ಭಾರತದ ಅತಿದೊಡ್ಡ ಕೈಮಗ್ಗ ರಗ್ ಮತ್ತು ಕಾರ್ಪೆಟ್ ಬ್ರ್ಯಾಂಡ್ ಆದ ಜೈಪುರ ರಗ್ಸ್, ತನ್ನ ಬಹುನಿರೀಕ್ಷಿತ 2026ರ ವಾರ್ಷಿಕ ಮಾರಾಟ ಮೇಳವನ್ನು ಘೋಷಿಸಿದೆ. ಈ ಮೇಳದಲ್ಲಿ ದೇಶಾದ್ಯಂತದ ಗ್ರಾಹಕರಂತೆ ಮಂಗಳೂರಿನ ಗ್ರಾಹಕರು ಕೂಡ ಶೇ. 60ರ ವರೆಗೆ ಭಾರೀ ರಿಯಾಯಿತಿ ಪಡೆಯಬಹುದು.ಈ ವಿಶೇಷ ಮಾರಾಟ ಮೇಳದಲ್ಲಿ ಸುಮಾರು 10,000ಕ್ಕೂ ಅಧಿಕ ಕೈಯಿಂದ ತಯಾರಿಸಿದ ರಗ್ಗಳು ಮತ್ತು ಕಾರ್ಪೆಟ್ಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಲಭ್ಯವಿರಲಿವೆ.
ಕೈಯಿಂದ ಗಂಟು ಹಾಕಿದ ಕಾರ್ಪೆಟ್ಗಳು, ಕೈಯಿಂದ ಟಫ್ಟಿಂಗ್ ಮಾಡಿದ ರಗ್ಗಳು, ಫ್ಲಾಟ್-ವೀವ್ ರಗ್ಗಳು ಮತ್ತು ಸಾಂಪ್ರದಾಯಿಕ ಧುರ್ರಿಗಳು ಸೇರಿದಂತೆ ವಿವಿಧ ಬೆಲೆ, ವಿನ್ಯಾಸ, ಬಣ್ಣ ಮತ್ತು ವಸ್ತುಗಳಲ್ಲಿ ಆಯ್ಕೆಗಳು ಲಭ್ಯವಿವೆ.ಗ್ರಾಹಕರು ಜೈಪುರ ರಗ್ಸ್ನ ಅತ್ಯಂತ ಜನಪ್ರಿಯ ಮತ್ತು ಪ್ರಶಸ್ತಿ ವಿಜೇತ ಸಂಗ್ರಹಗಳಾದ - ನೇಕಾರರ ಸ್ವಂತ ಕಥೆ ಮತ್ತು ಕಲ್ಪನೆಯನ್ನು ಪ್ರತಿಬಿಂಬಿಸುವ ಮಂಚಹಾ (Manchaha), ಬ್ರಹ್ಮಾಂಡದ ಅದ್ಭುತಗಳನ್ನು ಬಿಂಬಿಸುವ ಬ್ರಹ್ಮಾಂಡ್ (Brahmand), ಪ್ರಾಣಿಗಳ ಚಿತ್ರಣವಿರುವ ಜಾನ್ವರ್ (Jaanwar), ಕವಿತೆಯಿಂದ ಪ್ರೇರಿತವಾದ ಕವಿ (Kavi) ಮತ್ತು ಆಧುನಿಕ ವಿನ್ಯಾಸದ ಕನ್ಕಾಕ್ಷನ್ (Concoction) ಸಂಗ್ರಹಗಳನ್ನು ಈ ಮೇಳದಲ್ಲಿ ಕಾಣಬಹುದಾಗಿದೆ.ಈ ವರ್ಷದ ಮೇಳವು ಕೇವಲ ಮಾರಾಟಕ್ಕೆ ಸೀಮಿತವಾಗಿಲ್ಲ, ಬದಲಾಗಿ ಸಾಮಾಜಿಕ ಬದ್ಧತೆಯನ್ನು ಹೊಂದಿದೆ.
ಪ್ರತಿ ರಗ್ ಮಾರಾಟದಿಂದ ಬರುವ ಆದಾಯದ ಒಂದು ಭಾಗವನ್ನು ಗ್ರಾಮೀಣ ಭಾರತದ ಬಾಲಕಿಯರಿಗಾಗಿ ಇರುವ ‘ಸೈಕಲ್ ನಿಧಿ’ಗೆ ನೀಡಲಾಗುತ್ತದೆ. ಪ್ರತಿದಿನ ಶಾಲೆಗೆ ಹೋಗಲು ಹಲವು ಕಿಲೋಮೀಟರ್ ದೂರ ನಡೆದು ಹೋಗುವ ಬಾಲಕಿಯರಿಗೆ ಸೈಕಲ್ ಒದಗಿಸುವ ಮೂಲಕ ಅವರ ಶಿಕ್ಷಣ ಮುಂದುವರಿಸಲು ಸಹಾಯ ಮಾಡುವುದು ಈ ಉಪಕ್ರಮದ ಮುಖ್ಯ ಉದ್ದೇಶವಾಗಿದೆ.
ಈ ಕುರಿತು ಮಾತನಾಡಿದ ಜೈಪುರ ರಗ್ಸ್ನ ವ್ಯವಸ್ಥಾಪಕ ನಿರ್ದೇಶಕ ಯೋಗೇಶ್ ಚೌಧರಿ, “ಒಂದು ಸೈಕಲ್ನಂತಹ ಸಣ್ಣ ಸಹಾಯವೂ ಗ್ರಾಮೀಣ ಬಾಲಕಿಯ ಶಿಕ್ಷಣದಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ನಾವು ನಂಬುವುದು ಕೇವಲ ವ್ಯಾಪಾರವಲ್ಲ, ಜನರ ಬದುಕಿಗೆ ಮೌಲ್ಯ ಸೇರಿಸುವ ಜವಾಬ್ದಾರಿಯುತ ವ್ಯಾಪಾರವನ್ನು. ಒಂದು ರಗ್ ಮನೆಯ ಅಂದವನ್ನು ಹೆಚ್ಚಿಸಿದರೆ, ಒಂದು ಸೈಕಲ್ ಬಾಲಕಿಯ ಭವಿಷ್ಯವನ್ನು ರೂಪಿಸುತ್ತದೆ,” ಎಂದರು.
ಮೊದಲ ಬಾರಿಗೆ ರಗ್ ಖರೀದಿಸುವವರಿಂದ ಹಿಡಿದು ಒಳಾಂಗಣ ವಿನ್ಯಾಸದಲ್ಲಿ ಆಸಕ್ತಿ ಇರುವವ ರವರೆಗೆ ಎಲ್ಲರಿಗೂ ಈ ಮೇಳವು ಉತ್ತಮ ಅವಕಾಶವಾಗಿದೆ ಜೈಪುರ ರಗ್ಸ್ ಬಗ್ಗೆ: 40,000ಕ್ಕೂ ಹೆಚ್ಚು ಗ್ರಾಮೀಣ ಕುಶಲಕರ್ಮಿಗಳೊಂದಿಗೆ ಕೆಲಸ ಮಾಡುತ್ತಿರುವ ಜೈಪುರ ರಗ್ಸ್, ಭಾರತೀಯ ಕರಕುಶಲತೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದೆ.