಗೊಂಡಿದ್ದರು.

Vishakha Bhat Heggar

View all posts by this author