ಮಂಗಳೂರು: ಭಾರತದ ಅತಿದೊಡ್ಡ ಮತ್ತು ಅತ್ಯಂತ ಜನಪ್ರಿಯ ಸೈಕಲ್ ಪ್ರವಾಸವಾದ ಟೂರ್ ಆಫ್ ನೀಲಗಿರೀಸ್ನ್ 16ನೇ ಆವೃತ್ತಿ ಈ ಬಾರಿ ಮಂಗಳೂರಿನಿಂದ ಆರಂಭವಾಗಲಿದೆ. ಡಿ.14 ರಿಂದ 20ರವರೆಗೆ ನಡೆಯುವ ಈ ಯಾತ್ರೆಯಲ್ಲಿ 110 ಸೈಕ್ಲಿಸ್ಟ್ಗರಳು ಕರ್ನಾಟಕ, ಕೇರಳ ಮತ್ತು ತಮಿಳು ನಾಡಿನ ರಮಣೀಯ ಪರಿಸರದ ಮೂಲಕ 700ಕ್ಕೂ ಅಧಿಕ ಕಿಲೋಮೀಟರ್ ದೂರ ಸಂಚರಿಸು ವರು.
ಡಿಸೆಂಬರ್ 14 ರಂದು ಮಂಗಳೂರಿನ ಸಮ್ಮರ್ ಸ್ಯಾಂಡ್ಸ್ ಬೀಚ್ ರೆಸಾರ್ಟ್ನಿಂಂದ ಪ್ರಾರಂಭವಾಗುವ ಯಾತ್ರೆಯಲ್ಲಿ ಸೈಕ್ಲಿಸ್ಟ್ಗದಳು ವಿರಾಜಪೇಟೆ, ಸುಲ್ತಾನ್ ಬತ್ತೇರಿಯ ಮೂಲಕ 3ನೇ ದಿನ ಉದಕ ಮಂಡಲಂ (ಊಟಿ) ತಲುಪುತ್ತಾರೆ. ಒಂದು ದಿನದ ವಿಶ್ರಾಂತಿಯ ನಂತರ, 5, 6 ಮತ್ತು 7 ನೇ ದಿನ ಗಳಲ್ಲಿ ಸೈಕ್ಲಿಸ್ಟ್ಗವಳು ಊಟಿಯ ಅದ್ಭುತ ಹೊರವಲಯದಲ್ಲಿ 3 ವಿಭಿನ್ನ ಲೂಪ್ಗ ಳಲ್ಲಿ ಪೆಡಲ್ ಮಾಡಲಿದ್ದು, ಡಿಸೆಂಬರ್ 20 ರಂದು ಊಟಿಯಲ್ಲಿ ಕೊನೆಗೊಳ್ಳುತ್ತದೆ ಎಂದು ಸಹ-ಸಂಸ್ಥಾಪಕ ದೀಪಕ್ ಮಾಜಿಪಾಟೀಲ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Kassia Bangalore: ಕಾಸಿಯಾದಲ್ಲಿ ರಾಜ್ಯೋತ್ಸವ ಹಿನ್ನೆಲೆ ಶಾಲಾ ಮಕ್ಕಳಿಗೆ ಪ್ರಬಂಧ, ಚಿತ್ರಕಲಾ ಸ್ಪರ್ಧೆ
ಈ ಮೊದಲು ಬೆಂಗಳೂರು ಹಾಗೂ ಮೈಸೂರಿನಿಂದ ಆರಂಭವಾಗುತ್ತಿದ್ದ ಈ ಜನಪ್ರಿಯ ಯಾತ್ರೆ ಈ ಬಾರಿ ಮೊದಲ ಬಾರಿಗೆ ಮಂಗಳೂರಿನಿಂದ ಚಾಲನೆಗೊಳ್ಳುತ್ತಿದೆ. ಟಿಎಫ್ಎ ನ್ನ ಲ್ಲಿ 9 ಮಹಿಳೆಯರು ಮತ್ತು 18 ವಿದೇಶಿ ಸೈಕ್ಲಿಸ್ಟ್ಗಎಳು ಸೇರಿದಂತೆ 110 ಭಾಗವಹಿಸುವರು. ಸಮುದ್ರಮಟ್ಟದಿಂದ 13500 ಮೀಟರ್ ಎತ್ತರಕ್ಕೆ ಪ್ರಯಾಣ ಕೈಗೊಳ್ಳುವುದು ವಿಶೇಷ. ಪ್ರವಾಸದ ಉದ್ದಕ್ಕೂ ಸೈಕ್ಲಿಸ್ಟ್ಗ್ಳಿಗೆ 53 ಮಂದಿ ಬೆಂಬಲ ಸಿಬ್ಬಂದಿ ಇರುತ್ತಾರೆ. ಕರ್ನಾಟಕ, ತಮಿಳುನಾಡು, ಕೇರಳ, ಗುಜರಾತ್, ಮಿಜೋ ರಾಂ, ಮಹಾರಾಷ್ಟ್ರ, ಎನ್ಸಿರಆರ್, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ಸೈಕ್ಲಿಸ್ಟ್ಗುಳು ಈ ಬಾರಿ ಭಾಗವಹಿಸುತ್ತಿದ್ದು, ಡೆನ್ಮಾರ್ಕ್, ಐಲೆರ್ಂಡ್, ಇಟಲಿ, ಸಿಂಗಾಪುರ, ಯುಎಇ, ಬ್ರಿಟನ್ ಮತ್ತು ಅಮೆರಿಕದ ಯಾತ್ರಿಗಳು ಇದ್ದಾರೆ.
ಮೂರು ಪ್ರಸಿದ್ಧ ವನ್ಯಜೀವಿ ಅಭಯಾರಣ್ಯಗಳು ಮತ್ತು ನೀಲಗಿರಿ ಜಿಲ್ಲೆಯ ಪ್ರಾಚೀನ ಗ್ರಾಮಾಂತರ ವನ್ನು ಒಳಗೊಂಡಂತೆ ನೀಲಗಿರಿ ಜೀವಗೋಳದ ಮೂಲಕ ಸೈಕ್ಲಿಂಗ್ ಮಾಡುವ ರೋಮಾಂಚನವು ಪ್ರವಾಸದ ಪ್ರಮುಖ ಅಂಶವಾಗಿದೆ. ಈ ಯಾತ್ರೆ ಭಾರತವನ್ನು ಜಾಗತಿಕ ಸೈಕ್ಲಿಂಗ್ ನಕ್ಷೆಯಲ್ಲಿ ಇರಿಸಿದ್ದು, ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರೀತಿಯ ಸೈಕಲ್ ಪ್ರವಾಸವಾಗಿ ಹೊರ ಹೊಮ್ಮಿದೆ ಎಂದು ಪ್ರಕಟಣೆ ವಿವರಿಸಿದೆ.