ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dandiya: ಎಲ್ಲೆಡೆ ದಾಂಡಿಯಾ ಮೇನಿಯಾ!

Dandiya: ನವರಾತ್ರಿ/ ದಸರಾದಲ್ಲಿ ನಡೆಯುವ ದಾಂಡಿಯಾ ಪಾರ್ಟಿ, ಡ್ಯಾನ್ಸ್ ಅಥವಾ ದಾಂಡಿಯಾ ನೈಟ್ ಕಾರ್ಯಕ್ರಮಗಳು ಇದೀಗ ಭಾಷೆಯ ಗಡಿ ದಾಟಿ ಎಲ್ಲರನ್ನೂ ಸೆಳೆಯುತ್ತಿದೆ. ಎಲ್ಲಾ ಭಾಷಿಗರನ್ನು ಒಂದೂಗೂಡಿಸುತ್ತಿದೆ. ದಾಂಡಿಯಾ ವಿಶೇಷತೆ ಕುರಿತಂತೆ ಇಲ್ಲಿದೆ ವರದಿ.

ಚಿತ್ರಗಳು: ಸುಗುಣಾ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ಎಲ್ಲಿ ನೋಡಿದರೂ ದಾಂಡಿಯಾ ಮೇನಿಯಾ! ಹೌದು, ದಸರಾ ಸೀಸನ್ ಬಂತೆಂದರೆ ಸಾಕು, ಕನ್ನಡಿಗರಿಗೆ ಗೊಂಬೆ ಹಬ್ಬದ ಸಡಗರ, ಮೈಸೂರಿನಲ್ಲಿಅಂಬಾರಿ ಉತ್ಸವ, ನವರಾತ್ರಿಯಲ್ಲಿ ದುರ್ಗೋತ್ಸವ ಹೀಗೆ ನಾನಾ ಬಗೆಯ ಕಾರ್ಯಕ್ರಮಗಳು ಎಲ್ಲೆಡೆ ಹಂಗಾಮ ಎಬ್ಬಿಸುತ್ತವೆ. ಇನ್ನು ಬೆಂಗಳೂರು ಹಾಗೂ ರಾಜ್ಯದ ಇತರೆಡೆ ನೆಲೆಸಿರುವ ನಾರ್ತ್ ಇಂಡಿಯನ್ಸ್ ಸಂಪ್ರದಾಯ ದಾಂಡಿಯಾಕ್ಕೆ ಸ್ವಾಗತ ಕೋರುತ್ತದೆ. ಅವರವರ ಸಮುದಾಯದ ರೀತಿ ರಿವಾಜಿಗೆ ಅನುಗುಣವಾಗಿ ದಾಂಡಿಯಾ ಕಾರ್ಯಕ್ರಮ ರೂಪುಗೊಳ್ಳುತ್ತವೆ. ಇದು ಅವರ ಸಂಪ್ರದಾಯ ಮಾತ್ರವಲ್ಲ, ಸಂಸ್ಕೃತಿಯ ಪ್ರತಿಬಿಂಬ. ಹೀಗೆ ದಾಂಡಿಯಾ ಆಯಾ ಸಮುದಾಯಕ್ಕೆ ತಕ್ಕಂತೆ ಬದಲಾಗುತ್ತಾ ಎಲ್ಲರಿಗೂ ಪ್ರಿಯವಾಗುವ ರೀತಿಯಲ್ಲಿ ನಡೆಯುತ್ತದೆ ಎನ್ನುತ್ತಾರೆ ದಾಂಡಿಯಾ ಪ್ರೇಮಿ ಪ್ರಿಯಾ.

Dandiya 1

ದಾಂಡಿಯಾಗೂ ಉಂಟು ಡ್ರೆಸ್‌ಕೋಡ್

ದಾಂಡಿಯಾ ಆಡುವವರ ಡ್ರೆಸ್ ಕೋಡ್ ಟ್ರೆಡಿಷನಲ್ ಆಗಿರಬೇಕು. ಯಾವುದೇ ಕಾರಣಕ್ಕೂ ವೆಸ್ಟರ್ನ್ ಡಿಸೈನರ್‌ವೇರ್ ಧರಿಸುವಂತಿಲ್ಲ. ಹಾಗಾಗಿ ಈ ಮೊದಲೇ ಪ್ಲಾನ್ ಮಾಡಿಕೊಂಡಿರಬೇಕು. ಸಲ್ವಾರ್ ಈ ಕಾರ್ಯಕ್ರಮಕ್ಕೆ ಹೊಂದದು. ಗಾಗ್ರ, ಲೆಹೆಂಗಾ ಹಾಗೂ ಅಂಬ್ರೆಲ್ಲಾ ದಾವಣಿ ಲಂಗ ಬೆಸ್ಟ್ ಅಪ್ಷನ್ ಎನ್ನುತ್ತಾರೆ ಡ್ಯಾನ್ಸ್ ಪ್ರೇಮಿ ರಿಯಾ.

Dandiya 2

ಡಿಸ್ಕೊ ದಾಂಡಿಯಾ/ದಾಂಡಿಯಾ ನೈಟ್ಸ್

ಇದು ಸಾಮಾನ್ಯವಾಗಿ ಯುವಕ-ಯುವತಿಯರಿಗೆಂದೇ ಆಚರಿಸುವ ದಾಂಡಿಯಾ ಪಾರ್ಟಿ ಎನ್ನಬಹುದು. ಇಂದಿನ ಜನರೇಷನ್ ಹುಡುಗ-ಹುಡುಗಿಯರಿಗೆ ಪ್ರಿಯವಾಗುವ ಡಿಸ್ಕೊ ಮಿಕ್ಸ್ ಬಾಲಿವುಡ್ ಬೀಟ್‌ಗಳನ್ನು ದಾಂಡಿಯಾ ಜತೆ ಆಡುವಂತೆ ಸೊಗಸಾಗಿ ಕೊರಿಯಾಗ್ರಾಫಿ ಮಾಡಿರುತ್ತಾರೆ. ಪಬ್ ಹಾಗೂ ಡಿಸ್ಕೊ ಥೆಕ್‌ಗಳಲ್ಲಿಇಂತಹ ಕಾರ್ಯಕ್ರಮಗಳು ಆಯೋಜನೆಗೊಂಡಿರುತ್ತವೆ ಎನ್ನುವ ದಾಂಡಿಯಾ ಪ್ರೇಮಿ ರಾಣಿ ಹಾಗೂ ರಾಜನ್ ಪ್ರಕಾರ, ದಾಂಡಿಯಾ ಮನಸ್ಸನ್ನು ಉಲ್ಲಾಸಗೊಳಿಸುತ್ತದಂತೆ.

Dandiya 3

ದಾಂಡಿಯಾ ಪ್ರಿಯರೇ ಗಮನಿಸಿ

  • ಕುಟುಂಬದೊಂದಿಗೆ ಆಚರಿಸುವ ದಾಂಡಿಯಾ ಕಾರ್ಯಕ್ರಮ ಪ್ರಿಫರ್ ಮಾಡುವುದು ಉತ್ತಮ.
  • ಫ್ರೆಂಡ್ಸ್ ಜತೆ ತೆರಳುವ ದಾಂಡಿಯಾ ನೈಟ್‌ಗೆ ಹೋಗುವಾಗ ಎಚ್ಚರಿಕೆ ವಹಿಸಿ.
  • ಆದಷ್ಟೂ ಹೆಚ್ಚು ಜನರಿರುವ ಕಾರ್ಯಕ್ರಮಗಳನ್ನೇ ಪ್ರಿಫರ್ ಮಾಡಿ.
  • ಅಲ್ಲಿನ ಪರ್ಫೆಕ್ಟ್ ಡ್ರೆಸ್‌ಕೋಡ್‌ಗೆ ತಕ್ಕಂತೆ ತೆರಳಿ.
  • ಹೆಚ್ಚು ಬೆಲೆಬಾಳುವ ಆಭರಣಗಳನ್ನು ಧರಿಸಬೇಡಿ.
  • ದಾಂಡಿಯಾ ಡಾನ್ಸ್ ಬಗ್ಗೆ ಒಂದಿಷ್ಟು ತಿಳಿವಳಿಕೆ ಇರಲಿ.
  • ಸಂಜೆ ನಂತರ ನಡೆಯುವ ಈ ಸಮಾರಂಭದಲ್ಲಿ ಜಾಗ್ರತೆ ವಹಿಸುವುದು ಉತ್ತಮ.
  • ದಾಂಡಿಯಾ ಕಾರ್ಯಕ್ರಮಗಳಲ್ಲಿಅಲ್ಕೋಹಾಲ್, ಸ್ಮೋಕಿಂಗ್ ಬ್ಯಾನ್ ಎಂಬುದನ್ನು ಮರೆಯದಿರಿ.‌

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Dasara Holiday Fashion 2025: ದಸರಾ ರಜೆಯ ಮೋಜಿಗೂ ಬಂತು ಹಾಲಿಡೇ ಫ್ಯಾಷನ್ ವೇರ್ಸ್

ಶೀಲಾ ಸಿ ಶೆಟ್ಟಿ

View all posts by this author