ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚನ್ನಗಿರಿಯಲ್ಲಿ ಘೋರ ಘಟನೆ; ಕುರುಕಲು ತಿಂಡಿ ಪ್ಯಾಕೆಟ್‌ನಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಬಾಲಕಿ ಸಾವು!

ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆಯಲ್ಲಿ ಘಟನೆ ನಡೆದಿದೆ. ಮನೆಯ ಪಕ್ಕದ ಅಂಗಡಿಯಲ್ಲಿ ತಿಂಡಿ ಪೊಟ್ಟಣ ಖರೀದಿಸಿದ್ದ ಬಾಲಕಿ ಅದನ್ನು ತಿನ್ನುವಾಗ ಪೊಟ್ಟಣದಲ್ಲಿದ್ದ ಆಟಿಕೆಯನ್ನು ನುಂಗಿದೆ.‌ ಪರಿಣಾಮ ಗಂಟಲಿನಲ್ಲಿ ಪ್ಲಾಸ್ಟಿಕ್ ಬಾಲ್ ರೀತಿಯ ಆಟಿಕೆ ಸಿಲುಕಿದೆ. ತಕ್ಷಣ ಅದನ್ನು ಹೊರತೆಗೆಯಲು ಕುಟುಂಬಸ್ಥರು ಹರಸಾಹಸಪಟ್ಟರೂ ಫಲ ನೀಡದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ.

ಕುರುಕಲು ತಿಂಡಿ ಪ್ಯಾಕೆಟ್‌ನಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಬಾಲಕಿ ಸಾವು!

-

Prabhakara R
Prabhakara R Nov 27, 2026 11:00 PM

ದಾವಣಗೆರೆ: ಕುರುಕಲು ತಿಂಡಿ ಪ್ಯಾಕೆಟ್‌ನಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆಯಲ್ಲಿ ನಡೆದಿದೆ. ಅನೈರಾ (04) ಮೃತ ಮಗು.

ಪೋಷಕರಿಂದ ಮಗು 5 ರೂ. ಪಡೆದು ಮನೆಯ ಪಕ್ಕದ ಅಂಗಡಿಯಲ್ಲಿ ತಿಂಡಿ ಪೊಟ್ಟಣ ಖರೀದಿಸಿದ್ದಳು. ತಿಂಡಿ ತಿನ್ನುವಾಗ ಪೊಟ್ಟಣದಲ್ಲಿದ್ದ ಆಟಿಕೆ ಮಗು ನುಂಗಿದೆ.‌ ಪರಿಣಾಮ ಗಂಟಲಿನಲ್ಲಿ ಪ್ಲಾಸ್ಟಿಕ್ ಬಾಲ್ ರೀತಿಯ ಆಟಿಕೆ ಸಿಲುಕಿದೆ. ತಕ್ಷಣ ಅದನ್ನು ಹೊರತೆಗೆಯಲು ಕುಟುಂಬಸ್ಥರು ಹರಸಾಹಸಪಟ್ಟರೂ ಫಲ ನೀಡದ ಹಿನ್ನೆಲೆಯಲ್ಲಿ ಚನ್ನಗಿರಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ.

ಚನ್ನಗಿರಿ ಪೊಲೀಸ್ ಠಾಣಾ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ಧಾರೆ. ಸದ್ಯಕ್ಕೆ ಮೃತ ಮಗುವಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್​ ಇನ್ಸ್​ಪೆಕ್ಟರ್​ ರವೀಶ್ ಮಾಹಿತಿ ನೀಡಿದ್ದಾರೆ.

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಪಕ್ಕ ಮಹಿಳೆಯ ಶವವನ್ನು ಪಾರ್ಸೆಲ್‌ ರೀತಿ ಮೂಟೆ ಕಟ್ಟಿ ಬಿಸಾಡಿದ ದುಷ್ಕರ್ಮಿಗಳು!

ಸ್ಥಳೀಯರಾದ ತನ್ವೀರ್ ಮಾತನಾಡಿ, "ಮಗು ಕುರುಕಲು ತಿಂಡಿ ಪೊಟ್ಟಣದಲ್ಲಿ ಉಚಿತವಾಗಿ ಬರುವ ಪ್ಲಾಸ್ಟಿಕ್ ಮಾದರಿಯ ಪುಟ್ಟ ಬಾಲ್​ನಂತಹ ಆಟಿಕೆ ನುಂಗಿದ್ದಳು. ಆಟಿಕೆ ಆಕೆಯ ಗಂಟಲಿನಲ್ಲಿ ಸಿಲುಕಿತ್ತು. ಆದ್ದರಿಂದ ಮಗು ಮೃತಪಟ್ಟಿರುವುದು ಸತ್ಯ. ಈ ಘಟನೆಯಿಂದ ಇತರೆ ಮಕ್ಕಳ ಪೋಷಕರು ಎಚ್ಚೆತ್ತುಕೊಂಡು ಈ ರೀತಿಯ ಆಟಿಕೆ ಇರುವ ತಿಂಡಿಗಳ ಪೊಟ್ಟಣಗಳನ್ನು ಕೊಡಿಸಬಾರದು ಎಂದು ಮನವಿ ಮಾಡಿದ್ದಾರೆ.