ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Davangere News: ದಾವಣಗೆರೆಯಲ್ಲಿ ಮದ್ಯದ ನಶೆಯಲ್ಲಿ ಯುವತಿ ರಂಪಾಟ; ಮಹಿಳಾ ಪಿಎಸ್‌ಐ ಮೇಲೆ ಹಲ್ಲೆ, ವಿಡಿಯೊ ವೈರಲ್!

ದಾವಣಗೆರೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ವೇಳೆ ಪೊಲೀಸರು ಯುವತಿಯನ್ನು ತಡೆದಿದ್ದಾರೆ. ಈ ವೇಳೆ ಬ್ರೆಥಲೈಜರ್ ಮೂಲಕ ಆಲ್ಕೋಹಾಲ್‌ ಸೇವನೆ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಆದರೆ, ಗಾಳಿ ಊದುವುದು ಬಿಟ್ಟು, ಉಸಿರು ಒಳಗೆಳೆದು ಯುವತಿ ನಾಟಕವಾಡಿದ್ದಾಳೆ. ನಂತರ ಪೊಲೀಸರೊಂದಿಗೆ ವಾಗ್ವಾದ ನಡೆಸಿ, ರಸ್ತೆಯಲ್ಲಿ ಹೈಡ್ರಾಮಾ ಮಾಡಿದ್ದಾಳೆ.

ದಾವಣಗೆರೆಯಲ್ಲಿ ಮದ್ಯದ ನಶೆಯಲ್ಲಿ ಯುವತಿ ರಂಪಾಟ; ವಿಡಿಯೊ ವೈರಲ್!

ದಾವಣಗೆರೆಯಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ. -

Prabhakara R
Prabhakara R Jun 26, 2026 9:13 PM

ದಾವಣಗೆರೆ: ನಗರದ ಶಾಮನೂರು ರಸ್ತೆಯಲ್ಲಿ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಯುವತಿಯೊಬ್ಬಳು ಕಂಠಪೂರ್ತಿ ಕುಡಿದು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ ಘಟನೆ (Davangere News) ನಡೆದಿದೆ. ಅತಿಯಾಗಿ ಕುಡಿದು ಯುವತಿ ಥಾರ್ ಕಾರನ್ನು ಅಡ್ಡಾದಿಡ್ಡಿ ಚಲಾಯಿಸುತ್ತಿದ್ದಳು. ಈ ಸಂದರ್ಭ ಡ್ರಿಂಕ್ ಆ್ಯಂಡ್ ಡ್ರೈವ್ (Drink and drive Case) ತಪಾಸಣೆ ಮಾಡುತ್ತಿದ್ದ ಪೊಲೀಸರು, ಕಾರನ್ನು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವತಿ, ಮಹಿಳಾ ಪಿಎಸ್‌ಐಗೆ ಕಾಲಿನಿಂದ ಒದ್ದು, ಹಲ್ಲೆ ಮಾಡಿದ್ದಾಳೆ.

ಡ್ರಿಂಕ್ ಅಂಡ್ ಡ್ರೈವ್ ಪರಿಶೀಲನೆ ವೇಳೆ ಪೊಲೀಸರು ಯುವತಿಯನ್ನು ತಡೆದಿದ್ದಾರೆ. ಈ ವೇಳೆ ಬ್ರೆಥಲೈಜರ್ ಮೂಲಕ ಆಲ್ಕೋಹಾಲ್‌ ಸೇವನೆ ಪತ್ತೆ ಹಚ್ಚಲು ಮುಂದಾಗಿದ್ದಾರೆ. ಆದರೆ, ಗಾಳಿ ಊದುವುದು ಬಿಟ್ಟು, ಉಸಿರು ಒಳಗೆಳೆದು ಯುವತಿ ನಾಟಕವಾಡಿದ್ದಾಳೆ. ಆಗ ಸರಿಯಾಗಿ ಊದಮ್ಮ ಎಂದು ಪೊಲೀಸರು ಹೇಳಿದ್ದಕ್ಕೆ ನಾನು ಊದೋದು ಹಿಂಗೇ ಎಂದು ವಾಗ್ವಾದ ನಡೆಸಿದ್ದಾಳೆ. ರಸ್ತೆಯಲ್ಲಿ ಯುವತಿ ರಂಪಾಟದ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಈ ಕುರಿತು ಯುವತಿಯ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಬೆಂಗಳೂರಿನ ಟ್ರಾಫಿಕ್ ನಡುವೆ ರಾಂಗ್ ಸೈಡ್ ಡ್ರೈವ್ ಮಾಡಿ ದರ್ಪ ತೋರಿದ ಟಿಟಿ ಚಾಲಕ

ಬೆಂಗಳೂರು: ರಾಂಗ್ ಸೈಡ್‌ನಲ್ಲಿ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ ಟಿಟಿ ಚಾಲಕನೊಬ್ಬ ವ್ಯಕ್ತಿಯ ಮೇಲೆಯೇ ಹಲ್ಲೆ ಮಾಡಲು ಮುಂದಾಗಿರುವುದು ಬೆಂಗಳೂರಿನಲ್ಲಿ ನಡೆದಿದೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜೂನ್ 22 ರಂದು ಮಧ್ಯಾಹ್ನ ಚಾಲಕನೊಬ್ಬ ಮೇಖ್ರಿ ವೃತ್ತದಲ್ಲಿ ತಪ್ಪು ಬದಿಯಲ್ಲಿ ಚಾಲನೆ ಮಾಡಿದ್ದು ಇದು ಗಂಭೀರ ಸುರಕ್ಷತಾ ಅಪಾಯವನ್ನುಂಟು ಮಾಡುತ್ತಿತ್ತು. ಚಂದ್ರು ಎಂಬುವವರು ತಮ್ಮ ಕಾರಿನಲ್ಲಿ ಎಡಕ್ಕೆ ತಿರುವು ಪಡೆದು ರಸ್ತೆಯಲ್ಲಿ ಸರಿಯಾದ ರಸ್ತೆ ಯಲ್ಲೆ ಡ್ರೈವ್ ಮಾಡುತ್ತಿದ್ದರು.



ಈ ವೇಳೆ ಎದುರುಗಡೆಯಿಂದ KA01AG1283 ನೋಂದಣಿ ಸಂಖ್ಯೆಯ ಟೆಂಪೋ ಟ್ರಾವೆಲರ್ ತಪ್ಪು ದಿಕ್ಕಿನಲ್ಲಿ ಬಂದು ಎರಡು ವಾಹನಗಳು ಮುಖಾಮುಖಿಯಾಗಿವೆ. ಕಾರು ಚಾಲಕ ತಾನು ಸರಿಯಾದ ರಸ್ತೆಯಲ್ಲಿದ್ದ ಕಾರಣ ಹಿಂದೆ ಸರಿಯಲು ನಿರಾಕ ರಿಸಿದ್ದಾರೆ. ಟೆಂಪೊ ಚಾಲಕ ತನ್ನದೇ ತಪ್ಪಿದ್ದರೂ ಕೋಪಗೊಂಡು ವಾಹನದಿಂದ ಕೆಳಗಿಳಿದು ಬಂದು ಕಾರು ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ಇಡೀ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.